Monday, August 25, 2025
Google search engine
HomeUncategorizedUI ಕಿಕ್​​ಸ್ಟಾರ್ಟ್​ ಉಪ್ಪಿ ಜೊತೆ ತಮನ್ನಾ/ ಶ್ರೀನಿಧಿ..?

UI ಕಿಕ್​​ಸ್ಟಾರ್ಟ್​ ಉಪ್ಪಿ ಜೊತೆ ತಮನ್ನಾ/ ಶ್ರೀನಿಧಿ..?

ಇರೋದನ್ನ ಇದ್ದಂಗೇ ರಿಯಾಲಿಟಿಯನ್ನ ರಿಯಲ್ ಆಗಿ, ಸೂಪರ್ ಆಗಿ ಸಮಾಜದ ಮುಂದೆ ತೆರೆದಿಡೋ ರಿಯಲ್ ಮಾಸ್ಟರ್ ಮೈಂಡ್, ಸೂಪರ್ ಸ್ಟಾರ್ ಉಪೇಂದ್ರ ನೀನಾ-ನಾನಾ ಅಂತ ಫೀಲ್ಡ್​ಗೆ ಇಳಿದಿದ್ದಾರೆ. ಅವ್ರಿಗೆ ಮಿಲ್ಕಿ ಬ್ಯೂಟಿ ತಮನ್ನ ಹೀಯೋಯಿನ್ ಆಗ್ತಾರಾ ಅಥ್ವಾ ಕೆಜಿಎಫ್​ನ ಶ್ರೀನಿಧಿ ಶೆಟ್ಟಿ ಜೋಡಿಯಾಗ್ತಾರಾ ಅನ್ನೋ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ.

UI ಕಿಕ್​​ಸ್ಟಾರ್ಟ್​ ಉಪ್ಪಿ ಜೊತೆ ತಮನ್ನಾ/ ಶ್ರೀನಿಧಿ..?

ದೇವನಹಳ್ಳಿಯಲ್ಲಿ ಉಪ್ಪಿ ಶೂಟಿಂಗ್ ಶುಭಾರಂಭ..!

ಉಪೇಂದ್ರ, ಉಪ್ಪಿ-2 ಇವೆರಡೂ ಚಿತ್ರಗಳಿಂದ ನಾನು ಮತ್ತು ನೀನು ಕಾನ್ಸೆಪ್ಟ್​ಗಳನ್ನ ಬಹಳ ಅಚ್ಚುಕಟ್ಟಾಗಿ ಜನರ ಮುಂದೆ ತೆರೆದಿಟ್ಟಿದ್ದ ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ಉಪೇಂದ್ರ, ಇದೀಗ ನೀನು-ನಾನು ಇಬ್ಬರನ್ನೂ ಒಂದೇ ಪರದೆಯಲ್ಲಿ ತೋರಿಸೋಕೆ ಹೊರಟಿದ್ದಾರೆ. ಅದೇ ಯುಐ ಸಿನಿಮಾ. ಹೌದು.. ಏಳು ವರ್ಷಗಳ ಬಳಿಕ ಉಪ್ಪಿ ಬ್ಯಾಕ್ ಟು ಌಕ್ಷನ್ ಕಟ್.

ರೀಸೆಂಟ್ ಆಗಿ ಮುಹೂರ್ತ ಕಂಡಿದ್ದ ಯುಐ ಸಿನಿಮಾನ ಟಗರುಮ ಸಲಗ ಖ್ಯಾತಿಯ ಕೆಪಿ ಶ್ರೀಕಾಂತ್ ನಿರ್ಮಿಸುತ್ತಿದ್ದು, ಇವ್ರಿಗೆ ಲಹರಿ ಸಂಸ್ಥೆ ಕೂಡ ಕೈಜೋಡಿಸಿದೆ. ಉಪೇಂದ್ರ ಅವ್ರೇ ನಟಿಸಿ, ನಿರ್ದೇಶಿಸ್ತಿರೋ ಈ ಸಿನಿಮಾ ಸಿಂಬಲ್ ಟೈಟಲ್​ನಿಂದಲೇ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ.

