Tuesday, September 2, 2025
HomeUncategorizedRSS , ಚಡ್ಡಿ ಹೇಳಿಕೆ ಸಿದ್ದರಾಮಯ್ಯಗೆ ಶೋಭೆ ತರಲ್ಲ : ಮಾಜಿ ಸಿಎಂ ಯಡಿಯೂರಪ್ಪ

RSS , ಚಡ್ಡಿ ಹೇಳಿಕೆ ಸಿದ್ದರಾಮಯ್ಯಗೆ ಶೋಭೆ ತರಲ್ಲ : ಮಾಜಿ ಸಿಎಂ ಯಡಿಯೂರಪ್ಪ

ಬಾಗಲಕೋಟೆ : ವಿಪಕ್ಷ ನಾಯಕನಾಗಿ ಸಿದ್ದರಾಮಯ್ಯ ಗೌರವಯುತವಾಗಿ ನಡೆದುಕೊಳ್ತಾರೆ ಅನ್ನೋ ನಿರೀಕ್ಷೆ ಮಾಡಿದ್ವಿ RSS ಮತ್ತು ಚಡ್ಡಿ ಬಗ್ಗೆ ಮಾತನಾಡಿದ್ರೆ ಸಿದ್ದುಗೆ ಇರುವಷ್ಟು ಗೌರವ ಸಹ ಹಾಳಾಗುತ್ತೆ ಎಂದು ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ RSS & ಚಡ್ಡಿ ಟೀಕೆ ವಿಚಾರ ಇದು ಯಾರಿಗೂ ಶೋಭೆ ತರುವಂತಹದ್ದಲ್ಲ. ವಿಪಕ್ಷ ನಾಯಕನಾಗಿ ಸಿದ್ದರಾಮಯ್ಯ ಗೌರವಯುತವಾಗಿ ನಡೆದುಕೊಳ್ತಾರೆ ಅನ್ನೋ ನಿರೀಕ್ಷೆ ಮಾಡಿದ್ವಿ. RSS ಮತ್ತು ಚಡ್ಡಿ ಬಗ್ಗೆ ಮಾತನಾಡಿದ್ರೆ ಸಿದ್ದುಗೆ ಇರುವಷ್ಟು ಗೌರವ ಸಹ ಹಾಳಾಗುತ್ತೆ. ಇದರಿಂದ ಸಿದ್ದರಾಮಯ್ಯಗೆ ಶೋಭೆ ಬರಲ್ಲ ಎಂದು ಹೇಳಿದರು.

ಅದಲ್ಲದೇ. ಸಿದ್ದು & ಯಡಿಯೂರಪ್ಪ ಮುಖಾಮುಖಿ ಭೇಟಿ ವಿಚಾರ‌‌ವಾಗಿ ಮಾತನಾಡಿದ ಅವರು,  ಅನಿರೀಕ್ಷಿತವಾಗಿ ಅವರು ಸಿದ್ದರಾಮಯ್ಯ ಹೊರಟಿದ್ದರು. ಆಗ ನಾನು ಸಹ ಹೊರಟಿದ್ದೆ. ನಾನು ಕೂತಿದ್ದೆ ಅವರು ಸಹ ಬಂದರು. ಇದಕ್ಕೆ ವಿಶೇಷ ಅರ್ಥ ಕಲ್ಪಸುವ ಅಗತ್ಯ ಇಲ್ಲ. ಬೇರೆ ಚರ್ಚೆ ಮಾಡುವ ಅಗತ್ಯವೇನಿದೆ. ಅವರ ದಾರಿ ಅವರಿಗೆ, ನಮ್ಮ ದಾರಿ ನಮಗೆ. ಅವರ ಜೊತೆ ಯಾವುದೇ ಮಾತನಾಡುವ ಪ್ರಶ್ನೆ ಉದ್ಭವ ಆಗೋದಿಲ್ಲ. ನಾನು ಎಲ್ಲರ ಜೊತೆ ಸ್ನೇಹ ವಿಶ್ವಾಸ ಇಟ್ಟುಕೊಂಡಿದ್ದೇನೆ, ಅದರ ಬಗ್ಗೆ ಪ್ರಶ್ನೆ ಇಲ್ಲ ಎಂದು ಬಾಗಲಕೋಟೆಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments