Tuesday, September 2, 2025
HomeUncategorizedಹೊಸ ಪ್ರೇಮಯಾನದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಹೊಸ ಪ್ರೇಮಯಾನದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ

ಮ್ಯಾನ್ ಆಫ್ ಮಲ್ಟಿ ಟ್ಯಾಲೆಂಟ್ ರಕ್ಷಿತ್​ರ ಪ್ರೇಮ್ ಕಹಾನಿ ಸಪ್ತಸಾಗರದಾಚೆಗೂ ಸದ್ದು ಮಾಡ್ತಿದೆ. ಅರೇ ಅವ್ರ ಲವ್ ಸ್ಟೋರಿ ಬ್ರೇಕಪ್ ಆಗಿದೆ ಅಲ್ವಾ ಅಂತ ಹುಬ್ಬೇರಿಸ್ಬೇಡಿ. ಹೊಚ್ಚ ಹೊಸ ಲವ್ವಿ ಡವ್ವಿ ಹುಟ್ಕೊಂಡಿದೆ. ಇಷ್ಟಕ್ಕೂ ಸಿಂಪಲ್ ಸ್ಟಾರ್ ಪ್ರೇಯಸಿ ಯಾರು..? ಅವ್ರ ಪ್ರೀತಿಯ ಆಳ, ಅಗಲ ಎಷ್ಟು ಅನ್ನೋದ್ರ ಇಂಟರೆಸ್ಟಿಂಗ್ ಕಥೆ ನಿಮ್ಮ ಮುಂದೆ.

  1. ಹೊಸ ಪ್ರೇಮಯಾನದಲ್ಲಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ
  2. ‘ಸಪ್ತ ಸಾಗರದಾಚೆ’ ಒಂದು ಸಿಂಪಲ್ ಪ್ರೇಮ್ ಕಹಾನಿ

ಸೆಲೆಬ್ರಿಟಿಗಳ ಪರ್ಸನಲ್ ವಿಚಾರಗಳು ಅಂದ್ರೆ ಎಲ್ಲರೂ ಕಣ್ಣು ಅರಳಿಸ್ತಾರೆ, ಕಿವಿಗೊಟ್ಟು ಕೇಳ್ತಾರೆ. ರಶ್ಮಿಕಾ ಮಂದಣ್ಣ ಜೊತೆ ಲವ್ ಬ್ರೇಕಪ್ ಆದ ಬಳಿಕ ರಕ್ಷಿತ್ ಬಾಳಲ್ಲಿ ಬಂದ ಹೊಸ ಹುಡ್ಗಿ ಯಾರು..? ಅಥ್ವಾ ರಶ್ಮಿಕಾ ಲೈಫ್​ಗೆ ಎಂಟ್ರಿ ಕೊಟ್ಟ ಹುಡ್ಗ ಯಾರು ಅನ್ನೋದೇ ಎಲ್ರಿಗೂ ಕ್ಯೂರಿಯಾಸಿಟಿ. ಅದು ನಿಜಾನೇ ಜನಕ್ಕೆ ಇಂಥ ಸುದ್ದಿಗಳೇ ಇಂಟರೆಸ್ಟಿಂಗ್. ನಾವೀಗ ರಕ್ಷಿತ್ ಹೊಸ ಪ್ರೇಮ್ ಕಹಾನಿ ಹೇಳೋಕೆ ಹೊರಟಿದ್ದೀವಿ ಕೇಳಿ.

