Friday, August 29, 2025
HomeUncategorizedನಗರದ ವಿದ್ಯುತ್ ಕಂಬಕ್ಕೆ ಸುತ್ತಿಕೊಂಡ ಬಳ್ಳಿ: ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಜನ

ನಗರದ ವಿದ್ಯುತ್ ಕಂಬಕ್ಕೆ ಸುತ್ತಿಕೊಂಡ ಬಳ್ಳಿ: ಜೀವ ಕೈಯಲ್ಲಿ ಹಿಡಿದು ಸಂಚರಿಸುವ ಜನ

ಚಾಮರಾಜನಗರ : ಜಿಲ್ಲಾ ಕೇಂದ್ರದ ವಿವೇಕ ನಗರ ಬಡಾವಣೆಯಲ್ಲಿರುವ ವಿದ್ಯುತ್ ಕಂಬಕ್ಕೆ ಬಳ್ಳಿಗಳು ಸುತ್ತಿಕೊಂಡಿದ್ದರು ಕೆಇಬಿ ಅಧಿಕಾರಿಗಳು ನಿರ್ಲಕ್ಷ ವಹಿಸಿರುವ ಆರೋಪ ಕೇಳಿಬಂದಿದೆ.

ಬಡಾವಣೆಯ ಮುಖ್ಯ ಬೀದಿಯಲ್ಲಿರುವ ಕಂಬ ಕಾಣಿಸದಂತೆ ಇಡೀ ಕಂಬಕ್ಕೆ ಬಳ್ಳಿಗಳು ಆವರಿಸಿಕೊಂಡಿದ್ದು ದೂರು ನೀಡಿದರೂ ಅಧಿಕಾರಿಗಳು ಯಾವುದೇ ಸ್ಪಂದನೆ ಮಾಡುತ್ತಿಲ್ಲ ಎಂದು ನಿವಾಸಿಗಳು ಕಿಡಿಕಾರಿದ್ದಾರೆ.

ನಿರಂತರ ಮಳೆ ಸುರಿದ ಪರಿಣಾಮ ಬಳ್ಳಿಗಳು ನೆಲದಿಂದ ವಿದ್ಯುತ್ ಕಂಬದ ತಂತಿವರೆಗೂ ಚಾಚಿಕೊಂಡು ಕಂಬ ಸುತ್ತಿಕೊಂಡಿದೆ. ಮಳೆ ಪರಿಣಾಮ ಕಂಬದಲ್ಲಿ ಗ್ರೌಂಡ್ ಆಗುತ್ತಿದೆ ಎಂದು ಸ್ಥಳೀಯರು ಆತಂಕ ಹೊರಹಾಕಿದ್ದಾರೆ. ಮಳೆ ಬಂದಾಗ ವಿದ್ಯುತ್ ಕಂಬದ ಬಳಿ ಪಾದಾಚಾರಿಗಳು ಜೀವ ಕೈಯಲ್ಲಿ ಹಿಡಿದುಕೊಂಡು ಸಂಚರಿಸುವ ಪರಿಸ್ಥಿತಿ ಉಂಟಾಗಿದ್ದು ಇನ್ನಾದರೂ ಸೆಸ್ಕಾಂ ಸಿಬ್ಬಂದಿ ವಿದ್ಯುತ್ ಕಂಬಕ್ಕೆ ಹಬ್ಬಿರುವ ಬಳ್ಳಿನ ತೆರವುಗೊಳಿಸಬೇಕು ಎಂದು ನಿವಾಸಿಗಳು ಒತ್ತಾಯಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments