Tuesday, September 16, 2025
HomeUncategorizedಮೃತರ ಸಂತಾಪದಲ್ಲಿ ಸಕ್ರಿಯವಾಗಿ ಭಾಗಿಯಾದ ಮಂಗ

ಮೃತರ ಸಂತಾಪದಲ್ಲಿ ಸಕ್ರಿಯವಾಗಿ ಭಾಗಿಯಾದ ಮಂಗ

ಕಲಬುರಗಿ : ಮೃತರ ಸಂತಾಪದಲ್ಲಿ ಮಂಗವೊಂದು ಸಕ್ರಿಯವಾಗಿ ಭಾಗಿಯಾಗಿರೋ ವಿಚಿತ್ರ ಘಟನೆ ಕಲಬುರಗಿ ಜಿಲ್ಲೆ ಮಾಲಗತ್ತಿ ಗ್ರಾಮದಲ್ಲಿ ನಡೆದಿದೆ. ಮಂಗನ ನಡವಳಿಕೆ ಕಂಡು ಗ್ರಾಮಸ್ಥರಿಗೆಲ್ಲಾ ಅಚ್ಚರಿಯಾಗಿದ್ದಾರೆ. ಎರಡು ದಿನದ ಹಿಂದಷ್ಟೇ ಗ್ರಾಮಕ್ಕೆ ಆಗಮಿಸಿದ್ದ ಮಂಗ ಮೃತ ಮಹಿಳೆಯ ಶವದ ಬಳಿ ಇಡೀ ರಾತ್ರಿ ಜಾಗರಣೆ ಮಾಡಿದೆ.

ನಿನ್ನೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಅನಾರೋಗ್ಯದಿಂದ ಮೃತಪಟ್ಟಿರುವ 70 ವರ್ಷದ ಮಹಿಳೆ ಶಾಂತಾಬಾಯಿ ಶವದ ಸುತ್ತ ದುಖಿಸುತ್ತಾ ಸಂಬಂಧಿಕರ ಜೊತೆಗೂಡಿ ಮಂಗ ಕುಳಿತಿದೆ. ಈ ಕುಟುಂಬಕ್ಕೆ ಕಿಂಚಿತ್ತೂ ಸಂಪರ್ಕ ಇಲ್ಲದಿದ್ರೂ ಇಡೀ ರಾತ್ರಿ ಯಾರಿಗೂ ಹೆದರದೇ ಶವದ ಬಳಿ ಸೈಲೆಂಟಾಗಿ ಮಂಗ ಕುಳಿತಿದೆ.

ಅದಲ್ಲದೇ, ಮಂಗನ ಬಳಿ ಕೂರಲು ಕೆಲ ಮಹಿಳೆಯರೇ ಹೆದರಿದರು ಆದರೆ ಮಂಗ ಹೆದರಲಿಲ್ಲ. ನಿನ್ನೆ ರಾತ್ರಿ ಎಂಟು ಗಂಟೆಯಿಂದ ಬೆಳಗ್ಗೆ ಎಂಟು ಗಂಟೆಯವರೆಗೂ ಶವ ಬಿಟ್ಟು ಕದಲದೆ ಮಂಗ ಕೂತಿದೆ. ಶವ ಸಂಸ್ಕಾರದ ವಿಧಿ ವಿಧಾನಕ್ಕೆ ಅಡಚಣೆಯಾದ ಕಾರಣ ಜನರೇ ಹಿಡಿದು ಚೀಲದಲ್ಲಿ ಹಾಕಿ ಅರಣ್ಯ ಇಲಾಖೆಗೆ ಒಪ್ಪಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments