Sunday, September 7, 2025
HomeUncategorizedಮಾದಕ ವಸ್ತು ಮುಕ್ತ ಕರ್ನಾಟಕ

ಮಾದಕ ವಸ್ತು ಮುಕ್ತ ಕರ್ನಾಟಕ

ಚಿಕ್ಕಮಗಳೂರು : ಮಾದಕ ವ್ಯಸನ ಮುಕ್ತ ರಾಜ್ಯಕ್ಕಾಗಿ ಅರಿವು ಮೂಡಿಸಲು ಕಾಫಿನಾಡು ಚಿಕ್ಕಮಗಳೂರಿನಲ್ಲಿ ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು ನಗರದ ಹನುಮಂತಪ್ಪ ವೃತ್ತದಿಂದ ಆಜಾದ್ ವೃತ್ತದವರೆಗೆ ಅರಿವು ಮೂಡಿಸುವ ಬ್ಯಾನರ್ ಹಾಗೂ ಭಿತ್ತಿ ಪತ್ರಗಳನ್ನು ಹಿಡಿದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ರಾಜ್ಯ ಸೇರಿದಂತೆ ದೇಶದಲ್ಲಿ ಯುವ ಸಮುದಾಯ ಮಾದಕ ವ್ಯಸನಿಗಳ ಆಗುವವರ ಸಂಖ್ಯೆ ಹೆಚ್ಚಾಗುತ್ತಿದೆ, ಕೂಡಲೇ ಎಚ್ಚೆತ್ತುಕೊಳ್ಳದಿದ್ದರೆ ಮುಂದೆ ಆಗುವ ಅನಾಹುತಕ್ಕೆ ಸಮಾಜ ಬೆಲೆ ತೆರಬೇಕಾಗುತ್ತದೆ. ಆದ್ದರಿಂದ ವೇತನ ತನದಿಂದ ಹೊರಬಂದು ಜೀವನ ಕಟ್ಟಿಕೊಳ್ಳುವುದು ಹೇಗೆ ಅನ್ನುವ ಅರಿವು ಮೂಡಿಸುವ ಪ್ರಯತ್ನ ಈ ಜಾಥಾದ ಉದ್ದೇಶ. ಎನ್ ಸಿಸಿ , ಎನ್ ಎಸ್ ಎಸ್ ವಿದ್ಯಾರ್ಥಿಗಳು ಸೇರಿದಂತೆ ವಿವಿಧ ಶಾಲಾ ಕಾಲೇಜುಗಳ ಉಪನ್ಯಾಸಕರು ಹಾಗೂ ಅಧಿಕಾರಿಗಳು ಭಾಗವಹಿಸಿದ್ದರು.

 

RELATED ARTICLES
- Advertisment -
Google search engine

Most Popular

Recent Comments