ಆಕೆಯ ಹೆಸ್ರು ರುಕ್ಮಿಣಿ ವಸಂತ್. ಪಕ್ಕಾ ಮೈಸೂರ್ ಚೆಲುವೆ. ಸದ್ಯ ಈ ಪೋರಿಯ ಪ್ರೇಮಯಾನದಲ್ಲಿ ಈಜುತ್ತಿದ್ದಾರೆ ರಕ್ಷಿತ್ ಶೆಟ್ಟಿ. ಹೌದು.. ಇವ್ರ ಪ್ರೀತಿ, ಪ್ರೇಮ, ಪ್ರಣಯದ ಕಥೆಗಳು ಸಪ್ತಸಾಗರದಾಚೆಗೂ ಸದ್ದು ಮಾಡ್ತಿವೆ. ಕಾರಣ ಇದು ಹೇಮಂತ್ ರಾವ್ ನಿರ್ದೇಶನದ ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಟೀಸರ್​ನಲ್ಲಿರೋ ಗಮ್ಮತ್ತು. ಆನ್​ ಸ್ಕ್ರೀನ್ ಲವ್ ಆದ್ರೂ, ನೈಜ ಹಾಗೂ ಸಹಜವಾದ ನಿಜ ಜೀವನದ ಲವ್ ಸ್ಟೋರಿಯ ಫೀಲ್ ಕೊಡ್ತಿದೆ.

ಗೋಧಿಬಣ್ಣ ಸಾಧಾರಣ ಮೈಕಟ್ಟು, ಕವಲುದಾರಿ ಅಂತಹ ಎರಡು ಸೂಪರ್ ಹಿಟ್ ಸಿನಿಮಾಗಳನ್ನ ನೀಡಿದ ಡೈರೆಕ್ಟರ್ ಹೇಮಂತ್ ರಾವ್, ಇದೀಗ ಹ್ಯಾಟ್ರಿಕ್ ಹಿಟ್ ಕೊಡೋ ಧಾವಂತದಲ್ಲಿದ್ದಾರೆ. ಅದಕ್ಕಾಗಿ ಸಿಕ್ಕಾಪಟ್ಟೆ ಎಫರ್ಟ್​ ಕೂಡ ಹಾಕಿದ್ದಾರೆ. ಸಪ್ತ ಸಾಗರದಾಚೆ ಎಲ್ಲೋ ಚಿತ್ರದ ಟೀಸರ್​ನಲ್ಲಿರೋ ಇಂಟೆನ್ಸ್ ಲವ್, ಎಮೋಷನ್ಸ್ ನಿಜಕ್ಕೂ ಪ್ರೇಕ್ಷಕರನ್ನ ಕಾಡುತ್ತೆ. ನಾಯಕನಟಿ ಟೇಪ್ ರೆಕಾರ್ಡರ್​​ನಲ್ಲಿ ಕ್ಯಾಸೆಟ್​ವೊಂದರ ಮೂಲಕ ಮಾಡಿಕೊಳ್ಳೋ ಪ್ರೇಮ ನಿವೇದನೆ ನಿಜಕ್ಕೂ ಅದ್ಭುತ, ಅಮೋಘ, ಅದ್ವಿತೀಯ.

ಸದಾ ಭಿನ್ನ, ವಿಭಿನ್ನ ಪಾತ್ರಗಳ ಮೂಲಕ ವೀಕ್ಷಕರನ್ನ ಪುಳಕಿತಗೊಳಿಸೋ ರಕ್ಷಿತ್ ಶೆಟ್ಟಿ, ಇದೀಗ ಮತ್ತೊಂದು ಅವತಾರದಲ್ಲಿ ಕಾಣಸಿಗಲಿದ್ದಾರೆ. 777 ಚಾರ್ಲಿ ರಿಲೀಸ್ ಸಂಭ್ರಮದಲ್ಲಿರೋ ರಕ್ಷಿತ್​ಗೆ ಬರ್ತ್ ಡೇ ವಿಶೇಷ ಲಾಂಚ್ ಮಾಡಿರೋ ಈ ಟೀಸರ್ ಬಹಳ ಖುಷಿ ಕೊಟ್ಟಿದೆ. ಇನ್ ಫ್ಯಾಕ್ಟ್ ಅವ್ರ ಫ್ಯಾನ್ಸ್ ಕೂಡ ದಿಲ್​ಖುಷ್ ಆಗಿದ್ದಾರೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments