Saturday, August 23, 2025
Google search engine
HomeUncategorizedಬಿಬಿಎಂಪಿ ಯಾವುದಾದರು ಒಂದು ವಾಡ್೯ಗೆ ಅಪ್ಪು ಹೆಸರಿಡಬೇಕು ಎಂದು ಒತ್ತಾಯ

ಬಿಬಿಎಂಪಿ ಯಾವುದಾದರು ಒಂದು ವಾಡ್೯ಗೆ ಅಪ್ಪು ಹೆಸರಿಡಬೇಕು ಎಂದು ಒತ್ತಾಯ

ಬೆಂಗಳೂರು: ಬಿಬಿಎಂಪಿ ಯ ಯಾವುದಾದರು ಒಂದು ವಾಡ್೯ ಗೆ ಪುನೀತ್ ರಾಜ್​ಕುಮಾರ್ ಹೆಸರಿಡಬೇಕು ಎಂದು ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕಿ ಭಾಗ್ಯವತಿ ಅಮರೇಶ್ ಅವರು ಸಿಎಂ ಬೊಮ್ಮಾಯಿಗೆ ಮನವಿಯನ್ನು ಮಾಡಿದ್ದಾರೆ.

ಪುನೀತ್ ರವರು ನಟನೆ ಮತ್ತು ಸಾಮಾಜಿಕ ಕಾರ್ಯದಿಂದ ಅತ್ಯಂತ ಜನಪ್ರಿಯ ನಟರಾಗಿದ್ದರು. ಅಷ್ಟೇ ಅಲ್ಲದೇ ಬೆಂಗಳೂರಿನ ನಿವಾಸಿ ಕೂಡಾ ಆಗಿದ್ದರು. ಅಪ್ಪು ಅಕಾಲಿಕ ಮೃತ್ಯುವಿನಿಂದ ರಾಜ್ಯದ ಜನತೆ ನೋವನ್ನು ಅನುಭವಿಸಿದರು. ಅಪಾರ ಅಭಿಮಾನಿಗಳನ್ನು ಹೊಂದಿದ್ದ ಪುನೀತ್ ರಾಜ್‌ಕುಮಾರ್ ರವರು ಸಮಾಜಕ್ಕೆ ಮತ್ತು ಚಿತ್ರರಂಗಕ್ಕೆ ಮಾದರಿಯಾಗಿದ್ದರು.

ಅದಲ್ಲದೇ ಬಿ.ಬಿ.ಎಂ.ಪಿ ಯ ವಾರ್ಡ್‌ಗಳ ಸಂಖ್ಯೆ 198 ರಿಂದ 243ಕ್ಕೆ ಮರು ವಿಂಗಡಣೆ ಆದ ನಂತರ ಕೆಲವು ವಾರ್ಡ್‌ಗಳಿಗೆ ನಾಮಕರಣ ಮಾಡುವಾಗ ಯಾವುದಾದರು ಒಂದು ವಾರ್ಡ್‌ಗೆ ಪುನೀತ್ ರಾಜ್‌ಕುಮಾರ್ ರವರು ವಾಸವಿದ್ದ ಮನೆಯ ವಾರ್ಡ್‌ಗೆ ಅವರ ಹೆಸರನ್ನು ಇಟ್ಟು ಶಾಶ್ವತವಾಗಿ ಅವರ ಹೆಸರು ಉಳಿಯುವಂತೆ ಮಾಡಬೇಕಿದೆ ಎಂದು ಅರಣ್ಯ ಅಭಿವೃದ್ದಿ ನಿಗಮದ ನಿರ್ದೇಶಕಿ ಭಾಗ್ಯವತಿ ಅಮರೇಶ್ ರಿಂದ ಸಿಎಂ ಬೊಮ್ಮಾಯಿಗೆ ಮನವಿಯನ್ನು ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments