Sunday, August 31, 2025
HomeUncategorizedಸಿದ್ದರಾಮಯ್ಯ 'ಡಿಕೆಶಿ'ಯನ್ನು ತುಳಿಯುತ್ತಲೇ ಬಂದಿದ್ದಾರೆ: ಬಿಜೆಪಿ

ಸಿದ್ದರಾಮಯ್ಯ ‘ಡಿಕೆಶಿ’ಯನ್ನು ತುಳಿಯುತ್ತಲೇ ಬಂದಿದ್ದಾರೆ: ಬಿಜೆಪಿ

ಬೆಂಗಳೂರು : ಕಣ್ಣರಿಯದಿದ್ದರೂ ಕರುಳರಿಯದೇ ಇರುವುದೇ? ಡಿಕೆ ಶಿವಕುಮಾರ್ ವಿರುದ್ಧ ಸಿದ್ದರಾಮಯ್ಯ ಅಲ್ಲಲ್ಲೇ ಕತ್ತಿ ಮಸೆಯುತ್ತಾರೆ ಎಂದು ಡಿಕೆಶಿ ಅವರ ತಾಯಿ ಅಂದೇ ಹೇಳಿದ್ದರು. ಸಿದ್ದರಾಮಯ್ಯ ಜೊತೆಗೆ ಕೈ‌ ಮಿಲಾಯಿಸುವಾಗ ಹೆತ್ತ ತಾಯಿ ನೀಡಿರುವ ಎಚ್ಚರಿಕೆಯನ್ನು ಸ್ವಲ್ಪ ಗಮನಿಸಿ ಎಂದು ರಾಜ್ಯ ಬಿಜೆಪಿ ಐಟಿ ಸೆಲ್ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕುಟುಕಿದೆ.

ಡಿಕೆ ಶಿವಕುಮಾರ್ ಮೇಲೆ ಐಟಿ ದಾಳಿ‌ ನಡೆದ ಸಂದರ್ಭದಲ್ಲಿ ಅವರ ತಾಯಿ ಆಡಿದ ಮಾತಿನ ವಿಡಿಯೋ ಮೂಲಕ ಸರಣಿ ಟ್ವೀಟ್ ಮಾಡಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಕಾಲೆಳೆದಿದೆ. ಡಿಕೆಶಿ ಅವರೇ, ನಿಮ್ಮ ವಿರುದ್ಧ ಮಸಲತ್ತು ನಡೆಸಿದವರು ಯಾರು ಎಂದು ತಾಯಿ ಸ್ಪಷ್ಟವಾಗಿ ಹೇಳಿದ್ದಾರೆ. ಹೆತ್ತವರ ಒಡಲ ಉರಿ ಸುಳ್ಳು ಹೇಳುವುದಿಲ್ಲ. ನನ್ನ ಮಗ ಮುಖ್ಯಮಂತ್ರಿಯಾಗುತ್ತಾನೆ ಎಂದು ಸಿದ್ದರಾಮಯ್ಯ ಒಳಗೊಳಗೆ ಮಸಲತ್ತು ನಡೆಸುತ್ತಾರೆ ಎಂದು ತಾಯಿ ಈ ಹಿಂದೆಯೇ ನೋವು ತೋಡಿಕೊಂಡಿದ್ದಾರೆ. ಈಗ ಅದೇ ಸತ್ಯವಾಗುತ್ತಿದೆ ಎಂದಿದ್ದಾರೆ.

ಅಲ್ಲದೇ ತನ್ನ ಕೆಲಸವಾಗಬೇಕಾದರೆ ಸಿದ್ದರಾಮಯ್ಯ ನನ್ನ ಮಕ್ಕಳನ್ನು ಬಳಸಿಕೊಳ್ಳುತ್ತಾರೆ. ಆಮೇಲೆ ದ್ರೋಹ ಬಗೆಯುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷರ ತಾಯಿ ಹೇಳಿದ ಮಾತು ಮತ್ತೆ ನಿಜವಾಗಲಿದೆ. ಸಿದ್ದರಾಮೋತ್ಸವದ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರನ್ನು ಸಿದ್ದರಾಮಯ್ಯ ಬಣ ಹರಕೆಯ ಕುರಿಯಾಗಿಸಲಿದೆ ಎಂದು ವ್ಯಂಗ್ಯವಾಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments