Wednesday, September 3, 2025
HomeUncategorized‘ಬ್ರಹ್ಮಾಸ್ತ್ರ’ಕ್ಕೆ ಬಾಲಿವುಡ್ ಶೇಕ್..ರಣಬೀರ್ ರಣರೌದ್ರನರ್ತನ

‘ಬ್ರಹ್ಮಾಸ್ತ್ರ’ಕ್ಕೆ ಬಾಲಿವುಡ್ ಶೇಕ್..ರಣಬೀರ್ ರಣರೌದ್ರನರ್ತನ

ಬಾಲಿವುಡ್ ಪ್ಲೇ ಬಾಯ್ ರಣಬೀರ್ ಕಪೂರ್ ಆದಿಯೋಗಿ ಶಿವನ ಅವತಾರದಲ್ಲಿ ಬೆಂಕಿಕಾರುತ್ತಿದ್ದಾರೆ‌. ರಣರೋಚಕ ಸೀನ್ಗಳ ಮೂಲಕ ಇಡೀ ಬಾಲಿವುಡ್ ಶೇಕ್ ಮಾಡಿದ್ದಾರೆ ರಣಬೀರ್. ಇದು ಮಾಮೂಲಿ ಟ್ರೈಲರ್ ಅಲ್ಲ. ಹಾಲಿವುಡ್ ಕೂಡ ನಾಚುವ ಅದ್ಭುತ, ಅಮೋಘ, ಅತಿರೋಚಕ ಮಹಾ ದೃಶ್ಯ ವೈಭವ.

ಒಂದೇ ಏಟಿಗೆ ಹಾಲಿವುಡ್ ಥಂಡಾ ಹೊಡೆಸಿದ ಟ್ರೈಲರ್

ಶಿವನ ಬೆಂಕಿ ಅವತಾರದಲ್ಲಿ ರಣಬೀರ್​​​ ರಣರೌದ್ರನರ್ತನ

ಫ್ಯಾಂಟಸಿ ಟ್ರೈಲರ್ ಝಲಕ್​​ ನೋಡಿ ಫ್ಯಾನ್ಸ್ ಪುಳಕಿತ

ಅಬ್ಬಬ್ಬ..! ಏನ್ ಗ್ರಾಫಿಕ್ಸ್​​ ಗುರು…ಶಾಕ್ ಆದ ಪ್ರೇಕ್ಷಕ

ರಣಬೀರ್ ಕಪೂರ್, ಆಲಿಯಾಭಟ್ ಅಭಿನಯದಲ್ಲಿ ಸಿಕ್ಕಾಪಟ್ಟೆ ಕ್ರೇಜ್ ಹುಟ್ಟಿಸಿದ್ದ ಸಿನಿಮಾ ಬ್ರಹ್ಮಾಸ್ತ್ರ. ಇದೀಗ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು, ಪ್ರೇಕ್ಷಕರನ್ನು ಹೊಸ ಪ್ರಪಂಚಕ್ಕೆ ಕೊಂಡೋಯ್ದಿದೆ. ಮೂಖವಿಸ್ಮಿತರಾಗಿರುವ ಪ್ರೇಕ್ಷಕರು ಅಸಾಮಾನ್ಯ ಟ್ರೈಲರ್ ಇದು ಅಂತಿದಾರೆ. ಮಂತ್ರಮುಗ್ಧಗೊಳಿಸುವ ಪ್ರಾಮಿಸಿಂಗ್ ಸಿನಿಮಾ ಬ್ರಹ್ಮಾಸ್ತ್ರ ಅಂತಾ ಹಾಡಿ ಕೊಂಡಾಡುತ್ತಿದ್ದ್ದಾರೆ.

ಪ್ರಣಯ ಪಕ್ಷಿಗಳಾದ ರಣಬೀರ್ ಹಾಗೂ ಆಲಿಯಾ ಭಟ್ ಕಾಂಬಿನೇಷನ್ನ ಬಹು ಕೋಟಿ ವೆಚ್ಚದ ಸಿನಿಮಾ ಬ್ರಹ್ಮಾಸ್ತ್ರ. ಇದ್ರ ಜೊತೆಗೆ ಸೂಪರ್ ಸ್ಟಾರ್ಸ್ ಅಮಿತಾಭ್ ಬಚ್ಚನ್, ನಾಗಾರ್ಜುನ್, ಮೌನಿ ರಾಯ್ ಹೀಗೆ ಘಟಾನುಘಟಿಗಳ ತಾರಾಗಣದಲ್ಲಿ ಮೆಗಾ ಸೂಪರ್​​ ಡೂಪರ್ ಸಿನಿಮಾಗಳ ಸಾಲಿಗೆ ಸೇರೋಕೆ ಸಜ್ಜಾಗಿದೆ ಬ್ರಹ್ಮಾಸ್ತ್ರ. ಸ್ಟಾರ್ ಸ್ಟುಡಿಯೋದಲ್ಲಿ ಈ ಚಿತ್ರದ ಟ್ರೈಲರ್ ರಿಲೀಸ್ ಆಗಿದ್ದು ಮಿಲಿಯನ್‌ಗಟ್ಟಲೆ ಹಿಟ್ಸ್ ದಾಖಲಿಸಿ ನಾಗಾಲೋಟದಲ್ಲಿ ಶರವೇಗದ ವ್ಯೂ ಕಾಣ್ತಿದೆ.

