Tuesday, September 16, 2025
HomeUncategorizedಅಪ್ಪು ಇಲ್ಲದ ಮೊದಲ​ ಅಣ್ಣಾವ್ರ ಫ್ಯಾಮಿಲಿ​ ಪೋಟೋ

ಅಪ್ಪು ಇಲ್ಲದ ಮೊದಲ​ ಅಣ್ಣಾವ್ರ ಫ್ಯಾಮಿಲಿ​ ಪೋಟೋ

ಬೆಂಗಳೂರು: ಶಿವರಾಜ್ ಕುಮಾರ್ ನಟನೆಯ 125ನೇ ಚಿತ್ರ ‘ವೇದ’ ಚಿತ್ರದ ಟೀಸರ್ ಹಾಗೂ ಗೀತಾ ಪಿಕ್ಚರ್ಸ್ ಬ್ಯಾನರ್ ಲಾಂಚ್ ಅದ್ದೂರಿಯಾಗಿ ನಡೆದಿದೆ. ಗೀತಾ ಶಿವರಾಜ್ ಕುಮಾರ್ ನಿರ್ಮಾಣದ ಚೊಚ್ಚಲ ಚಿತ್ರ ವೇದ ಚಿತ್ರದ ಟೀಸರ್ ವೀಕ್ಷಿಸಲು ಅಭಿಮಾನಿಗಳಿಗೆ ಅವಕಾಶ ದೊರೆತಂತಾಗಿದೆ. ಪಾರ್ವತಮ್ಮ ರಾಜ್ ಕುಮಾರ್ ರೀತಿ ಚಿತ್ರ ನಿರ್ಮಾಣದತ್ತ ಗೀತಾ ಶಿವರಾಜ್​ಕುಮಾರ್ ಮುನ್ನೆಡೆಯುತ್ತಿದ್ದಾರೆ. ಕ್ರಿಕೆಟಿಗ ಅನಿಲ್ ಕುಂಬ್ಳೆ ಶಿವಣ್ಣ ಅಭಿನಯದ 125ನೇ ಚಿತ್ರ ವೇದ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ಗೀತಾ ಪಿಕ್ಚರ್ಸ್ ಲೋಗೊ ಲಾಂಚ್ ಅನಂತ್ ನಾಗ್ ಬಿಡುಗಡೆಗೊಳಿಸಿದ್ದಾರೆ. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್​ನ ವೈಟ್ ಪೆಟಲ್ಸ್​ನಲ್ಲಿ ಶಿವರಾಜ್ ಕುಮಾರ್ ನಟನೆಯ 125ನೇ ಚಿತ್ರ ‘ವೇದ’ ಚಿತ್ರದ ಟೀಸರ್ ಹಾಗೂ ಗೀತಾ ಪಿಕ್ಚರ್ ಲಾಂಚ್ ಕಾರ್ಯಕ್ರಮ ಅದ್ದೂರಿಯಾಗಿ ನಡೆಯುತ್ತಿದೆ.

ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರನ್ನು ಶಿವರಾಜ್ ಕುಮಾರ್ ವೇದಿಕೆ ಮೇಲೆ ಕರೆದುಕೊಂಡು ಹೋಗಿದ್ದಾರೆ. ಇಡೀ ಕುಟುಂಬವನ್ನ ಸ್ಟೇಜ್ ಗೆ ಕರೆದ ಶಿವಣ್ಣ ಪುನೀತ್ ರಾಜ್ ಕುಮಾರ್ ಇಬ್ಬರು ಮಕ್ಕಳನ್ನ ಕರೆದು ಪಕ್ಕದಲ್ಲಿ ನಿಲ್ಲಿಸಿಕೊಂಡು ಇಡೀ ಕುಟುಂಬದ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಚಿತ್ರರಂಗದ ಹಲವು ಗಣ್ಯರು ಆಗಮಿಸಿದ್ರು.

RELATED ARTICLES
- Advertisment -
Google search engine

Most Popular

Recent Comments