Wednesday, September 17, 2025
HomeUncategorized3 ದಿನದ ನವಜಾತ ಶಿಶುವನ್ನು ಕದ್ದೊಯ್ದ ಶಿಶು ಕಳ್ಳಿ

3 ದಿನದ ನವಜಾತ ಶಿಶುವನ್ನು ಕದ್ದೊಯ್ದ ಶಿಶು ಕಳ್ಳಿ

ಗದಗ : 3 ದಿನದ ನವಜಾತ ಶಿಶುವನ್ನು ಕದ್ದೊಯ್ದ ಕಳ್ಳಿ ಶಿಶು ಸಮೇತ ಸಿಕ್ಕಿಬಿದ್ದ ಘಟನೆ ಗದಗ ಜಿಲ್ಲೆ ಮುಳಗುಂದ ಪಟ್ಟಣದಲ್ಲಿ ನಡೆದಿದೆ. ಮುಳಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಹಸುಗೂಸು ಅಪಹರಣವಾಗಿತ್ತು. ನೀಲಗುಂದ ಗ್ರಾಮದ ಫರೀಧಾ ನದಾಫ್ ಎಂಬುವವರಿಗೆ ಸೇರಿದ ೨ ದಿನದ ನವಜಾತ ಶಿಶು ಕಳ್ಳತನವಾಗಿತ್ತು. ಬೆಳಿಗ್ಗೆ ೧೧ ಗಂಟೆ ಸುಮಾರಿಗೆ ಹುಬ್ಬಳ್ಳಿ ತಾಲೂಕಿ ಛಬ್ಬಿ ಗ್ರಾಮದ ಫಾತೀಮಾಬಾನು ಸಂಶಿ ಎಂಬ ಮಹಿಳೆ ಮಗು ಅಪಹರಿಸಿದ್ದಳು.‌

ಈಕೆ ಬಾಣಂತಿ‌ ಬೆಡ್ ಪಕ್ಕದಲ್ಲಿ ನಾನು ಗರ್ಭಿಣಿ ಅಂತ ಅಡ್ಮಿಟ್ ಆಗಿದ್ದಳು. ನಂತರ ಬಾಣಂತಿ ಹಾಗೂ ಕುಟುಂಬದವರನ್ನು ಪರಿಚಯ‌ ಮಾಡಿಕೊಂಡು ಮಗುವನ್ನು ಎತ್ತಿಕೊಂಡು ಆಟವಾಡಿಸಿದ್ದಾಳೆ. ಬಾಣಂತಿಗೆ ಊಟ ತಂದುಕೊಟ್ಟು ಯಾಮಾರಿಸಿ ಆಸ್ಪತ್ರೆಯಿಂದ ಶಿಶು ಸಮೇತ ಎಸ್ಕೇಪ್ ಆಗಿದ್ದಾಳೆ. ನಂತರ ಮಗು ಇಲ್ಲದಿರುವುದನ್ನು ನೋಡಿ ಬಾಣಂತಿ ಹಾಗೂ ಕುಟುಂಬಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಕೂಡಲೆ ಮುಳಗುಂದ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ.

ಮಗು ಕಳ್ಳಿ ಫಾತೀಮಾಬಾನು ಮುಳಗುಂದದಿಂದ ಲಕ್ಷ್ಮೇಶ್ವರಕ್ಕೆ ಬಸ್ ನಲ್ಲಿ ತೆರಳುತ್ತಿರುವಾಗ ಲಕ್ಷ್ಮೇಶ್ವರ ಪೊಲೀಸರು ಬಂಧಿಸಿದ್ದಾರೆ‌. ಶಿಶು‌ ಕಳ್ಳಿ ಈಗ ಪೊಲೀಸರ ಅತಿಥಿಯಾಗಿದ್ದಾಳೆ. ಈ ಕುರಿತು ಮುಳಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಣಂತಿ ಫರೀದಾ ಹಾಗೂ ಕುಟುಂಬಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments