Friday, August 29, 2025
HomeUncategorizedKSRTCಗೂ ಎಂಟ್ರಿ ಕೊಡಲಿವೆ ದುಬಾರಿ ಎಲೆಕ್ಟ್ರಿಕ್ ಬಸ್​ಗಳು..!

KSRTCಗೂ ಎಂಟ್ರಿ ಕೊಡಲಿವೆ ದುಬಾರಿ ಎಲೆಕ್ಟ್ರಿಕ್ ಬಸ್​ಗಳು..!

ಬೆಂಗಳೂರು : ಬಿಎಂಟಿಸಿಯಂತೆ KSRTC ಕೂಡ ಎಲೆಕ್ಟ್ರಿಕ್ ಬಸ್​​ಗಳನ್ನ ರಸ್ತೆಗಿಳಿಸಲು ತೀರ್ಮಾನಿಸಿದೆ. ಈ ಸಂಬಂಧ ಈಗಾಗಲೇ ಟೆಂಡರ್ ಕರೆದು 50 ಬಸ್​ಗಳಿಗೆ ಆರ್ಡರ್ ಮಾಡಿರೋ ನಿಗಮ, ಶೀಘ್ರದಲ್ಲೇ ಬಸ್​​ಗಳು ಕೆಎಸ್ಆರ್ಟಿಸಿಗೆ ಸೇರ್ಪಡೆ ಆಗಲಿವೆ. ನಿಗಮಕ್ಕೆ ಬರಲಿರುವ ಬಸ್​ಗಳು ಬೆಂಗಳೂರು-ಮೈಸೂರು ನಡುವೆ ಸಂಚರಿಸಲಿದೆ. ಮೈಸೂರಿಗೆ ಮಾತ್ರವಲ್ಲದೆ, ತುಮಕೂರು, ಕೋಲಾರ, ಹಾಸನ ಸೇರಿ ಬೆಂಗಳೂರಿನಿಂದ 200 ಕಿ.ಮೀ ವ್ಯಾಪ್ತಿಯಲ್ಲಿನ ಪ್ರಮುಖ ನಗರಗಳಿಗೂ ಎಲೆಕ್ಟ್ರಿಕ್‌ ಬಸ್‌ ಸೇವೆ ಕಲ್ಪಿಸಲು ನಿಗಮ ಉದ್ದೇಶಿಸಿದೆ.

ಎಲೆಕ್ಟ್ರಿಕ್‌ ಬಸ್‌ಗಳು ಪರಿಸರ ಸ್ನೇಹಿಯಾಗಿದ್ದು, ನಿರ್ವಹಣೆ ಮತ್ತು ಕಾರ್ಯಾಚರಣೆ ವೆಚ್ಚ ಕೂಡ ಕಡಿಮೆ. ಅಂತರ ನಗರ ಸೇವೆಗೆ ಎಲೆಕ್ಟ್ರಿಕ್ ಬಸ್​ಗಳನ್ನ ಖರೀದಿಸಲು ಕೇಂದ್ರ ಅನುದಾನ ನೀಡಿದೆ. ನಿಗಮದ ಸಿಬ್ಬಂದಿಗೆ ಎಲೆಕ್ಟ್ರಿಕ್‌ ಬಸ್‌ಗಳ ನಿರ್ವಹಣೆ ತರಬೇತಿ ನೀಡಿ ಪ್ರಮುಖ ಡಿಪೋಗಳಲ್ಲಿ ಬಸ್‌ಗಳ ಚಾರ್ಜಿಂಗ್‌ ಪಾಯಿಂಟ್‌ ವ್ಯವಸ್ಥೆ ಮಾಡಿ, ಬಸ್ ಸೌಲಭ್ಯ ಕಲ್ಪಿಸಲಾಗುತ್ತದೆ.

ವಿದ್ಯುತ್ ಚಾಲಿತ ಬಸ್‌‌ಗಳಿಂದ ಶಬ್ದವೂ ಇಲ್ಲ, ಹೊಗೆಯೂ ಇರುವುದಿಲ್ಲ. ಹಾಗಾಗಿ ಇದು ಶಬ್ದಮಾಲಿನ್ಯ ಹಾಗೂ ವಾಯು ಮಾಲಿನ್ಯ ನಿಯಂತ್ರಣಕ್ಕೆ ಸಹಕಾರಿಯಾಗಲಿದೆ. 6 ಗಂಟೆ ಜಾರ್ಜ್ ಮಾಡಿದರೆ 250 ಕಿ. ಮೀಟರ್ ಸಂಚಾರ ಮಾಡುತ್ತೆ. ಬಸ್​ನಲ್ಲಿ 30 ಆಸನಗಳಿದ್ದು, ಪ್ರತಿ ಕಿ. ಮೀಟರ್​ಗೆ 1.2 ಕಿಲೋ ವ್ಯಾಟ್​ನಷ್ಟು ವಿದ್ಯುತ್ ಬಳಕೆಯಾಗುತ್ತದೆ. ಕೆಲ ದಿನಗಳಲ್ಲಿ ಬಸ್​​ಗಳು ಬರಲಿದ್ದು ಸಮಸ್ಯೆ ಆಗದಂತೆ ಕಾರ್ಯಾಚರಣೆ ಮಾಡಲಾಗುತ್ತದೆ.

ಪರಿಸರ ಹಾನಿ ಎಂಬ ನೆಪಕ್ಕೆ KSRTC ದುಬಾರಿ ಬೆಲೆಯ ಬಸ್​​​ಗಳ ಖರೀದಿಗೆ ಕೈಹಾಕಿದೆ. ಈಗಾಗಲೇ ಬಿಎಂಟಿಸಿ NTPCL ಕಂಪನಿಯಿಂದ ಬಸ್​ಗಳಿಂದ ನಷ್ಟ ಅನುಭವಿಸಿದೆ. ಎಲೆಕ್ಟ್ರಿಕ್ ಬಸ್​​​​ಗಳ ಖರೀದಿ ವಿಚಾರದಲ್ಲಿ ಅವಿವೇಕತನದಿಂದ್ಲೂ ಅಥವಾ ಕಮಿಷನ್ ಆಸೆಯಿಂದ್ಲೂ ಬಸ್ ಖರೀದಿ ಆಗ್ತಿವೆ. ಆದ್ರೆ ಕೆಎಸ್ಆರ್ಟಿಸಿಗೆ ಇದು ವರ ಆಗುತ್ತಾ ಶಾಪ ಆಗುತ್ತೋ ಅನ್ನೋದನ್ನ ಕಾದುನೋಡಬೇಕಿದೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು

RELATED ARTICLES
- Advertisment -
Google search engine

Most Popular

Recent Comments