Friday, September 12, 2025
HomeUncategorizedಸಿದ್ದರಾಮಯ್ಯ ಹುಳುಕು ಮನಸ್ಥಿತಿಯವ್ರು : ಪ್ರತಾಪ ಸಿಂಹ

ಸಿದ್ದರಾಮಯ್ಯ ಹುಳುಕು ಮನಸ್ಥಿತಿಯವ್ರು : ಪ್ರತಾಪ ಸಿಂಹ

ಮೈಸೂರು : ಮಾಜಿ ಸಿಎಂ ಸಿದ್ದರಾಮಯ್ಯ ಹುಳುಕು ಮನಸ್ಥಿತಿಯವರು. ಅವರ ಬಗ್ಗೆ ನಾನು ಏನು ಹೇಳುವುದಿಲ್ಲ ಎಂದು ಮೈಸೂರಿನಲ್ಲಿ ಸಂಸದ ಪ್ರತಾಪ ಸಿಂಹ ವ್ಯಂಗ್ಯವಾಡಿದ್ದಾರೆ.

ರಾಷ್ಟ್ರಪತಿ ಅಭ್ಯರ್ಥಿಯಾಗಿ ದ್ರೌಪದಿ ಮುರ್ಮು ಆಯ್ಕೆ ವಿಚಾರವಾಗಿ ಸಿದ್ದರಾಮಯ್ಯನವರ ಟೀಕೆ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹುಳುಕ ಮನಸ್ಥಿತಿ ವ್ಯಕ್ತಿತ್ವ ಅವರದು, ಆದ್ದರಿಂದ ಎಲ್ಲದರಲ್ಲೂ ಹುಳುಕು ಹುಡುಕುತ್ತಾರೆ ಎಂದರು.

ಇನ್ನು ಬಿಜೆಪಿಗೆ ಮೂರು ಬಾರಿ ರಾಷ್ಟ್ರಪತಿ ಆಯ್ಕೆಗೆ ಅವಕಾಶ ನೀಡಿದ್ದು, ಒಮ್ಮೆ ಎ.ಪಿ.ಜೆ.ಅಬ್ದುಲ್ ಕಲಾಂ ಮತ್ತೊಮ್ಮೆ ಎಸ್ ಸಿ ಸಮುದಾಯದ ರಾಮನಾಥ್ ಕೋವಿಂದ್ ಆಯ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಈಗ ಬುಡಕಟ್ಟು ಜನಾಂಗದ ದ್ರೌಪದಿ ಮುರ್ಮು ಅವರನ್ನು, ಹಿಂದುಳಿದ ಎಲ್ಲಾ ಸಮುದಾಯಕ್ಕೆ ಅವಕಾಶ ಸಿಗಲಿ ಅನ್ನೋದು ಬಿಜೆಪಿ ಆಶಯವಾಗಿದ್ದು, ಅದರಂತೆ ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದರು.

ಇನ್ನು ಇದೇ ವೇಳೆ ಮಹಾರಾಷ್ಟ್ರ ಸರ್ಕಾರ ಪತನದ ಅಂಚಿನಲ್ಲಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಶಿವಸೇನೆಯ ಕುಟುಂಬ ರಾಜಕಾರಣದ ವಿರುದ್ದ ಅಲ್ಲಿಯ ಶಾಸಕರು ಸಿಡಿದೆದ್ದಿದ್ದಾರೆ. ಅಧಿಕಾರ ಸಿಕ್ಕಾಗ ಎಲ್ಲಾ ನಮ್ಮ‌ ಕುಟುಂಬಕ್ಕೆ ಬೇಕು ಅನ್ನುವವರಿಗೆ ಇದು ತಕ್ಕ ಪಾಠ. ಕುಟುಂಬ ರಾಜಕಾರಣ ಮಾಡುವವರಿಗೆ ಇದು ಪಾಠವಾಗಿದೆ. ಉದ್ಭವ ಠಾಕ್ರೆ ನಾಯಕತ್ವದ ವಿರುದ್ದ ನಡೆದಿರುವ ಹೋರಾಟ ಇದರಲ್ಲಿ ಬಿಜೆಪಿ ಪಾತ್ರ ಏನು ಇಲ್ಲ. ಸುಖಾ ಸುಮ್ಮನೆ ಸಿದ್ದರಾಮಯ್ಯ ಆರೋಪ ಮಾಡುತ್ತಿದ್ದಾರೆ ಅಷ್ಟೇ ಎಂದು ಸಂಸದ ಪ್ರತಾಪಸಿಂಹ ಹೇಳಿದರು.

RELATED ARTICLES
- Advertisment -
Google search engine

Most Popular

Recent Comments