Friday, September 19, 2025
HomeUncategorizedಅನೈತಿಕ ಸಂಬಂದಕ್ಕೆ ಅಣ್ಣಂದಿರಿಂದ ಪ್ರಿಯಕರನ ಹತ್ಯೆ: 12ಗಂಟೆಯಲ್ಲಿ ಕೊಲೆಗಡುಕರ ಬಂಧನ

ಅನೈತಿಕ ಸಂಬಂದಕ್ಕೆ ಅಣ್ಣಂದಿರಿಂದ ಪ್ರಿಯಕರನ ಹತ್ಯೆ: 12ಗಂಟೆಯಲ್ಲಿ ಕೊಲೆಗಡುಕರ ಬಂಧನ

ಹುಬ್ಬಳ್ಳಿ: ಕಳೆದ ರಾತ್ರಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಧಾರವಾಡ ಕಾಲೊನಿಯಲಿ ಅನೈತಿಕ ಸಂಬಂಧ ವಿಚಾರವಾಗಿ ಚಂದ್ರಶೇಖರ್ ಎನ್ನುವ ವ್ಯಕ್ತಿಗೆ ಯುವತಿಯ ಅಣ್ಣ ತಮ್ಮಂದಿರು ಚಾಕು ಇರಿದಿದ್ದಾರೆ ,ತೀವ್ರ ಗಾಯಗೊಂಡಿದ್ದ ಚಂದ್ರಶೇಖರ ಚಿಕೆತ್ಸೆ ಫಲಕಾರಿಯಾಗದೆ ಕಿಮ್ಸ್ ಆಸ್ಪತ್ರೆಯಲ್ಲಿ ಕೊನೆ ಉಸಿರು ಎಳೆದಿದ್ದಾನೆ.

ಆಟೋ ಚಾಲಕನಾಗಿದ್ದ ಚಂದ್ರಶೇಖರ ಆಟೋ ಓದಿಸಿಕೊಂಡು ಜೀವನ ಮಾಡುತ್ತಿದ್ದ, ಈಗಾಗಲೇ ಮಹಿಳೆ ಒಬ್ಬಳ ಜೊತೆ ಮದುವೆ ಆಗದೆ ಲಿವಿಂಗ್ ಟುಗೆದರ್ ರೀತಿ ಜೀವನ ಸಾಗಿಸುತ್ತಿದ್ದು ಇಷ್ಟಾದರೂ ಸುಮ್ಮನಾಗದೆ ಇನ್ನೊಬ್ಬ ಗಂಡನ ತೊರೆದು ಬಂದಿದ್ಸ  ವಿವಾಹಿತ ಮಹಿಳೆ ಜೊತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಂತೆ ಸದ್ಯ ಇದೆ ಅಕ್ರಮ ಸಂಬಂಧ ಚಂದ್ರಶೇಖರ್ ನ ಪ್ರಾಣ ತೆಗೆದಿದೆ.

ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಮೃತನಿಗೆ ಹಾಗೂ ಯುವತಿಗೆ ಆಕೆ ಅಣ್ಣಂದಿರು ಈಗಾಗಲೇ ವಾರ್ನಿಂಗ್ ಮಾಡಿದ್ದರು ಎಂದು ತಿಳಿದು ಬಂದಿದೆ ಇಬ್ಬರು ಸಂಪರ್ಕ ಇಟ್ಟುಕೊಳ್ಳಬೇಡಿ ಎಂದು ಹೇಳಿದರು ಫೋನ್ ನಲ್ಲಿ ತಮ್ಮ ಸರಸ ಸಲ್ಲಾಪ ಮುಂದುವರೆಸಿದ್ದರು,ನಿನ್ನೆ ಕೂಡ ಫೋನ್ ನಲ್ಲಿ ಮಾತನಾಡುವಾಗ ಯುವತಿ ಅಣ್ಣಂದಿರಾದ ಅಭಿ ಹಾಗೂ ವಿನಾಯಕ ತಮ್ಮ ತಂಗಿಯ ಜೊತೆ ಮೊದಲು ಜಗಳ ಮಾಡಿದ್ದಾರೆ ಈ ವೇಳೆ ಸ್ಥಳಕ್ಕ ಬಂದ ಚಂದ್ರು ನನ್ನು ಕಂಡು ಸಿಟ್ಟಾಗಿ ಜಗಳ ಶುರುವಾಗಿದೆ.

ಜಗಳ ತಾರಕಕ್ಕೆ ಏರಿ ಚಾಕು ಹಾಗೂ ಇನ್ನೊಂದು ಹರಿತವಾದ ಆಯುಧದಿಂದ ಅಬಿ ಹಾಗೂ ವಿನಾಯಕ ಚಂದ್ರು ನನ್ನು ಇರಿದಿದ್ದರು ಕೊನೆಗೆ ಚಿಕೆತ್ಸೆ ಫಲಕರಿಯಾಗಿದೆ ಕಿಮ್ಸ್ ನಲ್ಲಿ ಕೊನೆಯುಸಿರು ಎಳೆದಿದ್ದಾನೆ.

ಕೊಲೆ ನಡೆದ 12 ಗಂಟೆ ಒಳಗೆ ಹಳೆ ಹುಬ್ಬಳ್ಳಿ ಇನ್ಸ್ ಪೆಕ್ಟರ್ ಹಾಗೂ ಅವರ ತಂಡ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ, ಸದ್ಯ ಇಬ್ಬರನ್ನು ವಿಚಾರಣೆ ನಡೆಸುತ್ತಿದ್ದು ಕೊಲೆ ಪ್ರಕರಣದಲ್ಲಿ ಬಂಧಿಸಿದ್ದಾರೆ

ಇನ್ನು ಹಳೆ ಹುಬ್ಬಳ್ಳಿ ವ್ಯಾಪ್ತಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಡಿಸಿಪಿ ಸಾಹಿಲ್ ಬಾಗ್ಲ ಪಣ ತೊಟ್ಟಿದ್ದು ನೇರವಾಗಿ ಸಾರ್ವಜನಿಕರ ಬಳಿ ತೆರಳಿ ಮಾಹಿತಿ ಕಲೆ ಹಾಕುತ್ತಿದ್ದಾರೆ, ನಾಗರಿಕರಲ್ಲಿ ಭಯದ ವಾತಾವರಣ ಸೃಷ್ಟಿಸುವ ಜನರನ್ನ ಹೆಡೆಮುರಿ ಕಟ್ಟುವದಾಗಿ ಸ್ಪಷ್ಟಪಡಿಸಿದ್ದಾರೆ.

ಮಲ್ಲಿಕ್ ಬೆಳಗಲಿ, ಪವರ್ ಟಿವಿ ಹುಬ್ಬಳ್ಳಿ

RELATED ARTICLES
- Advertisment -
Google search engine

Most Popular

Recent Comments