Thursday, September 18, 2025
HomeUncategorizedಫ್ಲೆಕ್ಸ್​ಗಳನ್ನ ಹಾಕಿ ನಗರದ ಸೌಂದರ್ಯ ಹಾಳುಮಾಡಬೇಡಿ : ಪ್ರತಾಪ್ ಸಿಂಹ

ಫ್ಲೆಕ್ಸ್​ಗಳನ್ನ ಹಾಕಿ ನಗರದ ಸೌಂದರ್ಯ ಹಾಳುಮಾಡಬೇಡಿ : ಪ್ರತಾಪ್ ಸಿಂಹ

ಮೈಸೂರು‌: ನಮ್ಮ ಪಕ್ಷದವರೇ ಇರಲಿ, ಸಂಘ ಸಂಸ್ಥೆಗಳು ಯಾವುದೇ ಫ್ಲೆಕ್ಸ್​ಗಳನ್ನ ಹಾಕಿ ಮೈಸೂರು ನಗರದ ಸೌಂದರ್ಯವನ್ನು ಹಾಳುಮಾಡಬೇಡಿ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರು ಇದೇ ತಿಂಗಳು 21ಕ್ಕೆ ಆಗಮಿಸುತ್ತಿದ್ದಾರೆ. ಈ ವೇದಿಕೆ ಮೋದಿ ಅವರು ಯೋಗ ಮಾಡುವ ವೇದಿಕೆಯಾಗಿದ್ದು, ರಾಜಕೀಯ ವೇದಿಕೆಯಲ್ಲಾ. ಅವರ ಜೊತೆ ನನ್ನನ್ನು ಸೇರಿದಂತೆ ಸ್ಥಳೀಯ ಯಾವ ಶಾಸಕರಿಗೂ ಮೋದಿ ಅವರ ವೇದಿಕೆಯಲ್ಲಿ ಸ್ಥಾನ ಇರುವುದಿಲ್ಲಾ. ಅವರ ಜೊತೆ ಮುಖ್ಯಮಂತ್ರಿ, ರಾಜ್ಯಪಾಲರು, ಕೇಂದ್ರ ಆಯುಷ್ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಮಾತ್ರ ಅವಕಾಶವಿದ್ದು, ನಾವೆಲ್ಲಾ ರಾಜಕಾರಣಿಗಳು ವೇದಿಕೆಯ ಕೆಳಭಾಗದ ಒಂದು ಬದಿಯಲ್ಲಿರುತ್ತೇವೆ ಇದರಲ್ಲಿ ಯಾವ ಬದಲಾವಣೆಗಳು ಇಲ್ಲಾ ಎಂದು ತಿಳಿಸಿದರು.

ಇನ್ನು ನನ್ನ ಮತ್ತು ರಾಮದಾಸ್ ನಡುವೆ ಈ ವಿಚಾರದಲ್ಲಿ ಯಾವುದೇ ಕ್ರೆಡಿಟ್ ವಾರ್ ನಡೆಯುತ್ತಿಲ್ಲಾ. ವೇದಿಕೆ ಮುಂಭಾಗ 7 ಸಾವಿರ ಜನಕ್ಕೆ ಅವಕಾಶ ಇರುತ್ತದೆ. ಒಟ್ಟಾರೆ ಅರಮನೆಯ ಎಲ್ಲಾ ಭಾಗವೂ ಸೇರಿ 15 ಸಾವಿರ ಜನಕ್ಕೆ ಅವಕಾಶವಾಗಬಹುದು. ಆದರೆ ಎಲ್ಲರಿಗೂ ಮೋದಿ ಅವರು ಕಾಣುವುದಿಲ್ಲಾ. ಈಗಾಗಲೇ ನೊಂದಣಿ ಆರಂಭವಾಗಿದೆ. ನೊಂದಣಿ ಮಾಡಿಕೊಂಡವರಿಗೆ ಮಾತ್ರ ಯೋಗ ಮಾಡಲು ಅವಕಾಶವಿರುವುದು ಎಂದರು.

ಅಷ್ಟೇ ಅಲ್ಲದೇ ಮೋದಿ ಅವರಿಗೆ ಸ್ವಾಗತ ಕೋರುವ ಫ್ಲೆಕ್ಸ್​​ಗಳನ್ನ ಯಾರು ಹಾಕಬೇಡಿ. ಸರ್ಕಾರವೇ ಮೋದಿ ಅವರ ಸ್ವಾಗತದ ಬ್ಯಾನರ್ ಗಳನ್ನ ಹಾಕುತ್ತದೆ. ಅಲ್ಲದೇ ಫ್ಲೆಕ್ಸ್​ಗಳನ್ನ ಹಾಕಿ ಮೈಸೂರು ನಗರದ ಸೌಂದರ್ಯವನ್ನು ಹಾಳು ಮಾಡಬೇಡಿ ಎಂದು ಕೇಳಿಕೊಂಡರು.

RELATED ARTICLES
- Advertisment -
Google search engine

Most Popular

Recent Comments