Sunday, August 24, 2025
Google search engine
HomeUncategorizedಬೆಂಗಳೂರಿನಲ್ಲಿ ವೇಗ ಪಡೆದ ಎರಡನೇ ಹಂತದ ಮೆಟ್ರೋ ಸುರಂಗ ಕಾಮಗಾರಿ..!

ಬೆಂಗಳೂರಿನಲ್ಲಿ ವೇಗ ಪಡೆದ ಎರಡನೇ ಹಂತದ ಮೆಟ್ರೋ ಸುರಂಗ ಕಾಮಗಾರಿ..!

ಬೆಂಗಳೂರು : ನಮ್ಮ ಮೆಟ್ರೋ ಎರಡನೇ ಹಂತದಲ್ಲಿ ಗೊಟ್ಟಿಗೆರೆ ಟು ನಾಗವಾರ ಮಾರ್ಗದಲ್ಲಿ ಬೃಹತ್ ಸುರಂಗ ಕಾಮಗಾರಿ ನಡೆಯುತ್ತಿದೆ. ಒಟ್ಟು.13.9 ಕೀ ಮೀಟರ್ ಸುರಂಗ ಕೊರೆಯುವದಕ್ಕೆ ಒಟ್ಟು 8 ಟಿಬಿಎಂಗಳನ್ನ ನೆಲದಾಳಕ್ಕೆ ಇಳಿಸಲಾಗಿದೆ.ಇವುಗಳ ಪೈಕಿ ಶಿವಾಜಿನಗರದಿಂದ ಪಾಟರಿ ಟೌನ್ ಕಡೆ ಸುರಂಗ ಕೊರೆಯುತ್ತಿದ್ದ ಟಿಬಿಎಂ ಉರ್ಜಾ ಕೆಲಸ ಮುಗಿಸಿ ಇಂದು ಹೊರಬಂದಿದೆ.

ಕಳೆದ ಆರು ತಿಂಗಳಿಂದ ನೆಲದಾಳದಲ್ಲಿ ಸುರಂಗ ಕೊರೆಯುತ್ತಿದ್ದ ಉರ್ಜಾ ಇಂದು ಬೆಳಗ್ಗೆ ಹೊರಬಂದಿದೆ.ಕಳೆದ ಆರು ತಿಂಗಳಿಂದ ಉರ್ಜಾ 900 ಮೀಟರ್ ಟನರ್ ಕೊರೆದಿದೆ.

ಇನ್ನೂ 13 ಕಿ ಮೀಟರ್ ಇರೋ ಸುರಂಗ ಮಾರ್ಗದಲ್ಲಿ ಈಗಾಗಲೂ ಟನರ್ ಬೋರಿಂಗ್ ಮಷಿನ್ ಗಳು ಸುರಂಗ ಕೊರೆಯುತ್ತೀವೆ. ಅವುಗಳಲ್ಲಿ ವರಾದ ಟಿಬಿಎಂ ನವೆಂಬರ್ ನಲ್ಲಿ ಹೊರಬಂದ್ರೆ ವಿಂದ್ಯಾ ಅನ್ನೋ ಟಿಬಿಎಂ ಅಕ್ಟೋಬರ್ ನಲ್ಲಿ, ರುದ್ರಾ ಹಾಗೂ ಅವನಿ ಟಿಬಿಎಂಗಳು ವರ್ಷಾಂತ್ಯದಲ್ಲಿ ಸುರಂಗ ದಿಂದ ಹೊರಬರುವ ಸಾಧ್ಯತೆ ಇದೆ.ನಮ್ಮ ಮೆಟ್ರೋ ಮೊದಲ ಹಂತದಲ್ಲಿ ಟನರ್ ಕೊರೆಯುವ ವೇಳೆ ಪ್ರತಿ ದಿನ ಸುರಂಗ ಕೊರೆಯುವ ಸರಾಸರಿ ವೇಗ 1.97 ರಷ್ಟು ಇತ್ತು ಆದ್ರೆ ಎರಡನೆ ಹಂತದಲ್ಲಿ ಈ ವೇಗವನ್ನು 2.14 ಕ್ಕೆ ಏರಿಸುವಲ್ಲಿ ನಮ್ಮ ಯಶಸ್ಸಿಯಾಗಿವೆ.

ಒಟ್ಟಿನಲ್ಲಿ ನಮ್ಮ ಮೆಟ್ರೋ ಎರಡನೇ ಹಂತದ ಕಾಮಗಾರಿ ಅತಿದೊಡ್ಡ ಚಾಲೆಂಜ್ ಆಗಿದೆ.ಒಂದೊಂದು ಟನರ್ ಮಷಿನ್ ಗಳು ಸುರಂಗ ಕೊರೆದು ಹೊರಬರುತ್ತಿದ್ದು ಬಿಎಂಆರ್ಸಿಎಲ್ಗೆ ಆತ್ಮವಿಶ್ವಾಸ ವನ್ನ ಹೆಚ್ಚಿಸಿದೆ.

ಕೃಷ್ಣಮೂರ್ತಿ ಪವರ್ ಟಿವಿ ಬೆಂಗಳೂರು

RELATED ARTICLES
- Advertisment -
Google search engine

Most Popular

Recent Comments