ಇದೀಗ ಚಿತ್ರದ ಶೂಟಿಂಗ್ ಕಿಕ್​ಸ್ಟಾರ್ಟ್​ ಆಗಿದ್ದು, ಸದ್ಯ ದೇವನಹಳ್ಳಿಯ ಬಳಿ ಇರೋ ಜೆ ಡಬ್ಲ್ಯೂ ಮ್ಯಾರಿಯೆಟ್ ಹೋಟೆಲ್​ನಲ್ಲಿ ಚಿತ್ರೀಕರಣ ಭರದಿಂದ ಸಾಗ್ತಿದೆ. ಮೊದಲ ಹಂತದ ಶೂಟಿಂಗ್ ಆಗಸ್ಟ್ 28ರವರೆಗೂ ನಡೆಯಲಿದ್ದು, ಎರಡನೇ ಶೆಡ್ಯೂಲ್ ಬೃಹತ್ ಸೆಟ್​ನಲ್ಲಿ ಸೆರೆ ಹಿಡಿಯಲ್ಪಡಲಿದೆ ಎನ್ನಲಾಗ್ತಿದೆ.

ಅಂದಹಾಗೆ ರಿಯಲ್ ಸ್ಟಾರ್ ಉಪ್ಪಿಗೆ ಈ ಸಿನಿಮಾದಲ್ಲಿ ನಾಯಕಿ ಯಾರಾಗ್ತಾರೆ ಅನ್ನೋದು ಸದ್ಯ ಸಾಕಷ್ಟು ನಿರೀಕ್ಷೆ ಮೂಡಿಸಿತ್ತು. ಅದಕ್ಕೀಗ ಉತ್ತರ ಸಿಗೋ ಸಮಯ ಬಂದಿದೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ ಬಹುಭಾಷೆಯಲ್ಲಿ ಸದ್ದು ಮಾಡಿರೋ ದೊಡ್ಡ ನಟೀಮಣಿಗೇ ಚಿತ್ರತಂಡ ಮಣೆ ಹಾಕ್ತಿದೆ.

ಮೂಲಗಳ ಪ್ರಕಾರ ಕೆಜಿಎಫ್ ಖ್ಯಾತಿಯ ಕನ್ನಡ ಬ್ಯೂಟಿ ಶ್ರೀನಿಧಿ ಶೆಟ್ಟಿ ಹಾಗೂ ಮಿಲ್ಕಿ ಬ್ಯೂಟಿ ತಮನ್ನಾರನ್ನ ಅಪ್ರೋಚ್ ಮಾಡಿದೆಯಂತೆ ಚಿತ್ರತಂಡ. ಇನ್ನೂ ಮಾತುಕತೆಯ ಹಂತದಲ್ಲಿರೋದ್ರಿಂದ ಇಬ್ಬರಲ್ಲಿ ಯಾರು ನಾಯಕಿ ಅನ್ನೋದನ್ನ ಫೈನಲ್ ಮಾಡಿಲ್ಲ ನಿರ್ಮಾಪಕರು. ಆದ್ರೆ ಈ ಇಬ್ಬರು ಸುರ ಸುಂದರಾಂಗಿಯರ ಹೆಸ್ರು ವೈರಲದ್ ಆಗ್ತಿದ್ದು, ಸದ್ಯದಲ್ಲೇ ಎಲ್ಲಕ್ಕೂ ಉತ್ತರ ಸಿಗಲಿದೆ ಅಂತಾರೆ ನಿರ್ಮಾಪಕರು.

ತಲೆಗೆ ಹುಳ ಬಿಡೋ ಕಾರ್ಯ ಆರಂಭಿಸಿರೋ ಉಪ್ಪಿ, ಈ ಬಾರಿ ನಾಮ ಯಾರಿಂದ ಯಾರಿಗೆ ಹೇಗೆ ಎತ್ತ ಅನ್ನೋದನ್ನ ಎಳೆ ಎಳೆಯಾಗಿ ಬಿಚ್ಚಿಡೋ ಕಾರ್ಯ ಮಾಡಲಿದ್ದಾರೆ. ಮೂರು ನಾಮದ ಸಿಂಬಲ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಕೊಂಬಿರೋ ಕುದುರೆ ಮೇಲೆ ಭರ್ಜರಿ ಯಾತ್ರೆ ಹೊರಟಿದ್ದಾರೆ ಸೂಪರ್ ಸ್ಟಾರ್ ಉಪ್ಪಿ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments