Sunday, August 31, 2025
HomeUncategorizedಭರ್ಜರಿ ನಾಗಿಣಿ ಡ್ಯಾನ್ಸ್ ಮಾಡಿದ ಸಚಿವ ಎಂಟಿಬಿ

ಭರ್ಜರಿ ನಾಗಿಣಿ ಡ್ಯಾನ್ಸ್ ಮಾಡಿದ ಸಚಿವ ಎಂಟಿಬಿ

ಹೊಸಪೇಟೆ : ಸಣ್ಣ ಕೈಗಾರಿಕೆ ಹಾಗೂ ಪೌರಾಡಳಿತ ಸಚಿವ ಎಂ ಟಿ ಬಿ ನಾಗರಾಜ್ ಮತ್ತೊಮ್ಮೆ ಭರ್ಜರಿ ಡ್ಯಾನ್ಸ್ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.

ಹೊಸಕೋಟೆ ತಾಲೂಕಿನ ಜಡಿಗೇನಹಳ್ಳಿ ಹೋಬಳಿಯ ಕಟ್ಟಿಗೆನಹಳ್ಳಿ ಗ್ರಾಮದಲ್ಲಿ ಕಾರ್ಯಕರ್ತರೊಂದಿಗೆ ಎಂಟಿಬಿ ಭರ್ಜರಿ ಡಾನ್ಸ್ ಮಾಡಿರುವಂತಹ ವಿಡಿಯೋ ಇದೀಗ ವೈರಲ್ ಆಗುತ್ತಿದೆ ಕಾರ್ಯಕರ್ತರ ಭುಜದ ಮೇಲೆ ಕುಳಿತು ನಾಗಿಣಿ ಡ್ಯಾನ್ಸ್ ಮಾಡುವ ಮೂಲಕ ಎಂಟಿಬಿ ನಾಗರಾಜ್ ಸುದ್ದಿಯಲ್ಲಿದ್ದಾರೆ ಜಡಿಗೆನಹಳ್ಳಿ ಹೋಬಳಿಯ ವಿವಿಧ ಕಾಮಗಾರಿಗಳ ಗುದ್ದಲಿ ಪೂಜೆಗೆ ಆಗಮಿಸಿದ ಸಮಯಯಲ್ಲಿ ಎಂಟಿಬಿ ಅವರನ್ನು ಕಟ್ಟಿಗೆನ ಹಳ್ಳಿ ಗ್ರಾಮಸ್ಥರು ಭರ್ಜರಿಯಾಗಿ ಸ್ವಾಗತ ಕೋರಿದ್ದಾರೆ ಕಟ್ಟಿಗೆನಹಳ್ಳಿ ಹೊಸಕೋಟೆ ತಾಲೂಕಿನ ರೆಡ್ ಸ್ಯಾಂಡಲ್ ಸಪ್ಲೈ ಮಾಡುವಂತಹ ಕತರ್ನಾಕ್ ಕದೀಮರು ಇರುವಂತಹ ಗ್ರಾಮವಾಗಿದೆ.

ಜೊತೆಗೆ ಇಡಿ ಹೊಸಕೋಟೆ ಪೊಲೀಸರಿಗೆ ಈಗ ಈ ಗ್ರಾಮವು ಟಾರ್ಗೆಟ್ ಸಹ ಆಗಿದೆ ಇದೀಗ ಸಚಿವರನ್ನು ಮೆಚ್ಚಿಸಲು ಈ ರೀತಿ ಅದ್ದೂರಿಯಾಗಿ ಸ್ವಾಗತವನ್ನು ಮಾಡುತ್ತಿರುವುದು ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮವನ್ನು ಮುಚ್ಚಿ ಹಾಕಲು ಎಂಬ ಮಾತುಗಳು ಕೇಳಿಬಂದಿದೆ.

RELATED ARTICLES
- Advertisment -
Google search engine

Most Popular

Recent Comments