Wednesday, August 27, 2025
HomeUncategorizedರೈತ ಕುಟುಂಬಕ್ಕೆ ನ್ಯಾಯ ಕೊಡಿಸಿದ ಪವರ್​ ಟಿವಿ

ರೈತ ಕುಟುಂಬಕ್ಕೆ ನ್ಯಾಯ ಕೊಡಿಸಿದ ಪವರ್​ ಟಿವಿ

ಮಂಡ್ಯ:  ಬಹಿಷ್ಕಾರಕ್ಕೊಳಗಾಗಿದ್ದ ಆ ಬಡ ರೈತನ ಕುಟುಂಬಕ್ಕೆ ಕಡೆಗೂ ನ್ಯಾಯ ಸಿಕ್ಕಿದೆ. ಸಮಸ್ಯೆ ಕುರಿತು ಪವರ್ ಟಿವಿ ವರದಿ ಬಿತ್ತರಿಸಿದ ಕೆಲವೇ ಗಂಟೆಗಳಲ್ಲಿ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಈ ಮೂಲಕ ಪವರ್ ಟಿವಿ ಬಡವರು, ಶೋಷಿತರು, ರೈತರು ಮತ್ತು ನೊಂದವರ ಪರವಾಗಿ ನಿಲ್ಲುತ್ತದೆ ಅನ್ನೋದು ಸಾಬೀತಾಗಿದೆ.

ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಶಾನುಭೋಗನಹಳ್ಳಿಯ ರೈತ ಶ್ರೀನಿವಾಸ್ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ತೆಂಗು ಹಾಗು ಟೊಮ್ಯಾಟೊ ಬೆಳೆಗಳನ್ನ ರಾತ್ರೋರಾತ್ರಿ ಹಾಳುಗೆಡವಿದ್ದ ದುಷ್ಕರ್ಮಿಗಳು. ಇದಕ್ಕಾಗಿ ಕುಟುಂಬವನ್ನ ಗ್ರಾಮದಿಂದಲೇ ಬಹಿಷ್ಕಾರ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ಇದೇ ವಿಚಾರಕ್ಕೆ ಸಂಬಂಧಿಸಿ ತಮಗೆ ನ್ಯಾಯಕೊಡಿಸಿ ಎಂದು ಗೋಳಾಡಿದ್ದರು. ಈ ಬಡ ರೈತ ಕುಟುಂಬದ ಸಂಕಷ್ಟಕ್ಕೆ ಸ್ಪಂದಿಸಿದ್ದ ಪವರ್ ಟಿವಿ ವರದಿ ಪ್ರಸಾರ ಮಾಡಿ ಇದನ್ನು ಅಧಿಕಾರಿಗಳ ಗಮನಕ್ಕೆ ತಂದಿತ್ತು. ಇದರಿಂದ ಎಚ್ಚೆತ್ತ ಪಾಂಡವಪುರ ಎಸಿ ಶಿವಾನಂದ ಮೂರ್ತಿ ಸ್ಥಳಕ್ಕೆ ಭೇಟಿ ನೀಡಿ ರೈತರಿಗೆ ಸಾಂತ್ವನ‌ ಹೇಳಿದರು.

ಅಷ್ಟಕ್ಕೂ ಏನಿದು ವಿವಾದ ಇಲ್ಲಿ ಬೆಳೆ ಹಾಳುಗೆಡದಿರುವವರಾರು ಎಂಬುದನ್ನ ಹುಡುಕ ಹೊರಟಾಗ ಅಲ್ಲಿ ಮತ್ತೊಂದು ಕತೆ ಹುಟ್ಟಿಕೊಂಡಿತ್ತು. ಇದೇ ಗ್ರಾಮದ ಸರ್ವೆ ನಂಬರ್‌ 18ರಲ್ಲಿ ಸರ್ಕಾರಕ್ಕೆ ಸೇರಿದ 153 ಎಕರೆ ಜಮೀನಿದೆ ಈ ಜಮೀನನ್ನ ಗ್ರಾಮದ ಬಹುತೇಕರು ಉಳುಮೆ ಮಾಡಿಕೊಂಡು ಬೆಳೆ ಬೆಳೆಯುತ್ತಿದ್ದಾರೆ. ಅದರಂತೆ ಈ ರೈತ ಶ್ರೀನಿವಾಸ್ ಕುಟುಂಬಸ್ಥರು ಸಹ ಒಂದಷ್ಟು ಜಮೀನು ಸ್ವಾಧೀನ ಮಾಡಿಕೊಂಡು ಉಳುಮೆ ಮಾಡ್ತಿದ್ದಾರೆ. ಇದಕ್ಕೆ ಅದೇ ಗ್ರಾಮದ ಕೆಲವರು ಆಕ್ಷೇಪ ವ್ಯಕ್ತಪಡಿಸಿ ಶ್ರೀನಿವಾಸ್ ಜಮೀನು ಬಿಟ್ಟುಕೊಡುವಂತೆ ಒತ್ತಡ ಹಾಕಿದ್ದಾರೆ. ಇದಕ್ಕೆ ರೈತ ಶ್ರೀನಿವಾಸ್ ಒಪ್ಪದಿದ್ದಾಗ ಗ್ರಾಮದ ಕೆಲವರು ಸೇರಿಕೊಂಡು ಬೆಳೆ ಹಾನಿ ಮಾಡಿದ್ದಾರೆ ಎನ್ನಲಾಗಿದೆ.

ಸರ್ಕಾರಿ ಭೂಮಿ ನಮಗೆ ಮಾತ್ರ ಬೇರೆಯವರಿಗೆ ಬೇಡ ಅನ್ನೊ ಈ ಗ್ರಾಮದ ಕೆಲವರಿಗೆ ಅಧಿಕಾರಿಗಳು ತಿಳುವಳಿಕೆ ಹೇಳೊ ಮೂಲಕ ರೈತ ಶ್ರೀನಿವಾಸ್ ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡಲಿ ಅನ್ನೋದು ಪವರ್ tv ಆಶಯ.

ರವಿಲಾಲಿಪಾಳ್ಯ. ಪವರ್ tv ಮಂಡ್ಯ

RELATED ARTICLES
- Advertisment -
Google search engine

Most Popular

Recent Comments