ಮೈಸೂರು: ಕಾಫಿ ಬೆಳೆಗಾರರಿಗೆ ತಲೆನೋವಾಗಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಆನೆ ಕಾರ್ಯಚರಣೆ ನಡೆಸಿ ಯಶಸ್ವಿಯಾಗಿ ಸೆರೆಹಿಡಿದಿದ್ದಾರೆ.
ಸಾಕಾನೆಗಳಾದ ಅರ್ಜುನ, ಅಭಿಮನ್ಯು, ಧನಂಜಯ ಸೇರಿ 5 ಕಾಡಾನೆಗಳಿಂದ ಕಾರ್ಯಚರಣೆ ಮಾಡಲಾಗಿದ್ದು, ಬಿಬಿಟಿಸಿ ಕಾಫಿ ಎಸ್ಟೇಟ್ ಕಾವಲುಗಾರನನ್ನ ಕಾಡಾನೆ ಕೊಂದಿತ್ತು. ಕಾಡು ಬಿಟ್ಟು ನಾಡಿನಲ್ಲಿಯೇ ಬೀಡು ಬಿಟ್ಟಿದ್ದ ಪುಂಡಾನೆ. ಕಾಫಿ ಬೆಳೆಗಾರರಿಗೆ ತಲೆನೋವಾಗಿತ್ತು. ಸ್ಥಳೀಯರ ದೂರಿನ ಮೆರೆಗೆ ಆನೆ ಸೆರೆಗಾಗಿ ಸರ್ಕಾರಕ್ಕೆ ಪತ್ರಬರೆದಿದ್ದ ಕೊಡಗು ಅರಣ್ಯ ಅಧಿಕಾರಿಗಳು. ಸರ್ಕಾರದಿಂದ 5 ಆನೆಗಳ ಸೆರೆಗೆ ಅನುಮತಿ ಸಿಕ್ಕಿದ ಬಳಿಕ ಅರವಳಿಕೆ ಚುಚ್ಚು ಮದ್ದು ನೀಡಿದ ಬಳಿಕೆ 2 ಕಿಮೀ ಓಡಿದ ಆನೆ. ಸಿಸಿಎಫ್ ಮೂರ್ತಿ, ಡಿಸಿಎಫ್ ಚಕ್ರಪಾಣಿ ಸೇರಿ ನೂರಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದಾರೆ. ಸೆರೆಯಾದ ಕಾಡಾನೆಯನ್ನು ಬಂಡಿಪುರದ ಮೂಲೆಹೊಳೆ ಆರಣ್ಯಕ್ಕೆ ಶಿಫ್ಟ್ ಮಾಡಲಾಗಿದೆ.


