Wednesday, September 17, 2025
HomeUncategorizedಉತ್ತರ ಭಾರತ ಗಲಭೆ ಹಿನ್ನೆಲೆ 16 ಮೌಲ್ವಿಗಳ ಜೊತೆ ಕಮೀಷನರ್​ ಸಭೆ

ಉತ್ತರ ಭಾರತ ಗಲಭೆ ಹಿನ್ನೆಲೆ 16 ಮೌಲ್ವಿಗಳ ಜೊತೆ ಕಮೀಷನರ್​ ಸಭೆ

ಬೆಂಗಳೂರು : ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿವಾದಾತ್ಮಕ ಹೇಳಿಕೆ ಹಿನ್ನೆಲೆ ರಾಷ್ಟ್ರದಾದ್ಯಂತ ಖಂಡಿಸಿ ಉತ್ತರಭಾರತದಲ್ಲಿ ಪ್ರತಿಭಟನೆ ನಡೆಸುತ್ತಿರುವ ಬೆನ್ನಲ್ಲೇ ಪೊಲೀಸರು ಬೆಂಗಳೂರಿನಲ್ಲಿ ಅಲರ್ಟ್ ಆಗಿದ್ದಾರೆ.

ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ ಕಮಿಷನರ್ ಕಚೇರಿಯಲ್ಲಿ ಇಂದು ನಗರದಲ್ಲಿರೋ ಮುಸ್ಲಿಂ ಮುಖಂಡರು, ಸಿಖ್, ಬೌಧ್ದ, ಸೇರಿದಂತೆ ಅಲ್ಪಸಂಖ್ಯಾತ ಮುಖಂಡರು, ಧರ್ಮಗುರುಗಳ ಜೊತೆ ಸಭೆ ನಡೆಸಲಾಗುತ್ತಿದೆ. ಈ ಸಭೆಗೆ ಪೊಲೀಸ್ ಕಮಿಷನರ್ ಜೊತೆ ಮಾತುಕತೆ ನಡೆಸಲು ನಗರದ 16 ಮೌಲ್ವಿಗಳು ಆಗಮಿಸಿದ್ದಾರೆ.

ಮೌಲಾನಾ ಮಕ್ಸೂದ್ ಇಮ್ರಾನ್ ರಶೀದಿ, ಮೌಲಾನಾ ಮಫ್ತಿ ಇಫ್ತಿಕರ್ ಅಹ್ಮದ್ ಖಸ್ಮಿ ಸಾಹೇಬ್, ಮೌಲಾನಾ ಸೈಯದ್ ಜುಲ್ಫಿಖರ್, ಅಹ್ಮದ್ ನೂರಿ ಸಾಹೇನ್ ಸೇರಿದಂತೆ ಎಲ್ಲಾ ಮೌಲ್ವಿಗಳು ಈ ಸಭೆಯಲ್ಲಿ ಭಾಗಿಯಾಗಿದ್ದಾರೆ.

ಸದ್ಯ ನಗರದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಎಚ್ಚರವಹಿಸೋದರ ಬಗ್ಗೆ ಚರ್ಚೆ ಮಾಡಲಾಗುತ್ತಿದೆ.

RELATED ARTICLES
- Advertisment -
Google search engine

Most Popular

Recent Comments