Saturday, August 30, 2025
HomeUncategorizedಪತ್ನಿಯ ಪರಸಂಗದ ಪ್ರೀತಿಗೆ ಕೊಲೆಯಾದ ಪತಿ

ಪತ್ನಿಯ ಪರಸಂಗದ ಪ್ರೀತಿಗೆ ಕೊಲೆಯಾದ ಪತಿ

ಕಲಬುರಗಿ : ಮಗ ಎಲ್ಲಾದ್ರು ಇರಲಿ, ಚೆನ್ನಾಗಿರಲಿ ಅಂತ ಮಗನ ಒಳತಿಗಾಗಿ ಹಾರೈಸಿದ್ದ ಹೆತ್ತವರಿಗೆ ಇದೀಗ ಮಗನೇ ಇಲ್ಲಾ ಅನ್ನೋ ಸುದ್ದಿ ಬರಸಿಡಿಲು ಬಡಿದಂತಾಗಿದ್ರೆ. ಆದ್ರೆ ಅಲ್ಲಿಯೇ ಇದ್ದ ಓರ್ವ ಮಹಿಳೆ ಮಾತ್ರ ಏನು ನಡೆದೆಯಿಲ್ಲಾ ಅನ್ನೋಳ ರೀತಿಯಲ್ಲಿ ವರ್ತಿಸುತ್ತಿದ್ದಳು.ಅಂದಹಾಗೇ ಈ ದೃಶ್ಯ ಕಂಡುಬಂದಿದ್ದು ಕಲಬುರಗಿಯ ಜೇವರ್ಗಿ ಸ್ಟೇಷನ್‌ ಬಳಿ..

ಅಷ್ಟಕ್ಕೂ ಇಲ್ಲಿ ಹೆತ್ತವರು ಕಣ್ಣೀರಿಟ್ಟು ಗೋಳಾಡುತ್ತಿದ್ದದ್ದು, ಕಾಣೆಯಾಗಿದ್ದ ಮಗ, ಬದುಕಿಲ್ಲ, ಬದಲಾಗಿ ಆತ ಕೊಲೆಯಾಗಿದ್ದಾನೆ ಅನ್ನೋ ಸಂಗತಿಯಿಂದ. ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದ ಮೂವತ್ನಾಲ್ಕು ವರ್ಷದ ಗುರಪ್ಪ ಚಿಗರಳ್ಳಿ ಅನ್ನೋ ವ್ಯಕ್ತಿ ಕೊಲೆಯಾಗಿದ್ದಾನೆ. ಇಲ್ಲಿ ಕೂತಿರುವ ಈ ಮಹದೇವಿ, ಕೊಲೆಯಾದ ಗುರಪ್ಪನ ಪತ್ನಿ. ಮೇ 14ರಂದು ಗುರಪ್ಪ ಮನೆಯಿಂದ ಹೊರಟಿದ್ದ..ಆದ್ರೆ ಜೂನ್‌ 5ರಂದು ಪತ್ನಿ ಮಹಾದೇವಿ, ಪತಿ ಕಾಣೆಯಾಗಿದ್ದಾನೆ ಅಂತ ಪೊಲೀಸ್‌ ಠಾಣೆಗೆ ದೂರು ಕೊಟಿದ್ಲು. ಆದ್ರೆ ಮೇ 15ರಂದೇ ಅಫಜಲಪುರ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಗುರಪ್ಪನ ಶವ ಪತ್ತೆಯಾಗಿತ್ತು..ಆದ್ರೆ ಯಾವುದೋ ಅಪರಿಚಿತ ಶವ ಅಂತ ಪೊಲೀಸರು ಸುಮ್ನಿದ್ರು..ಆದ್ರೆ ಮಿಸ್ಸಿಂಗ್‌ ಕೇಸ್‌ ದಾಖಲಾಗಿದ್ರಿಂದ ಗುರಪ್ಪನ ಪತ್ನಿ, ಪೋಷಕರನ್ನ ಠಾಣೆಗೆ ಕರೆತಂದು ಪೊಲೀಸರು ವಿಚಾರಿಸಿದ್ದಾರೆ. ಮೇ 15 ರಂದು ಸಿಕ್ಕಿರುವ ಶವ, ತಮ್ಮ ಮಗನದ್ದೆ ಅಂತ ಪೋಷಕರು ದೃಢಪಡಿಸಿದ್ದಾರೆ.

ಗುರಪ್ಪನ ಪತ್ನಿ ಮಹಾದೇವಿಗೆ ಸಂತೋಷ್ ಅನ್ನೋ ಕ್ರೂಸರ್ ಚಾಲಕನ ಜೊತೆ ಅಕ್ರಮ ಸಂಬಂಧವಿತ್ತಂತೆ. ಈ ಅಕ್ರಮ ಸಂಬಂಧಕ್ಕೆ ಪತಿ ಅಡ್ಡ ಬರ್ತಾನೆ ಅಂತ ತಿಳಿದು, ಸಂತೋಷ್ ಮತ್ತು ಆತನ ಸ್ನೇಹಿತ ಸತೀಶ್ ಅನ್ನೋರ ಜೊತೆ ಸೇರಿ ಮಹಾದೇವಿಯೆ ಕೊಲೆ ಮಾಡಿಸಿದ್ದಾಳೆ ಅಂತ ಗುರಪ್ಪನ ಪೋಷಕರು ಆರೋಪಿಸಿದ್ದಾರೆ. ಆದ್ರೆ ಇತ್ತ ಮಹದೇವಿ ಮಾತ್ರ, ತಾನು ಕೊಲೆ ಮಾಡಿಸಿಲ್ಲ, ಆದ್ರೆ ತಾನು ಸಂತೋಷ್ ಜೊತೆ ಅಕ್ರಮ ಸಂಬಂಧ ಇದ್ದಿದ್ದು ನಿಜ. ತನ್ನ ಪತಿಯನ್ನು ಕೊಲೆ ಮಾಡಿದ್ದರ ಬಗ್ಗೆ ಆಮೇಲೆ ಸಂತೋಷ್ ನನಗೆ ಹೇಳಿದ್ದ ಇದ್ರಲ್ಲಿ ನನ್ನ ಕೈವಾಡವಿಲ್ಲ ಅಂತ ಹೇಳ್ತಿದ್ದಾಳೆ.

ಸದ್ಯ ಅಫಜಲಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೊಲೆಯಾದ ಗುರಪ್ಪ ಪತ್ನಿ ಮಹಾದೇವಿ ಸೇರಿದಂತೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಅದೇನೆ ಆಗ್ಲಿ 12 ವರ್ಷ ಸಂಸಾರ ಮಾಡಿ, 3 ಮಕ್ಕಳಿಗೆ ಅಪ್ಪ ಇಲ್ಲದಂತಾಗಿದೆ. ಆದ್ರೆ ಪತ್ನಿಯ ಪರಸಂಗದ ಪ್ರೀತಿಗೆ ಪತಿ ಕೊಲೆಯಾಗಿದ್ದು ಮಾತ್ರ ವಿಪರ್ಯಾಸವೇ ಸರಿ.

ಅನಿಲ್‌ಸ್ವಾಮಿ, ಪವರ್ ಟಿವಿ ಕಲಬುರಗಿ

RELATED ARTICLES
- Advertisment -
Google search engine

Most Popular

Recent Comments