Monday, September 8, 2025
HomeUncategorizedಸಿದ್ದರಾಮಯ್ಯ ಬ್ಲಾಕ್ ಮೇಲ್ ರಾಜಕಾರಣಿ : ಛಲವಾದಿ ನಾರಾಯಣಸ್ವಾಮಿ

ಸಿದ್ದರಾಮಯ್ಯ ಬ್ಲಾಕ್ ಮೇಲ್ ರಾಜಕಾರಣಿ : ಛಲವಾದಿ ನಾರಾಯಣಸ್ವಾಮಿ

ಬೆಂಗಳೂರು : ಸಿದ್ದರಾಮಯ್ಯ ಅವರು ಉತ್ಸವ ಮಾಡಿಕೊಳ್ಳಲು ನಮಗೇನು ಅಭ್ಯಂತರ ಇಲ್ಲ. ಅವರು ಏನು ಮೆಸೇಜ್ ಕೊಡಲು ಹೊರಟಿದ್ದಾರೆ ಅನ್ನೋದು ನೋಡಬೇಕಿದೆ ಎಂದು ಶಾಸಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನನಗೆ ಯಾವ ಸಮಾನರೂ ಅಲ್ಲ. ದಲಿತ ನಾಯಕರು ನನಗೆ ಏನೂ ಅಲ್ಲ ಅನ್ನೋದನ್ನ ಹೈಕಮಾಂಡ್‌ಗೆ ತಿಳಿಸಲು ಹೊರಟಿದ್ದಾರೆ. ಸಿದ್ದರಾಮಯ್ಯ ಒಬ್ಬ ಬ್ಲಾಕ್ ಮೇಲ್ ಪೊಲಿಟಿಷಿಯನ್.ನನ್ನ ಪ್ರಕಾರ ಸಿದ್ದರಾಮಯ್ಯ ದೊಡ್ಡ ಲೀಡರ್ ಅಲ್ಲ.ಹೆಗಡೆ, ನಿಜಲಿಂಗಪ್ಪ, ಯಡಿಯೂರಪ್ಪ, ಬಂಗಾರಪ್ಪ ಅಂತವರನ್ನೆಲ್ಲಾ ನೋಡಿದ್ದೇವೆ ಎಂದರು.

ಅದಲ್ಲದೇ, ದೇವೇಗೌಡರನ್ನ, ಕುಮಾರಸ್ವಾಮಿ ಅವರನ್ನ ಬ್ಲಾಕ್ ಮೇಲ್ ಮಾಡಿದ್ರು. ಕಾಂಗ್ರೆಸ್ ಸಿದ್ದರಾಮಯ್ಯ ಅವರನ್ನ ಕರೆತಂದ್ರು, ಬೇರೆಯವರನ್ನೆಲ್ಲಾ ತುಳಿದ್ರು. ಅದಕ್ಕೆ ಇಂದು ಕಾಂಗ್ರೆಸ್ ನೆಲ ಕಚ್ಚಿದೆ. ತಾವು ನಿಂತು, ತಮ್ಮ ಮಗನನ್ನ ಚುನಾವಣೆಗೆ ನಿಲ್ಲಿಸಿದ್ರು.ಎರಡು ಕಡೆ ನಿಂತು ಒಂದುಕಡೆ 1,200ಮತಗಳಿಂದ ಗೆದ್ದು ಬಂದ್ರು. ಈಗ ಕೆಪಿಸಿಸಿ ಅಧ್ಯಕ್ಷರನ್ನ, ದಲಿತರನ್ನ ಮೂಲೆಗುಂಪು ಮಾಡಿದ್ರು.ಇದೀಗ ಚುನಾವಣೆಯಲ್ಲಿ 120 ಸೀಟ್ ಗೆಲ್ತೀವಿ ಅಂತ ಹೇಳಿದ್ದಾರೆ. ಆಂತರಿಕ ಸಮೀಕ್ಷೆ ಮಾಡಿಸಿದ್ದೇವೆ ಆದ್ರೆ 60-65 ಗೆದ್ರೆ ಹೆಚ್ಚು, ಆದರೆ 120 ಗೆಲ್ತೀವಿ ಅಂತ ಹೇಳಬೇಕಿದೆ ಅಂತ ಅವರ ಪಕ್ಷದವರೇ ಹೇಳ್ತಿದ್ದಾರೆ ಎಂದು ಹೇಳಿದರು.

ಇನ್ನು, ಒಂದೊಂದು ಕ್ಷೇತ್ರದಲ್ಲಿ 10ಜನ ಗೆಲ್ಲುವ ಅಭ್ಯರ್ಥಿಗಳಿದ್ದಾರೆ ಅಂತ ಹೇಳಿಕೊಳ್ತಿದ್ದಾರೆ. ಕಡಿಮೆ, ಹೆಚ್ಚು ಬರುವ ವಿಚಾರ ಇಲ್ಲಿ ಇಲ್ಲ. ಸಿದ್ದರಾಮಯ್ಯ ಬೇರೆಯವರನ್ನ ಮೂದಲಿಸಿಕೊಂಡು ಓಡಾಡ್ತಿದ್ದಾರೆ. ಅವರ ಉತ್ಸವ ರಾಜ್ಯದಲ್ಲಿ ಆಗಿರೋ ಎಲ್ಲಾ ಮುಖ್ಯಮಂತ್ರಿಗಳಿಗಿಂತ ಮೇರು ವ್ಯಕ್ತಿ ಅಂತ ತೋರಿಸಲು ಹೊರಟಿದ್ದಾರೆ. ಆದ್ರೆ ಅವರು ಅಂತ ವ್ಯಕ್ತಿ ಅಲ್ಲ ಎಂದರು.

RELATED ARTICLES
- Advertisment -
Google search engine

Most Popular

Recent Comments