Monday, September 8, 2025
HomeUncategorizedಕೃಷ್ಣಾ ನದಿಯಲ್ಲಿ ಹೆಚ್ಚಿದ ಮೊಸಳೆ ಹಾವಳಿ : ಇಂದು ಮತ್ತೊಂದು ಬಲಿ

ಕೃಷ್ಣಾ ನದಿಯಲ್ಲಿ ಹೆಚ್ಚಿದ ಮೊಸಳೆ ಹಾವಳಿ : ಇಂದು ಮತ್ತೊಂದು ಬಲಿ

ವಿಜಯಪುರ : ಮುದ್ದೇಬಿಹಾಳ ತಾಲೂಕಿನ ಹಂಡರಗಲ್ಲ ಗ್ರಾಮದ ಬಳಿ ಹರಿಯುತ್ತಿರುವ ಕೃಷ್ಣಾ ನದಿಯಲ್ಲಿ ನರಭಕ್ಷಕ ಮೊಸಳೆ ಹಾವಳಿ ಹೆಚ್ಚಾಗಿದ್ದು ಇಂದು ಮತ್ತೊಬ್ಬ ವ್ಯಕ್ತಿ ಮೊಸಳೆಗೆ ಆಹಾರವಾಗಿದ್ದಾನೆ.

ಮೃತನನ್ನು ಹಂಡರಗಲ್ಲ ಗ್ರಾಮದ ನಾಗಪ್ಪ ಸಂಜಿವಪ್ಪ ಉಂಡಿ (55) ಎಂದು ಗುರುತಿಸಲಾಗಿದೆ. ಕಳೆದ ವಾರ ಇದೇ ಭಾಗದಲ್ಲಿ ಹಂಡರಗಲ್ಲ ಪಕ್ಕದ ನಾಗರಾಳ ಗ್ರಾಮದ ವ್ಯಕ್ತಿಯನ್ನು ಮೊಸಳೆ ಬಲಿ ಪಡೆದಿತ್ತು. ಮೃತನಿಗೆ ಪತ್ನಿ, ಇಬ್ಬರು ಪುತ್ರರು ಇದ್ದಾರೆ. ಅರಣ್ಯ ಮತ್ತು ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶವವನ್ನು ನದಿಯಿಂದ ಹೊರಗೆ ತರಲು ಕ್ರಮ ಕೈಕೊಂಡಿದ್ದಾರೆ.

ಇನ್ನೂ ಮೊಸಳೆ ಹಾವಳಿ ನಿಯಂತ್ರಿಸುವಲ್ಲಿ ವಿಫಲರಾಗಿರುವ ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ದ ಗ್ರಾಮಸ್ಥರಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮೊದಲ ಬಲಿ ಘಟನೆ ನಡೆದಾಗಲೇ ಅರಣ್ಯ ಇಲಾಖೆಯವರು ಎಚ್ಚೆತ್ತುಕೊಂಡು ವ್ಯಾಪಕ ಪ್ರಚಾರ, ಜಾಗೃತಿ ನಡೆಸಿದ್ದರೆ ಇಂದಿನ ಘಟನೆ ತಪ್ಪಿಸಬಹುದಿತ್ತು.

ಆದರೆ ಅವರು ಡಂಗೂರ ಸಾರುವಂತೆ ಗ್ರಾಪಂ ನವರಿಗೆ ಹೇಳಿ ಕೈ ತೊಳೆದುಕೊಂಡಿದ್ದಾರೆ. ಈಗಲಾದರೂ ಎಚ್ಚೆತ್ತುಕೊಂಡು ಮುಂದೆ ಆಗಬಹುದಾದ ಅನಾಹುತ ತಡೆಗಟ್ಟಲು ಮುಂದಾಗಬೇಕು ಎಂಬುದು‌ ಗ್ರಾಮಸ್ಥರ ಒತ್ತಾಯವಾಗಿದೆ.

RELATED ARTICLES
- Advertisment -
Google search engine

Most Popular

Recent Comments