Monday, August 25, 2025
Google search engine
HomeUncategorizedದಕ್ಷಿಣ ಭಾರತದ ಅತಿ ದೊಡ್ಡ ಸ್ಪಟಿಕ ಲಿಂಗ ನಾಪತ್ತೆ

ದಕ್ಷಿಣ ಭಾರತದ ಅತಿ ದೊಡ್ಡ ಸ್ಪಟಿಕ ಲಿಂಗ ನಾಪತ್ತೆ

ಹಾವೇರಿ : ಐತಿಹಾಸಿಕ ಹಿರೇಮಠ ದೇವಸ್ಥಾನ. ದೇವಸ್ಥಾನದ ರೇಣುಕಾಚಾರ್ಯ ಮೂರ್ತಿ ಮುಂದೆ ಐತಿಹಾಸಿಕ ಸ್ಪಟಿಕಲಿಂಗ ಇತ್ತು. ಆದರೆ, ಖತರ್ನಾಕ್ ಖದೀಮರು ರಾತ್ರೋರಾತ್ರಿ ಸಿಸಿಟಿವಿಗಳನ್ನೇ ಧ್ವಂಸಗೊಳಿಸಿ, ದಕ್ಷಿಣ ಭಾರತದಲ್ಲಿಯೇ ಅತ್ಯಂತ ದೊಡ್ಡ ಸ್ಪಟಿಕಲಿಂಗವನ್ನು ಕಳ್ಳತನ ಮಾಡಿದ್ದಾರೆ. ಕಳ್ಳತನ ಪ್ರಕರಣ ಕೇಳಿದ ಹಿರೇಮಠದ ಭಕ್ತರು ಹಾಗೂ ಗ್ರಾಮಸ್ಥರ ಆಂತಕಕ್ಕೆ ಕಾರಣವಾಗಿದೆ.

ಹಾವೇರಿ ಜಿಲ್ಲೆ ರಾಣೇಬೆನ್ನೂರು ತಾಲ್ಲೂಕಿನ ಲಿಂಗದಹಳ್ಳಿಯ ಹಿರೇಮಠದ ದೇವಸ್ಥಾನದಲ್ಲಿ ರೇಣುಕಾಚಾರ್ಯ ಮೂರ್ತಿ ಮುಂದೆ ಐತಿಹಾಸಿಕ ಸ್ಪಟಿಕಲಿಂಗವನ್ನ ಪ್ರತಿಷ್ಠಾಪನೆ ಮಾಡಲಾಗಿತ್ತು.ಸೋಮವಾರ ರಾತ್ರಿ ಮಠದಲ್ಲಿ ವೀರಭದ್ರ ಶಿವಾಚಾರ್ಯ ಸ್ವಾಮೀಜಿ ಇಲ್ಲದ್ದನ್ನ ಗಮನಿಸಿದ ಖತರ್ನಾಕ್ ಕಳ್ಳರು ಸ್ಪಟಿಕಲಿಂಗವನ್ನ ಕದ್ದೊಯ್ದಿದ್ದಾರೆ. ಬೆಳಗ್ಗೆ ಶಿಷ್ಯರು ಕಸಗುಡಿಸುವ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.ಸ್ಪಟಿಕಲಿಂಗವು 13 ಇಂಚು ಉದ್ದ ಮತ್ತು 13 ಇಂಚು ಸುತ್ತಳತೆ ಹೊಂದಿದ್ದುದು ಬಹಳ ವಿಶೇಷವಾಗಿತ್ತು.ಇದು ದಕ್ಷಿಣ ಭಾರತದಲ್ಲೇ‌ ಅತ್ಯಂತ ದೊಡ್ಡ ಸ್ಫಟಿಕಲಿಂಗ ಎನ್ನಲಾಗ್ತಿದೆ.

ಹಿರೇಮಠದ ಸ್ಪಟಿಕಲಿಂಗದ ಕಳ್ಳತನ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹಲಗೇರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಜೊತೆಗೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ಸಿಬ್ಬಂದಿ ಶೋಧ ಕಾರ್ಯವನ್ನ ನಡೆಸಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆಯೂ ಸಹ ರೇಣುಕಾಚಾರ್ಯ ದೇವರ ಬೆಳ್ಳಿಯ ಆಭರಣಗಳನ್ನ ಸಹ ಕಳ್ಳತನ ಮಾಡಿದ್ದರು.ಈಗ ಬೆಲೆ ಕಟ್ಟಲಾಗದ ಐತಿಹಾಸಿಕ ಸ್ಪಟಿಕಲಿಂಗವನ್ನ ಕಳ್ಳತನ ಮಾಡಿದ್ದು, ಭಕ್ತರಿಗೆ ನೋವನ್ನುಂಟು‌ ಮಾಡಿದೆ.

ಹಲಗೇರಿ ಪೊಲೀಸರು ಎಲ್ಲಾ ಆಯಾಮಗಳಲ್ಲಿ ತನಿಖೆ‌ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಐತಿಹಾಸಿಕ ಸ್ಪಟಿಕಲಿಂಗವು ಕಳ್ಳತನವಾಗಿದ್ದು ಮಾತ್ರ ದೊಡ್ಡದುರಂತವೇ ಸರಿ.

ವೀರೇಶ ಬಾರ್ಕಿ,ಪವರ್ ಟಿವಿ ಹಾವೇರಿ

RELATED ARTICLES
- Advertisment -
Google search engine

Most Popular

Recent Comments