Thursday, September 18, 2025
HomeUncategorizedಸಚಿವ ಉಮೇಶ್ ಕತ್ತಿ ಹೇಳಿಕೆಗೆ ಅಶ್ವಥ್ ನಾರಾಯಣ್ ಅಸಮಾಧಾನ

ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಅಶ್ವಥ್ ನಾರಾಯಣ್ ಅಸಮಾಧಾನ

ಹಾಸನ : ಅರಣ್ಯ ಸಚಿವ ಉಮೇಶ್ ಕತ್ತಿ ಹೇಳಿಕೆಗೆ ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹಾಸನದಲ್ಲಿ ಮಾತನಾಡಿದ ಅವರು, ಖಂಡಿತಾ ಅವರು ಇಂತಹ ಹೇಳಿಕೆಯನ್ನು ಕೊಡಬಾರದು ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರು ಈ ರೀತಿ ಪ್ರತ್ಯೇಕ ರಾಜ್ಯ ಇನ್ನೊಂದು ಮತ್ತೊಂದು ಅಂತಾ ಹಗುರವಾಗಿ ಮಾತನಾಡಬಾರದು, ಅವರ ಹೇಳಿಕೆಯನ್ನು ಆರೂವರೆ ಕೋಟಿ ಜನರ ಪರವಾಗಿ ಖಂಡಿಸುತ್ತೇನೆ ಎಂದರು.

ಇದು ನಾವು ನೀವು ಮಾಡಿರೋದಲ್ಲ ಸ್ವಾಮಿ ನಾಡಿನ ಹಿರಿಯರು ಸಾಹಿತಿಗಳು ಬಹಳಷ್ಟು ಭಾವನಾತ್ಮಕವಾಗಿ ಆರು ರಾಜ್ಯವಾಗಿ ಹರಿದು ಹಂಚಿಹೋಗಿದ್ದನ್ನ ಒಂದುಗೂಡಿಸಿ ಕರ್ನಾಟಕ ನಿರ್ಮಾಣ ಮಾಡಿರೋದು, ಇದರ ಮಹತ್ವ ಇದರ ಶಕ್ತಿ ಅರಿಯಬೇಕು ಅವರು, ಆಗಿದ್ದಾಂಗೆ ಮೊದಲಿನಿಂದಲೂ ಇಂತಹ ಹೇಳಿಕೆ ಕೊಡುತ್ತಾರೆ ಈ ರೀತಿ ಹೇಳಿಕೆ ಕೊಟ್ಟಿರೋದಕ್ಕೆ ಸಂಪೂರ್ಣವಾಗಿ ಖಂಡಿಸುತ್ತೇನೆ ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರಲ್ಲಿ ಇಂತಹ ಚಿಂತನೆ ಇರೋದಿಲ್ಲ ಅವರದೇನಿದ್ದರೂ ಸಮಾಜ ಉತ್ತಮಗೊಳಿಸೋ ಆಲೋಚನೆ ಕನ್ನಡನಾಡಿನ ವಿಭಜನೆ ಪ್ರತ್ಯೇಕ ಅನ್ನೋ ಪ್ರಶ್ನೆ ಇಲ್ಲ ಅವರು ದಯವಿಟ್ಟು ಅವರ ಮಾತಿನಲ್ಲಿ ಪ್ರಧಾನಿ ಹೆಸರು ತರೋ ಪ್ರಯತ್ನ ಮಾಡೋದು ಬೇಡಾ ಎಂದು ಡಾ.ಅಶ್ವಥ್ ನಾರಾಯಣ್ ಮನವಿ ಮಾಡಿದರು.

ಸಚಿನ್ ಶೆಟ್ಟಿ ಪವರ್​​ ಟಿವಿ

RELATED ARTICLES
- Advertisment -
Google search engine

Most Popular

Recent Comments