Wednesday, September 17, 2025
HomeUncategorizedಹೆಚ್ಡಿಕೆಗೆ ತಾಕತ್ತಿದ್ರೆ ನನ್ನ ಎದುರಿಗೆ ಸ್ಟರ್ಧಿಸಲಿ : ಶಾಸಕ S.R ಶ್ರೀನಿವಾಸ್

ಹೆಚ್ಡಿಕೆಗೆ ತಾಕತ್ತಿದ್ರೆ ನನ್ನ ಎದುರಿಗೆ ಸ್ಟರ್ಧಿಸಲಿ : ಶಾಸಕ S.R ಶ್ರೀನಿವಾಸ್

ತುಮಕೂರು: ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಯಾವುದರಲ್ಲಿ ಉತ್ತಮ ಅಂತಾ ಹೇಳಿ ಎಂದು ಶಾಸಕ S.R ಶ್ರೀನಿವಾಸ್ ಹೆಚ್ಡಿಕೆ ವಿರುದ್ಧ ಏಕವಚನದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತುಮಕೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಸೋಲಿಸೋಕೆ ಹೆಚ್ಡಿಕೆ ಮಾಡಿರೋ ಷಡ್ಯಂತ್ರ ನಿಮಗೆಲ್ಲಾ ಗೊತ್ತೆ ಇದೆ. ಇವರೇ ಕಾಸು ಕೊಟ್ಟು ಮಾಡಿಸಿ ಅದನ್ನ ನನ್ನ ಮೇಲೆ ಹಾಕ್ತಾ ಇದ್ದಾರೆ ಎಂದು ಆಕ್ರೋಶ ಹೊರಹಾಕಿದ್ರು. ನಮ್ಮ ಅಭ್ಯರ್ಥಿ ಗೆಲ್ಲೋಲ್ಲ ಅಂತಾ ಗೊತ್ತಿದ್ದು, ಕಾಸು ಕೊಟ್ಟು ಕುಮಾರಸ್ವಾಮಿ ಷಡ್ಯಂತ್ರ ಮಾಡಿದ್ದಾನೆ ಎಂದು ಬಹಿರಂಗ ಆರೋಪ ಮಾಡಿದ್ರು.

ಇನ್ನು ಮೂರು ಮತ್ತೊಂದು ಜನ ಅವರೇ ನನ್ನ ಮೇಲೆ ಮುತ್ತಿಗೆ ಏನ್ ಹಾಕ್ತಾರಾ.? ಒಬ್ಬನು ನನ್ನ ಮತದಾರರಿಲ್ಲ, ಕಾಸು ಒಡೆಯದು ಕಾಸು ಕೊಡದು ಅವನು ಮಾಡೋ ಕೆಲಸ. ಸೀಟ್ ಕೊಡಿಸ್ತೀನಿ ಅಂತಾ ಕಾಸು ಒಡೀತಾನೆ. ಹಳ್ಳಿ ಕಡೆ ಜನ ಜೀವನಕ್ಕೆ 5 ಎಕರೆ ಇಟ್ಟುಕೊಂಡಂಗೆ ಪಕ್ಷ ಇಟ್ಟುಕೊಂಡವರೇ ಇವರು ಬದುಕೋದಕ್ಕಾಗಿ ಇಟ್ಟುಕೊಂಡಿರೋ ಪಕ್ಷ ಇದು. ಕಾಸು ಕೊಟ್ರೆ ಟಿಕೆಟ್​​, ಕಾರ್ಯಕರ್ತರು.ಅಡ್ಡ ಮತದಾನ ಮಾಡಿದೋನಾ ಕರೆದುಕೊಂಡು ಬರಲಿ ಎಂದು ವಾಗ್ದಾಳಿ ನಡೆಸಿದರು.

ಅವರಿಗೆ ಮಾನ ಮಾರ್ಯದೆ ಇದ್ದಿದ್ರೆ ಇದೆಲ್ಲಾ ಹೇಳ್ತಾ ಇರಲಿಲ್ಲ. ಅವನಿಗೆ ತಾಕತ್ತಿದ್ರೆ ಗುಬ್ಬಿಲೀ ಬಂದು ಚುನಾವಣೆಗೆ ನಿಂತುಕೊಳ್ಳಲಿ ಎಂದು ಓಪನ್​​ ಚಾಲೆಂಜ್​​ ಹಾಕಿದರು.

ಕುಮಾರಸ್ವಾಮಿ ರಾಜೀನಾಮೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವನ್ಯಾರು ರಾಜೀನಾಮೆ ಕೇಳೋಕೆ, ನನ್ನ ಕ್ಷೇತ್ರದ ಜನ ಕೇಳಬೇಕು. ನನ್ನ ಕ್ಷೇತ್ರದೋರು ಇಲ್ಲಿ ಯಾರು ಬಂದಿಲ್ಲ ರಾಜೀನಾಮೆ ಕೊಡ್ರಿ ಅಂತಾ. ಪೋನ್ ಮಾಡಿ ಹೇಳಿದ್ದಾನೆ ಅವರೆಲ್ಲಾ ನನಗೆ ಹೇಳಿದ್ದಾರೆ ಬರ್ತೀವಿ ಅಂತಾ. ಬಾರಪ್ಪಾ ಎಂದು ನಾನೇ ಕರೆದಿದ್ದೇನೆ. ಬಂದವರೇ ಹೋಗ್ತಾರೆ ಅಷ್ಟೇ. ನಾನು ಕುಮಾರಸ್ವಾಮಿ ಕರೆದುಕೊಂಡು ಬಂದು ಯಾವತ್ತು ಪ್ರಚಾರ ಮಾಡಿಲ್ಲ. ನಾನು ಅಪ್ಪ ಮಕ್ಕಳ ಪೋಟೋ ಹಾಕಿ ಬ್ಯಾನರ್ ಕೂಡ ಹಾಕಿಲ್ಲ. ಅವರ ಮುಖ ನೋಡಿ ಜನ ನನಗೆ ಓಟ್ ಹಾಕಿಲ್ಲ ಎಂದು ಕಿಡಿಕಾಡಿದರು.

RELATED ARTICLES
- Advertisment -
Google search engine

Most Popular

Recent Comments