ಈ ಪ್ರಪಂಚದಲ್ಲಿ ಅಗ್ನಿ, ವಾಯು, ಜಲ ಶಕ್ತಿಗಳನ್ನು ಎಲ್ಲಾ ಅಸ್ತ್ರಗಳಲ್ಲಿ ಬಂಧಿಸಲಾಗಿದೆ. ಎಲ್ಲಾ ಅಸ್ತ್ರಗಳ ದೇವತೆಯ ಕಥೆಯಿದು. ಅದುವೇ ಬ್ರಹ್ಮಾಸ್ತ್ರ. ಬ್ರಹ್ಮಾಸ್ತ್ರದ ಅದೃಷ್ಟದ ಒಡೆಯನಾಗಿ ರಣಬೀರ್ ಕಪೂರ್ ನಟಿಸಿದ್ದಾರೆ. ಅವನಿಗೆ ಬೆಂಕಿಯೇ ಅಸ್ತ್ರ. ನಾಯಕಿಯಾಗಿ ಆಲಿಯಾ ಭಟ್ ಗ್ಲಾಮರಸ್ ಆಗಿ ಕಾಣುತ್ತಾರೆ. ಚಿತ್ರದಲ್ಲಿ ಅತ್ಯದ್ಭುತ ಗ್ರಾಪಿಕ್ಸ್ ಮೈನ್ ಹೈಲೇಟ್ ಆಗಿದೆ.ಪ್ಯಾನ್ ಇಂಡಿಯಾ ಮಟ್ಟದಲ್ಲಿ ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸೆಪ್ಟೆಂಬರ್ 09 ಕ್ಕೆ ರಿಲೀಸ್ ಆಗಲಿದೆ.

ಬ್ರಹ್ಮಾಸ್ತ್ರ ಸಿನಿಮಾ ಒಟ್ಟು ಮೂರು ಭಾಗಗಳಲ್ಲಿ ತಯಾರಾಗ್ತಿದೆ. ಮೊದಲ ಭಾಗಕ್ಕೆ ಬ್ರಹ್ಮಾಸ್ತ್ರ ಪಾರ್ಟ್ 1 ಶಿವ ಎಂದು ಹೆಸರಿಡಲಾಗಿದೆ. ಶಿವನಾಗಿ ರಣಬೀರ್, ಇಶಾ ಪಾತ್ರದಲ್ಲಿ ಆಲಿಯಾ ಎಲ್ಲರ ಕಣ್ಣು ಕುಕ್ಕುತ್ತಾರೆ. ಹಿಂದೆಂದೂ ನೋಡಿರದ ಜಗತ್ತನ್ನು ತೋರಿಸೋಕೆ ಚಿತ್ರತಂಡ ಸಜ್ಜಾಗಿದೆ. ಕೋಟಿ ಕೋಟಿ ಹಣವನ್ನು ನೀರಿನಂತೆ ಸುರಿದು ಎಲ್ಲರನ್ನು ಹೊಸ ಜಗತ್ತಿಗೆ ಕರೆದೊಯ್ಯಲಿದೆ ಬ್ರಹ್ಮಾಸ್ತ್ರ. ನಿಗೂಢ ಶಕ್ತಿಯ ಹಿಂದಿನ ಕಥೆ ಇದು. ಅಯನ್ ಮುಖರ್ಜಿ ನಿರ್ದೇಶನದಲ್ಲಿ ಹೊಸ ಇತಿಹಾಸಕ್ಕೆ ಭಾಷ್ಯ ಬರೆಯಲಿದೆ ಬ್ರಹ್ಮಾಸ್ತ್ರ ಸಿನಿಮಾ.

ರಾಕೇಶ್ ಆರುಂಡಿ, ಫಿಲ್ಮ್‌ ಬ್ಯೂರೋ, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments