Wednesday, August 27, 2025
Google search engine
HomeUncategorizedಬಿಬಿಎಂಪಿ ಚುನಾವಣೆ ಮೇಲೆ ಕಾಂಗ್ರೆಸ್ ಕಣ್ಣು

ಬಿಬಿಎಂಪಿ ಚುನಾವಣೆ ಮೇಲೆ ಕಾಂಗ್ರೆಸ್ ಕಣ್ಣು

ಬೆಂಗಳೂರು : ಸಿಲಿಕಾನ್​ ಸಿಟಿ ಆಡಳಿತ ಚುಕ್ಕಾಣಿ ಹಿಡಿಯಲು ಪ್ಲಾನ್ ಮಾಡಿದ್ದು, ಮತದಾರರನ್ನು ಸೆಳೆಯಲು ಕಾಂಗ್ರೆಸ್ ಫುಲ್​ ವರ್ಕೌಟ್ ಮಾಡುತ್ತಿದೆ.

ನಗರದ ಒಂದರಲ್ಲೆ ೨೮ ವಿಧಾನಸಭಾ ಕ್ಷೇತ್ರಗಳು ಬರಲಿವೆ. ಬಿಬಿಎಂಪಿ ಅಧಿಕಾರ ಹಿಡಿದರೆ ೧೮ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲೋ ಲೆಕ್ಕಚಾರದ ಹಿನ್ನಲೆಯಲ್ಲಿ ಬಿಬಿಎಂಪಿ ಚುನಾವಣೆಗೆ ಕೈ ಪಡೆ ತಯಾರಿ ನಡೆಸಿದೆ. ಬೆಂಗಳೂರು ಮತದಾರರನ್ನು ಸೆಳೆಯಲು ವರ್ಕೌಟ್ ಮಾಡುತ್ತಿದ್ದು, ಮೂಲಭೂತ ಸೌಕರ್ಯ, ಟ್ರಾಫಿಕ್ ಕಿರಿಕಿರಿಗೆ ಮುಕ್ತಿ, ಕಾವೇರಿ ನೀರು ಸಮರ್ಪಕ ಪೂರೈಕೆಗೆ ಹೆಚ್ಚಿನ ಆಧ್ಯತೆ ನೀಡಲಾಗಿದೆ.

ಇನ್ನು, ರಾಜಾಕಾಲುವೆ ದುರಸ್ತಿಮಳೆ ಬಂದಾಗ ಬೆಂಗಳೂರು ಬಚಾವ್ ಆಗಿದ್ದು, ಸ್ಲಂಗಳಿಗೆ ತಿಲಾಂಜಲಬಡ, ಮಧ್ಯಮ ವರ್ಗದವರಿಗೆ ಕೈಗೆಟುಕೋ ದರದಲ್ಲಿ ವಸತಿ, ನಿವೇಶನ, ಪೌರಕಾರ್ಮಿಕರಿಗೆ ಉತ್ತೇಜನ, ರಸ್ತೆ ರಿಪೇರಿ, ಹೊಸ ಮೆಟ್ರೋ ಲೈನ್, ಬೆಂಗಳೂರು ಗುಂಡಿ ಮುಕ್ತಗೊಳಿಸಿ ರಸ್ತೆ ಅಭಿವೃದ್ದಿ, ಮಹಿಳೆಯರ ಸ್ವಾವಲಂಬಿಗೆ ಉತ್ತೇಜನ, ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಜಾರಿಗೊಳಿಸೋ ಭರವಸೆ ನೀಡುತ್ತಿದ್ದಾರೆ.

ಅದಲ್ಲದೇ, ಬೆಂಗಳೂರು ಘೋಷಣೆ ಹೆಸರಿನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಲು ಸಿದ್ದತೆ ನಡೆಸಲಾಗಿದ್ದು, ಆಗಸ್ಟ್ ೧೧ ನೇ ತಾರೀಖು ಬೆಂಗಳೂರು ಘೋಷಣೆ ಬಿಡುಗಡೆ ಮಾಡಿ ಮತದಾರರ ಸೆಳೆಯಲು ಕೈ ಪಡೆ ಪ್ಲಾನ್ ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments