Thursday, September 18, 2025
HomeUncategorizedಮತ್ತೆ ಮುನ್ನಲೆಗೆ ಬಂದ ಪಠ್ಯ ಪರಿಷ್ಕರಣೆ ಫೈಟ್

ಮತ್ತೆ ಮುನ್ನಲೆಗೆ ಬಂದ ಪಠ್ಯ ಪರಿಷ್ಕರಣೆ ಫೈಟ್

ಬೆಂಗಳೂರು: ರೋಹಿತ್ ಚಕ್ರತೀರ್ಥ ಸಮಿತಿಯ ಎಡವಟ್ಟು ಸರಿಪಡಿಸಲು ಮತ್ತೊಂದು ಸಮಿತಿ ಮೊರೆ ಹೋಗಿದ್ದು, ಸಿಎಂ ಸೂಚನೆಯಂತೆ ಪಠ್ಯದ ಎಡವಟ್ಟು ತಿದ್ದಲು ಶಿಕ್ಷಣ ಇಲಾಖೆ ಮುಂದಾಗಿದೆ.

ಪರಿಷ್ಕರಣೆ ವೇಳೆಯಾದಂತಹ ತಪ್ಪುಗಳನ್ನು ತಿದ್ದಲು ಮುಂದಾದ ಶಿಕ್ಷಣ ಇಲಾಖೆ ಚಕ್ರತೀರ್ಥ ಸಮಿತಿಯ ತಪ್ಪು ತಿದ್ದಲು ಮತ್ತೊಂದು ಸಮಿತಿ ರಚನೆಯನ್ನು ಮಾಡಿದ್ದಾರೆ. ರೋಹಿತ್ ಚಕ್ರತೀರ್ಥ ಸಮಿತಿಯಲ್ಲಿ ಪರಿಷ್ಕರಣೆ ವೇಳೆಯಾದ ಎಡವಟ್ಟಿನಿಂದಾಗಿ ತಜ್ಞ ಶಿಕ್ಷಕರ ನೇತೃತ್ವದಲ್ಲಿಯೇ ಪರಿಷ್ಕರಣೆಗೆ ಮುಂದಾಗಿದೆ.

ಹೊಸ ಸಮಿತಿಯಲ್ಲಿ ಶಿಕ್ಷಣ ತಜ್ಞರು ಚಿಂತಕರು ಸಾಹಿತಿಗಳು ಯಾರಿಗೂ ಮಣೆ ಹಾಕದ ಶಿಕ್ಷಣ ಇಲಾಖೆಯ ಮತ್ತೆ ವಿರೋಧ ಕೇಳಿ ಬರುವ ಆತಂಕದಿಂದ ಸಮಿತಿಯಲ್ಲಿ ಯಾರಿಗೂ ಅವಕಾಶ ನೀಡಲಿಲ್ಲ. ಹೀಗಾಗಿ ಶಿಕ್ಷಣ ಇಲಾಖೆಯೇ ತಪ್ಪುಗಳನ್ನ ಸರಿಪಡಿಸಲು ಮುಂದಾಗಿದೆ.
ಇನ್ನು, ಶಿಕ್ಷಣ ಇಲಾಖೆಯ ಡೈಯಟ್ ಪ್ರಾಶಂಪಾಲರು ಹಾಗೂ ನೂರಿತ ಶಿಕ್ಷಕರು ನೇತೃತ್ವದಲ್ಲಿ ಎಡವಟ್ಟು ಸರಿಪಡಿಸುವ ನಿಟ್ಟಿನಲ್ಲಿ ಪರಿಷ್ಕೃತ ತಪ್ಪುಗಳನ್ನ ಸರಿಪಡಿಸಿ ಮಕ್ಕಳಿಗೆ ನೀಡಲು ಶಿಕ್ಷಣ ಇಲಾಖೆ ಮುಂದಾಗಿದೆ.

RELATED ARTICLES
- Advertisment -
Google search engine

Most Popular

Recent Comments