Friday, August 29, 2025
HomeUncategorizedಕಾರವಾರದಲ್ಲಿ ಆರದ ಭಾಷಾ ವಿವಾದದ ಕಿಚ್ಚು

ಕಾರವಾರದಲ್ಲಿ ಆರದ ಭಾಷಾ ವಿವಾದದ ಕಿಚ್ಚು

ಕಾರವಾರ: ನಗರದ ವಿವಿಧ ಬಡಾವಣೆಗಳಲ್ಲಿ ಅಳವಡಿಸಲಾಗಿದ್ದ ನಾಮಫಲಕದ ಮೇಲೆ ನಗರಸಭೆ ಕನ್ನಡದ ಜೊತೆಗೆ ದೇವನಾಗರಿ ಲಿಪಿಯಲ್ಲಿ ಆಯಾ ಬಡಾವಣೆಗಳ ಹೆಸರು ಬರೆಯಲಾಗಿತ್ತು. ಇದು ಕನ್ನಡ ಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿತ್ತು. ನಾಮಫಲಕದ ಮೇಲೆ ಹಿಂದೆ ಎಂದೂ ಇರದ ದೇವನಾಗರಿ ಲಿಪಿಯನ್ನು ಬರೆದು ಒಂದಿಷ್ಟು ವಿವಾದಕ್ಕೆ ಕಾರಣವಾಗಿತ್ತು. ಇದರಿಂದ ಆಕ್ರೋಶಗೊಂಡ ಕನ್ನಡಪರ ಸಂಘಟನೆಯ ಪ್ರವೀಣ್ ಶೆಟ್ಟಿ ಬಣದ ಕಾರ್ಯಕರ್ತರು ದೇವನಾಗರಿ ಲಿಪಿಗೆ ಕಪ್ಪು ಮಸಿ ಬಳಿಯುವ ಮೂಲಕ ಆಕ್ರೋಶ ಹೊರಹಾಕಿದ್ದರು.

ಕನ್ನಡಿಗರ ಹೋರಾಟಕ್ಕೆ ಮಣಿದ ನಗರಸಭೆ, ಒಂದೆರಡು ದಿನದಲ್ಲಿ ನಗರದ ಎಲ್ಲಾ ಕಡೆ ಬರೆಯಲಾಗಿದ್ದ ದೇವನಾಗರಿ ಲಿಪಿಯನ್ನು ಅಳಿಸಿ ಹಾಕುವ ಮೂಲಕ ಕನ್ನಡ ಪರ ಹೋರಾಟಗಾರರಿಗೆ ಸಮಾಧಾನ ಮಾಡಲು ಮುಂದಾಗಿತ್ತು. ಆದ್ರೆ, ಇದೀಗ ದೇವನಾಗರಿ ಲಿಪಿ ಅಳಿಸಿ ಕೇವಲ ಕನ್ನಡ ನಾಮಫಲಕವನ್ನು ಮಾತ್ರ ಬಿಟ್ಟಿರೋದು ಕೊಂಕಣಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಇನ್ನೂ ನಗರಸಭೆಯೇನೋ ದೇವನಾಗರಿ ಲಿಪಿ ಅಳಿಸಿದೆ. ಆದ್ರೆ, ಸದ್ಯ ವಿವಾದ ತಣ್ಣಗಾಗಿಲ್ಲ. ಅದಕ್ಕೆ ದೇವನಾಗರಿ ಲಿಪಿ ಬಳಸಿದ್ದರಿಂದ ಅದು ಮರಾಠಿಯನ್ನೇ ಹೋಲುತ್ತಿತ್ತು. ಅದಕ್ಕೆ ಕನ್ನಡ ಸಂಘಟನೆಗಳು ಪ್ರತಿಭಟಿಸಿ ಫಲಕಕ್ಕೆ ಮಸಿ ಬಳಿದರು. ಅದನ್ನು ಖಂಡಿಸಿ ಕೊಂಕಣಿ ಭಾಷಿಕರು ಪ್ರತಿಭಟನಾಕಾರರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಬೆನ್ನಲ್ಲೇ ನೂರಾರು ಸಂಖ್ಯೆಯಲ್ಲಿ ಸೇರಿದ ಕೊಂಕಣಿ ಭಾಷಿಕರು ಪ್ರತಿಭಟನೆ ಮಾಡಿ, ಪುನಃ ನಾಮಫಲಕದ ಮೇಲೆ ಕನ್ನಡ ಜೊತೆಗೆ ದೇವನಾಗರಿ ಲಿಪಿಯಲ್ಲಿಯೂ ಆಯಾ ಬಡಾವಣೆಗಳ ಹೆಸರುಗಳನ್ನು ಹದಿನೈದು ದಿನಗಳಲ್ಲಿ ಬರೆಯಬೇಕು.ಇಲ್ಲದೆ ಹೋದ್ರೆ ಮುಂದಿನ ದಿನಗಳಲ್ಲಿ ಕಾರವಾರ ಬಂದ್ ಮಾಡೋ ಮೂಲಕ ಹೋರಾಟ ಮಾಡುವುದಾಗಿ ಎಚ್ಚರಿಸಿದ್ರು.

ಒಟ್ಟಾರೆ ಕಾರವಾರ ನಗರದಲ್ಲಿನ ಬಡಾವಣೆಗಳ ನಾಮಫಲಕದಲ್ಲಿನ ಕನ್ನಡ ಹಾಗೂ ದೇವನಾಗರಿ ಬರಹ ವಿವಾದ ಈಗ ಬೂದಿ ಮುಚ್ಚಿದ ಕೆಂಡದಂತಾಗಿದೆ.ಹೀಗಾಗಿ ನಗರಸಭೆ ಒಂದೊಳ್ಳೆ ನಿರ್ಧಾರಕ್ಕೆ ಬಂದು ವಿವಾದ ತಣ್ಣಗಾಗಿಸಬೇಕಾಗಿದೆ.

ಉದಯ ಬರ್ಗಿ ಪವರ್ ಟಿವಿ ಕಾರವಾರ

RELATED ARTICLES
- Advertisment -
Google search engine

Most Popular

Recent Comments