Friday, September 5, 2025
HomeUncategorizedಏಳೂವರೆ ವರ್ಷದ ಮಗನ ಉಳಿಸಿಕೊಡಲು ದೇವರ ಮೊರೆ ಹೋದ ತಾಯಿ

ಏಳೂವರೆ ವರ್ಷದ ಮಗನ ಉಳಿಸಿಕೊಡಲು ದೇವರ ಮೊರೆ ಹೋದ ತಾಯಿ

ಬೆಳಗಾವಿ : ಏಳೂವರೆ ವರ್ಷದ ಮಗನ ಉಳಿಸಿಕೊಡಲು ದೇವರ ಮೊರೆ ಹೋದ ಘಟನೆ ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ನಂದಗಡ ಗ್ರಾಮದಲ್ಲಿ ನಡೆದಿದೆ.

ನಂದಗಡ ಗ್ರಾಮದ ಐತಿಹಾಸಿಕ ಶಿಲುಬೆ(Holy Cross) ಬಳಿ ಮಗು ಮಲಗಿಸಿ ಪ್ರಾರ್ಥನೆಯನ್ನು ಮಾಡಲಾಗಿದ್ದು, ಮೆದುಳು ಜ್ವರದಿಂದ ಬಳಲುತ್ತಿರುವ ಏಳೂವರೆ ವರ್ಷದ ಶೈಲೇಶ್, ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡಿ ಸುಸ್ತಾಗಿ ತಂದೆ ತಾಯಿ ದೇವರ ಮೊರೆ ಹೋಗಿದ್ದಾರೆ.

ದೇವರ ಮೊರೆ ಅಂಬರಡಾ ಗ್ರಾಮದ ಕೃಷ್ಣಾ ಸುತ್ರಾವಿ ದಂಪತಿ. ಕಳೆದ ಕೆಲ ತಿಂಗಳ ಹಿಂದೆ ಅನಾರೋಗ್ಯದಿಂದ ಬಳಲುತ್ತಿದ್ದ ಕೃಷ್ಣಾ ಪುತ್ರ ಶೈಲೇಶ್. ಎರಡು ತಿಂಗಳು ಕಳೆದರೂ ಗುಣಮುಖನಾಗದ ಹಿನ್ನೆಲೆ ಮನೆಗೆ ಕರೆದೊಯ್ಯಲು ಸಲಹೆಯನ್ನು ನೀಡಿದ್ದಾರೆ. ಅರ್ಧ ಗಂಟೆ ಮಾತ್ರ ಬದುಕುತ್ತಾನೆ ಎಂದು ವೈದ್ಯರು ಹೇಳಿದ್ದಾರೆ.

ಇನ್ನು ಆರು ದಿನ ಮನೆಯಲ್ಲಿ ಇಟ್ಟುಕೊಂಡು ನಂದಗಡಕ್ಕೆ ಬಂದಿದ್ದ ಕುಟುಂಬಸ್ಥರು, ಶಿಲುಬೆ ಎದುರು ಮಗುವನ್ನು ಮಲಗಿಸಿ ಮಗು ಬದುಕಿಸಿಕೊಡುವಂತೆ ಪ್ರಾರ್ಥನೆ ಮಾಡಿದ್ದಾರೆ. ಪ್ರಾರ್ಥನೆ ಮಾಡಿದ ಬಳಿಕ ಮಗುವನ್ನು ಕುಟುಂಬಸ್ಥರು ಮನೆಗೆ ಕರೆದುಕೊಂಡು ಹೋಗಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments