Monday, September 8, 2025
HomeUncategorizedಚಡ್ಡಿ ಸುಡೋ ಅಭ್ಯಾಸ ಇದ್ರೆ ನಾವೇನ್​ ಮಾಡೋದು : ಮಾಜಿ ಶಾಸಕ ಸಂಜಯ್ ಪಾಟೀಲ್

ಚಡ್ಡಿ ಸುಡೋ ಅಭ್ಯಾಸ ಇದ್ರೆ ನಾವೇನ್​ ಮಾಡೋದು : ಮಾಜಿ ಶಾಸಕ ಸಂಜಯ್ ಪಾಟೀಲ್

ಬೆಳಗಾವಿ : ನಂದು ಚಡ್ಡಿ ಕೊಡ್ತೇನಿ ಹೇಳ್ರಿ ಸುಡೋಕೆ ಎನೂ ಮಾಡೋದಿದೆ ಅಂತಾ ಮಾಜಿ ಶಾಸಕ ಸಂಜಯ್ ಪಾಟೀಲ್ ಕಾಂಗ್ರೆಸ್‌ಗೆ ತಿರುಗೇಟು ನೀಡಿದ್ದಾರೆ.

ಅವರಿಗೆ ಸುಡೋದೆ ಅಭ್ಯಾಸ ಇದ್ರೇ ನಾವೇನೂ ಮಾಡೋಕೆ ಆಗಲ್ಲಾ‌. ನನ್ನ ಪೋನ್ ನಂಬರ್ ಕೊಡಿ ಯಾವಾಗ ಬೇಕು ಅವಾಗ ಕಳಿಸುವ ವ್ಯವಸ್ಥೆ ಮಾಡ್ತೇನಿ. ಪರ್ಸನಲ್ ಆಗಿ ಕೊಟ್ಟು ಕಳಸ್ತೇನಿ ಕೊರಿಯರ್ ಯಾಕೆ ಮಾಡೋದು. ನಮ್ಮವರಿದ್ದಾರೆ ಪಾಪಾ ಅವರು, ಪಾಕಿಸ್ತಾನದವರಾ ನಮ್ಮ ದೇಶದವರಿದ್ದಾರೆ. ಅವರಿಗೆ ಅವಶ್ಯಕತೆ ಬಿದ್ರೇ ನನಗೆ ಪೋನ್ ಮಾಡಲಿ ಕಳುಹಿಸಿಕೊಡ್ತೇನಿ‌ ಎಂದರು.

ಅದಲ್ಲದೇ, ಆರ್‌ಎಸ್‌ಎಸ್ ಸಂಘಟನೆ ಬಗ್ಗೆ ಕಾಂಗ್ರೆಸ್‌ಗೆ ಮಾತನಾಡುವ ಯೋಗ್ಯತೆ ಇಲ್ಲ. ಆರ್‌ಎಸ್‌ಎಸ್ ದೇಶಭಕ್ತರದ್ದು ಸಮಾಜ ಸೇವೆ ಸಂಘಟನೆ. ಆರ್‌ಎಸ್‌ಎಸ್ ಮಾರ್ಗದರ್ಶನ ಮಾಡುತ್ತೆ ಅಂತಾ ನಮಗೆ ಬಹಳ ಹೆಮ್ಮೆ ಇದೆ. ಆರ್‌ಎಸ್‌ಎಸ್ ಬಗ್ಗೆ ಎನಾದ್ರೂ ಕಾಂಗ್ರೆಸ್​ನವರು ಮಾಡುತ್ತಿದ್ದರೆ. ಸೂರ್ಯ ಮೇಲೆ ಉಗುಳಲು ಪ್ರಯತ್ನ ಮಾಡಿದ್ರೇ ಅವರ ಮಾರಿ ಮೇಲೆ ಬರುವುದದು ಅಂತಾ ತಿರುಗೇಟು ನೀಡಿದ್ದಾರೆ.

ಇನ್ನು, ಆರ್‌ಎಸ್‌ಎಸ್ ನೇತೃತ್ವದಲ್ಲಿ ದೇಶದಲ್ಲಿ ಬಿಜೆಪಿಯನ್ನ ಪ್ರತಿಯೊಂದು ದೇಶದಲ್ಲಿ ಗೆಲ್ಲಿಸಿದ್ದೇವೆ. ಕಾಂಗ್ರೆಸ್ ನವರಿಗೆ ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳಲು ಸ್ಥಾನಮಾನ ಸಿಗ್ತಿಲ್ಲ. ಇದರಿಂದ ಕಾಂಗ್ರೆಸ್ ನವರು ಹತಾಶೆಯಿಂದ ಈ ರೀತಿ ಮಾತಾಡ್ತಿದ್ದಾರೆ. ಬಿಜೆಪಿ ಅಧಿಕಾರಕ್ಕೆ ಬರಲು ಆರ್‌ಎಸ್‌ಎಸ್ ದೊಡ್ಡ ಪಾತ್ರ ಇದೆ. ಅವರ ಆಶೀರ್ವಾದ ಮಾರ್ಗದರ್ಶನದಿಂದ ನಮ್ಮ ಬಿಜೆಪಿ ಅಧಿಕಾರದಲ್ಲಿದೆ ಎಂದು ಹೇಳಿದರು.

RELATED ARTICLES
- Advertisment -
Google search engine

Most Popular

Recent Comments