Monday, August 25, 2025
Google search engine
HomeUncategorizedಬೆಳಗಾವಿಯಲ್ಲಿ ಮತ್ತೆ ಬಾಲ ಬಿಚ್ಚಿದ MES

ಬೆಳಗಾವಿಯಲ್ಲಿ ಮತ್ತೆ ಬಾಲ ಬಿಚ್ಚಿದ MES

ಬೆಳಗಾವಿ : ಮಹಾರಾಷ್ಟ್ರದಲ್ಲಿ ಶಿವಸೇನೆ ನೇತೃತ್ವದ ಸರ್ಕಾರ ಅತಂತ್ರವಾಗಿದೆ. ಶಿವಸೇನೆ ಪಕ್ಷದಲ್ಲಿಯೇ ಈಗ ಹೌಡ್ರಾಮಾ ಮುಂದೊರೆದಿದೆ. ಆದ್ರೆ ಇತ್ತ ಕರ್ನಾಟಕದಲ್ಲಿ ನಾಡದ್ರೋಹಿ MES ಪುಂಡಾಟಕ್ಕೆ ಬ್ರೇಕ್ ಬೀಳುತ್ತಿಲ್ಲ. ಹೌದು, ಬೆಳಗಾವಿಯಲ್ಲಿ ಮತ್ತೆ ಎಂಇಎಸ್ ಕಿರಿಕ್ ಮುಂದುವರೆದಿದೆ. ಭಾಷಾ ವಿವಾದವನ್ನ ಕೆದಕಿ ಎಂಇಎಸ್ ಪುಂಡರು ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿದ್ರು. ಸರ್ದಾರ ಮೈದಾನದಿಂದ ಡಿಸಿ ಕಚೇರಿವರೆಗೂ ನಾಡದ್ರೋಹಿಗಳು ಮೆರವಣಿಗೆ ನಡೆಸಿ ಕರ್ನಾಟಕ ಸರ್ಕಾರದ ವಿರುದ್ಧ ಘೋಷಣೆಗಳನ್ನ ಕೂಗಿದ್ದಾರೆ.

ಸರ್ಕಾರಿ ಕಚೇರಿಯಲ್ಲಿ ಮರಾಠಿಯಲ್ಲಿ ದಾಖಲೆ ಕೊಡಿ, ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ಅಳವಡಿಸಿ ಅಂತಾ ಬೇಡಿಕೆ ಇಟ್ಟುಕೊಂಡು ಪ್ರತಿಭಟನೆ ನಡೆಸಿತು. ಅದರಲ್ಲೂ ಎಂಇಎಸ್ ಪುಂಡರು ಬೆಳಗಾವಿ , ನಿಪ್ಪಾಣಿ,ಕಾರವಾರ, ಬೀದರ, ಬಾಲ್ಕಿ ಸಂಯುಕ್ತ ಮಹಾರಾಷ್ಟ್ರ ಮಾಡಲೇಬೇಕೆಂದು ಘೋಷಣೆ ಕೂಗಿದ್ದಾರೆ.

ಇನ್ನೂ ಬೆಳಗಾವಿಯಲ್ಲಿ ಪದೆಪದೆ ಗಡಿ ಭಾಷೆಯ ವಿಚಾರಕ್ಕೆ ಸಂಬಂಧಿಸಿ ಕ್ಯಾತೆ ತೆಗೆಯುತ್ತಾ ಬಂದಿರುವ ಎಂಇಎಸ್ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ಎಂಇಎಸ್ ಕೆಲವರು ವಿಕೃತಿ ಮನಸ್ಸಿನವರು ಸಮಾಜದಲ್ಲಿ ಅಶಾಂತಿ ಉಂಟುಮಾಡಲು ಪ್ರಯತ್ನ ಮಾಡ್ತಾರೆ. ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಮರಾಠಿಯಲ್ಲಿ ದಾಖಲೆ ನೀಡಲು ಆಗ್ರಹಿಸಿ ಎಂಇಎಸ್ ಪ್ರತಿಭಟನೆಗೆ ಏನೂ ಅರ್ಥ ಇಲ್ಲ. ಅವರೇನು ಪಾಕಿಸ್ತಾನದವರು ಅಲ್ಲ. ಅವರು ನಮ್ಮವರೇ‌ ಇದ್ದಾರೆ. ದುರಾಭಿಮಾನ ಬಿಟ್ಟು ನಮ್ಮ ಜತೆಗೆ ಬನ್ನಿ ಎಂದು ಮನವೊಲಿಸುವ ಪ್ರಯತ್ನ ಮಾಡುತ್ತೇವೆ ಎಂದರು.

ಒಟ್ಟಿನಲ್ಲಿ ನಾಡದ್ರೋಹಿ MES ಮತ್ತೆ ಭಾಷಾ ಕಿರಿಕಿರಿ ಆರಂಭಿಸಿದೆ. ಝಾಪಾಗಳು ಪದೇ ಪದೇ ಗಡಿ ತಂಟೆ ತೆಗೆದರೂ ಸರ್ಕಾರ ಮಾತ್ರ ಕಠಿಣ ಕ್ರಮ ಕೈಗೊಳ್ಳದಿರುವುದು ಕನ್ನಡಿಗರ ದುರಂತ.

ಕ್ಯಾಮರಾಮನ್ ರಾಹುಲ್‌ ಜೊತೆ ಅಣ್ಣಪ್ಪ ಬಾರ್ಕಿ ಪವರ್ ಟಿವಿ ಬೆಳಗಾವಿ

RELATED ARTICLES
- Advertisment -
Google search engine

Most Popular

Recent Comments