Saturday, August 23, 2025
Google search engine
HomeUncategorizedರಾಜ್ಯದ ಜನತೆಗೆ ಮತ್ತೆ ವಿದ್ಯುತ್ ಶಾಕ್..!

ರಾಜ್ಯದ ಜನತೆಗೆ ಮತ್ತೆ ವಿದ್ಯುತ್ ಶಾಕ್..!

ಬೆಂಗಳೂರು : ದಿನೇ ದಿನೇ ಅಗತ್ಯ ವಸ್ತುಗಳ ಬೆಲೆ ಗಗಕ್ಕೇರುತ್ತಿದೆ.ಜನಸಾಮಾನ್ಯರು ಅಂತೂ ಜೀವನ ಮಾಡೋಕೆ ಆಗ್ತಿಲ್ಲ.ಇದೀಗ ರಾಜ್ಯದ ಮಂದಿಗೆ ಮತ್ತೊಂದು ಶಾಕ್ ನೀಡಲಾಗಿದೆ.ಈಗಾಗಲೇ ಭಾರಿ ವಿದ್ಯುತ್ ದರ ಏರಿಕೆಯಿಂದ ತತ್ತರಿಸೋ ಜನ ಜುಲೈ 1 ರಿಂದ ಮತ್ತಷ್ಟು ವಿದ್ಯುತ್ ಬಿಲ್ ಕಟ್ಟಬೇಕಿದೆ.ಈ ಬೆಲೆ ಏರಿಕೆ ಬಿಸಿ ನಡುವೆ ಸರ್ಕಾರ ವಿದ್ಯುತ್ ದರ ಏರಿಕೆ ಶಾಕ್ ನೀಡಿದ್ದು ಜುಲೈ 1 ರಿಂದ ವಿದ್ಯುತ್ ದರ ಪ್ರತಿ ಯೂನಿಟ್ ಗೆ 19 ಪೈಸೆಯಿಂದ 31 ಪೈಸೆ ಹೆಚ್ಚಳವಾಗ್ತಿದೆ.

ರಾಜ್ಯದಲ್ಲಿ ಜುಲೈ 1 ರಿಂದ ಡಿಸೆಂಬರ್‌ ಅಂತ್ಯದವರೆಗೆ ಬೆಸ್ಕಾಂಗಳು ಪ್ರತಿ ಯೂನಿಟ್‌ ವಿದ್ಯುತ್‌ ದರಕ್ಕೆ 19 ರಿಂದ 31 ಪೈಸೆವರೆಗೆ ಹೆಚ್ಚುವರಿ ದರವನ್ನು ಇಂಧನ ಹೊಂದಾಣಿಕೆ ವೆಚ್ಚ ಶುಲ್ಕ ರೂಪದಲ್ಲಿ ಸಂಗ್ರಹಿಸಲು ಅವಕಾಶ ಕಲ್ಪಿಸಿ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗ ಆದೇಶ ಹೊರಡಿಸಿದೆ.ಕಳೆದ 2021-22ನೇ ಆರ್ಥಿಕ ವರ್ಷದ ಮೂರು ಹಾಗೂ ನಾಲ್ಕನೇ ತ್ರೈಮಾಸಿಕದಲ್ಲಿ ಅಂದರೆ 2021ರ ಅಕ್ಟೋಬರ್‌ನಿಂದ 2022ರ ಮಾರ್ಚ್ ವರೆಗೆ ಕಲ್ಲಿದ್ದಲು ಖರೀದಿ ದರ ಏರಿಕೆಯಿಂದಾಗಿ ಎಸ್ಕಾಂಗಳಿಗೆ ಆರ್ಥಿಕ ಹೊರೆ ಬಿದ್ದಿದೆ. ಇದನ್ನು ಸರಿದೂಗಿಸಲು ಇಂಧನ ಹೊಂದಾಣಿಕೆ ವೆಚ್ಚ ಶುಲ್ಕ ಆರು ತಿಂಗಳ ಅವಧಿಗೆ ಪ್ರತಿ ಯೂನಿಟ್‌ ವಿದ್ಯುತ್‌ ದರದ ಮೇಲೆ ಹೆಚ್ಚುವರಿ ದರ ವಿಧಿಸಲಾಗ್ತಿದೆ.ಈ ಸಂಬಂಧ ಎಸ್ಕಾಂಗಳು ಜೂನ್ 1ರಂದು ನಾನಾ ಪ್ರಮಾಣದಲ್ಲಿ ಎಫ್‌ಎಸಿ ಶುಲ್ಕ ಸಂಗ್ರಹಕ್ಕಾಗಿ ಅನುಮತಿ ಕೋರಿ ಆಯೋಗಕ್ಕೆ ಪ್ರಸ್ತಾವ ಸಲ್ಲಿಸಿದ್ದವು. ಪ್ರತಿ ಯೂನಿಟ್‌ ದರ ಮೇಲೆ ಬೆಸ್ಕಾಂ 55.28 ಪೈಸೆ, ಮೆಸ್ಕಾಂ 38.98 ಪೈಸೆ, ಸೆಸ್ಕ್‌ 40.47 ಪೈಸೆ, ಹೆಸ್ಕಾಂ 49.54 ಪೈಸೆ ಹಾಗೂ ಜೆಸ್ಕಾಂ 39.36 ಪೈಸೆ ಹೆಚ್ಚಳಕ್ಕೆ ಪ್ರಸ್ತಾವ ಸಲ್ಲಿಸಿದ್ದವು.ಆದ್ರೆ ಸಾಧಕ ಭಾದಕಗಳನ್ನ ಪರಿಶೀಲಿಸಿ ನಿಗಧಿತ ದರ ಪರಿಷ್ಕರಣೆ ಮಾಡಿ ಅದೇಶ ಮಾಡಿದೆ.

