Thursday, August 28, 2025
HomeUncategorizedಕೋವಿಡ್​-​19: ಸಾವಿರಗಡಿ ದಾಟುತ್ತಿರುವ ಪ್ರಕರಣ​​; ಹೆಚ್ಚಿದ ಆತಂಕ

ಕೋವಿಡ್​-​19: ಸಾವಿರಗಡಿ ದಾಟುತ್ತಿರುವ ಪ್ರಕರಣ​​; ಹೆಚ್ಚಿದ ಆತಂಕ

ಬೆಂಗಳೂರು: ರಾಜ್ಯದಲ್ಲಿ ಸತತ ಎರಡನೇ ದಿನ ಕೊರೋನಾ ಸೋಂಕು ಪ್ರಕರಣಗಳು 1 ಸಾವಿರ ಗಡಿ ದಾಟಿದ್ದು, ಸೋಂಕಿತರೊಬ್ಬರು ಸಾವಿಗೀಡಾಗಿದ್ದಾರೆ.

ಈ ನಡುವೆ ಬೆಂಗಳೂರು ಒಂದರಲ್ಲಿಯೇ 1 ಸಾವಿರಕ್ಕೂ ಅಧಿಕ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಜನರಲ್ಲಿ ಆತಂಕ ಹೆಚ್ಚಿಸಿದೆ. ಹೊಸ ಪ್ರಕರಣಗಳ ಪೈಕಿ ಬೆಂಗಳೂರಿನಲ್ಲಿ 1008 ಪತ್ತೆಯಾಗಿವೆ. ನಾಲ್ಕೂವರೆ ತಿಂಗಳ ಬಳಿಗೆ ಮೊದಲ ಬಾರಿ ಒಂದೇ ದಿನ ಬೆಂಗಳೂರಿನಲ್ಲಿ 1 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿದೆ.

ಉಳಿದಂತೆ ಮೈಸೂರು 12, ದಕ್ಷಿಣ ಕನ್ನಡ 10, ಬಳ್ಳಾರಿ 9, ತುಮಕೂರು 8, ಉಡುಪಿ 4, ಚಿಕ್ಕಮಗಳೂರು 3, ಬೀದರ್‌, ಚಿತ್ರದುರ್ಗ, ಧಾರವಾಡ, ಹಾಸನ, ಹಾವೇರಿ, ಕೋಲಾರ ತಲಾ ಇಬ್ಬರು, ಸೇರಿ ಉಳಿದ ಕೆಲ ಜಿಲ್ಲೆಗಳಲ್ಲಿ ತಲಾ ಒಬ್ಬರಿಗೆ ಸೋಂಕು ತಗುಲಿದೆ.

ರಾಜ್ಯದಲ್ಲಿ ಈವರೆಗೆ 39.6 ಲಕ್ಷ ಮಂದಿಗೆ ಸೋಂಕು ತಗುಲಿದೆ. 39.2 ಲಕ್ಷ ಮಂದಿ ಗುಣ ಮುಖರಾಗಿದ್ದು, 40,076 ಮಂದಿ ಸಾವಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆಯ ಕೊರೋನಾ ವರದಿಯಲ್ಲಿ ತಿಳಿಸಿದೆ

RELATED ARTICLES
- Advertisment -
Google search engine

Most Popular

Recent Comments