Saturday, August 23, 2025
Google search engine
HomeUncategorizedಕಲ್ಲಿನಂತಿರುವ ಕಲ್ಲುಸಕ್ಕರೆಯ ಆರೋಗ್ಯ ಪ್ರಯೋಜನಗಳೇನು ತಿಳಿಯೋಣ ಬನ್ನಿ

ಕಲ್ಲಿನಂತಿರುವ ಕಲ್ಲುಸಕ್ಕರೆಯ ಆರೋಗ್ಯ ಪ್ರಯೋಜನಗಳೇನು ತಿಳಿಯೋಣ ಬನ್ನಿ

ಕಲ್ಲುಸಕ್ಕರೆ ನೋಡಲು ಕಲ್ಲಿನಂತಿರುತ್ತದೆ ವಿನ: ರುಚಿಯಲ್ಲಿ ಸಕ್ಕರೆಯೇ ಸಾಮಾನ್ಯ ಸಕ್ಕರೆಯನ್ನು ಹರಳುಗಟ್ಟಿಸಿ ಕಲ್ಲು ಸಕ್ಕರೆಯನ್ನು ತಯಾರಿಸುವ ಕೆಲವು ಸಿಹಿ ಅಂಶಗಳು ನಷ್ಟವಾಗುವ ಕಾರಣ ಸಕ್ಕರೆಗಿಂತಲೂ ಇದರಲ್ಲಿ ಸಿಹಿ ಕಡಿಮೆ ಇರುತ್ತದೆ. ಕಲ್ಲುಸಕ್ಕರೆಯನ್ನು ಸಿಹಿಕಾರಕವಾಗಿ ತಯಾರಿಸಲಾಗುತ್ತದೆಯಾದರೂ ಇದರ ಒಔಷಧೀಯ ರೂಪದಲ್ಲಿಯೇ ಹೆಚ್ಚು.

ಊಟದ ಬಳಿಕ ಮುಕ್ಕಳಿಸದೇ ಅಥವಾ ಹಲ್ಲುಜ್ಜಲು ಮರೆತರೆ ಹಲ್ಲುಗಳ ಸಂಧುಗಳಲ್ಲಿ ಸಿಲಿಕಿದ ಆಹಾರಕಣಗಳನ್ನು ಬ್ಯಾಕ್ಟೀರಿಯಾಗಳು ಕೊಳೆಸಿ ಬಾಯಿಯ ದುರ್ಗಂಧಕ್ಕೆ ಕಾರಣವಾಗುತ್ತದೆ. ಆದ್ದರಿಂದ ಊಟದ ಬಳಿಕ ಚಿಕ್ಕ ತುಂಡು ಕಲ್ಲುಸಕ್ಕರೆಯನ್ನು ತಿಂದರೆ ಈ ಬ್ಯಾಕ್ಟೀಯಾಗಳನ್ನು ಕೊಂದು ಉಸಿರಿನ ತಾಜಾತನ ಉಳಿಸಿಕೊಳ್ಳಲು ನೆರವಾಗುತ್ತದೆ.

ಗಂಟಲು ನೋವು :

ಚಳಿಗಾಲದಲ್ಲಿ ಕೆಲವಾರು ರೋಗಗಳು ಅನಿವಾರ್ಯ ಎಂಬಂತೆ ಆವರಿಸುತ್ತದೆ. ಇದರಲ್ಲಿ ಗಂಟಲು ನೋವು ಒಂದು ಗಂಟಲುನೋವು ಎದುರಾದ ತಕ್ಷಣ ಕಲ್ಲುಸಕ್ಕರೆ ತಿಂದರೆ ಇದು ತಕ್ಷಣವೇ ಗುಣವಾಗುತ್ತದೆ. ಒಂದು ವೇಳೆ ನೋವು ಹೆಚ್ಚಿದ್ದರೆ ಕಲ್ಲುಸಕ್ಕರೆಯೊಂದಿಗೆ ಕಾಳುಮೆಣಸಿನ ಪುಡಿ ಮತ್ತು ಕೊಂಚ ತುಪ್ಪ ಬೆರೆಸಿ ರಾತ್ರಿ ಮಲಗುವ ಮುನ್ನ ಸೇವಿಸಬೇಕು.

ರಕ್ತದಲ್ಲಿ ಹೀಮೋಗ್ಲೋಬಿನ್​ ಹೆಚ್ಚಿಸುತ್ತದೆ

ರಕ್ತದಲ್ಲಿ ಹೀಮೋಗ್ಲೋಬಿನ್​ ಕಡಿಮೆಯಾದಾಗ ರಕ್ತಹೀನತೆ ಬಿಳಿಚಿಕೊಂಡ ಚರ್ಮ,ತಲೆಸುತ್ತುವಿಕೆ ಸುಸ್ತು ಮೊದಲಾದ ತೊಂದರೆಗಳು ಎದುರಾಗುತ್ತದೆ. ಕಲ್ಲುಸಕ್ಕರೆಯಲ್ಲಿರುವ ಪೋಷಕಾಂಶಗಳು ಹೀಮೋಗ್ಲೋಬಿನ್ ಮಟ್ಟವನ್ನು ಹೆಚ್ಚಿಸುವ ಮೂಲಕ ಈ ತೊಂದರೆಗಳನ್ನು ನಿವಾರಿಸುತ್ತದೆ ಹಾಗೂ ರಕ್ತಪರಿಚಲನೆಯನ್ನೂ ಉತ್ತಮಗೊಳಿಸುತ್ತದೆ.

ಕಣ್ಣುಗಳ ದೃಷ್ಟಿ ಉತ್ತಮಗೊಳಿಸುತ್ತದೆ

ಕಣ್ಣುಗಳ ಆರೋಗ್ಯಕ್ಕೂ ಕಲ್ಲುಸಕ್ಕರೆ ಉತ್ತಮವಾಗಿದೆ. ಕಣ್ಣುಗಳ ದೃಪ್ಷಿಯನ್ನು ಉಳಿಸಿಕೊಳ್ಳಲು ಹಾಗೂ ಕಣ್ಣುಗಳಲ್ಲಿ ಹೂವು ಅಥವಾ ಕ್ಯಾಟರಾಕ್ಟ್​ ಮೂಡುವುದನ್ನು ತಡೆಯಲು ಆಗಾಗ ಕಲ್ಲುಸಕ್ಕರೆಯನ್ನು ಸೇವಿಸಬೇಕು. ಕಣ್ಣುಗಳ ದೃಷ್ಟಿ ಉತ್ತಮವಾಗಿರಲು ದಿನವಿಡೀ ಕುಡಿಯುವ ನೀರಿನಲ್ಲಿ ಕೊಂಚವೇ ಕಲ್ಲುಸಕ್ಕರೆ ಬೆರೆಸಿ ಸೇವಿಸಿ ಹಾಗೂ ಊಟದ ಬಳಿಕವೂ ಒಂದು ಲೋಟ ನೀರಿನಲ್ಲಿ ಚಿಕ್ಕ ಕಲ್ಲುಸಕ್ಕರೆಯ ತುಂಡನ್ನು ಬೆರೆಸಿ ಸೇವಿಸಿದರೆ ಉತ್ತಮವಾಗಿರುತ್ತದೆ.

RELATED ARTICLES
- Advertisment -
Google search engine

Most Popular

Recent Comments