ಕಳೆದ ಆರ್ಥಿಕ ವರ್ಷದಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಾಗುವ ಜತೆಗೆ ಕಲ್ಲಿದ್ದಲು ದರವೂ ಏರಿಕೆಯಾಗಿದೆ. ಹೀಗಾಗಿ ಬೆಸ್ಕಾಂ -ವ್ಯಾಪ್ತಿಯಲ್ಲಿ ಪ್ರತಿ ಯೂನಿಟ್ ಗೆ 31 ಪೈಸೆ ಮೆಸ್ಕಾಂ – 21 ಪೈಸೆ,ಸೆಸ್ಕ್‌ – 19 ಪೈಸೆ,ಹೆಸ್ಕಾಂ – 27 ಪೈಸೆ
ಜೆಸ್ಕಾಂ – 26 ಪೈಸೆ ನಂತೆ ಏರಿಕೆ ಮಾಡಲಾಗಿದೆ.ಶಾಖೋತ್ಪನ್ನ ವಿದ್ಯುತ್ ಘಟಕಗಳಲ್ಲಿ ಉತ್ಪಾದನೆಯ ವೆಚ್ಚ ಹೆಚ್ಚಳ,.ಕಲ್ಲಿದ್ದಲು, ಅಭಾವ ಹಾಗೂ ದರ ಹೆಚ್ಚಳ ಹಾಗೂ ಆರ್ಥಿಕವಾಗಿ ನಷ್ಟದಲ್ಲಿರುವ ಕಾರಣ ದರ ಪರಿಷ್ಕರಣೆ ಅನಿವಾರ್ಯ ಅಂತ ಎಸ್ಕಾಂಗಳು ಸಮರ್ಥನೆ ಮಾಡಿಕೊಳ್ಳುತ್ತಿದೆ. ಆದ್ರೆ ಇದು ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗಿದೆ.

ಒಟ್ಟಿನಲ್ಲಿ ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿ ಜನಸಾಮಾನ್ಯರ ಆಕ್ರೋಶಕ್ಕೆ ಕಾರಣವಾಗ್ತಿದ್ದ ಸರ್ಕಾರ ಇದೀಗ ಮತ್ತೆ ಜುಲೈನಿಂದ ದರ ಪರಿಷ್ಕರಣೆ ಮಾಡಿರೋದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು

RELATED ARTICLES
- Advertisment -
Google search engine

Most Popular

Recent Comments