Wednesday, September 10, 2025
HomeUncategorizedಸಿದ್ದರಾಮಯ್ಯಗೆ ಬುದ್ದಿ ಭ್ರಮಣೆಯಾಗಿದೆ: ಎನ್ ರವಿಕುಮಾರ

ಸಿದ್ದರಾಮಯ್ಯಗೆ ಬುದ್ದಿ ಭ್ರಮಣೆಯಾಗಿದೆ: ಎನ್ ರವಿಕುಮಾರ

ವಿಜಯಪುರ : ಆರ್ ಎಸ್ ಎಸ್ ಬಗ್ಗೆ ಟೀಕೆ ಮಾಡುವ ಸಿದ್ದರಾಮಯ್ಯನವರಿಗೆ ಬುದ್ದಿ ಭ್ರಮಣೆಯಾಗಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ರವಿಕುಮಾರ ಹೇಳಿಕೆ ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಎಸ್ ಎಸ್ ಬಹುದೊಡ್ಡ ದೇಶಭಕ್ತ ಸಂಘಟನೆಯಾಗಿದೆ. ಪ್ರವಾಹ ಬರಲಿ, ಬರಗಾಲ ಬರಲಿ, ಯುದ್ದ ಆದಾಗ ಏನೆಲ್ಲ ಆದಾಗ ಸೇವೆ ಮಾಡುವ ಬಹುದೊಡ್ಡ ಸಂಘಟನೆ ಅದು. ಅಂತಹ ಸಂಘಟನೆ ಬಗ್ಗೆ ಟೀಕೆ ಮಾಡುವ ಸಿದ್ದರಾಮಯ್ಯನವರಿಗೆ ಬುದ್ದಿ ಭ್ರಮಣೆಯಾಗಿದೆ ಎಂದು ಕಿಡಿಕಾಡಿದರು.

ಅಲ್ಲದೇ ಸೋನಿಯಾ ಗಾಂಧಿ ಅವರ ಕೃಪೆಗೆ ಪಾತ್ರರಾಗಬೇಕು ಎಂಬ ಕಾರಣದಿಂದ ಇವರು ಆರ್ ಎಸ್ ಎಸ್ ಗೆ ಬೈಯುತ್ತಾರೆ. ಮಾಜಿ ಮುಖ್ಯಮಂತ್ರಿ ಆದವರು RSS ನಿಕ್ಕರ್ ಸುಟ್ಟು ಹಾಕುವುದು ಎಂದರೆ ಏನ್​ ಅರ್ಥ. ಇದು ಅತ್ಯಂತ ಕೀಳು ಮಟ್ಟದ, ಅತ್ಯಂತ ಅವಮಾನಕರ, ಹಾಗೂ ಅತ್ಯಂತ ಅಪ್ರಬುದ್ದವಾಗಿ ಅವರು ನಡೆದುಕೊಳ್ಳುತ್ತಿದ್ದಾರೆ. ಹಿಂದೆ ಎರಡು ಬಾರಿ RSS ನ ಬ್ಯಾನ್ ಮಾಡಿದ್ದೀರಿ
ಅದೇನು ಈಗ ಕ್ಲೋಸ್ ಆಯಿತಾ, ಇಂದು ವಿಶ್ವದಲ್ಲಿ ಎತ್ತರಕ್ಕೆ ಬೆಳೆಯುತ್ತಿದೆ‌. ನೀವು ಎಷ್ಟರ ಮಟ್ಟಿಗೆ ಅವಮಾನ ಮಾಡುತ್ತೀರಿ ಅಷ್ಟು ದೊಡ್ಡ ಮಟ್ಟದಲ್ಲಿ ಬೆಳೆಯುತ್ತದೆ ಎಂದು ಗುಡುಗಿದರು.

ಇನ್ನು ನಿಮ್ಮನ್ನ ದೇಶದಲ್ಲಿ ಜನ ಇಂದು ಬ್ಯಾನ್ ಮಾಡುತ್ತಿದ್ದಾರೆ. ಉತ್ತರ ಪ್ರದೇಶದ 405 ಸೀಟುಗಳಲ್ಲಿ 397 ಸೀಟುಗಳಿಗೆ ಡಿಪಾಜಿಟ್ ಇಲ್ಲ. ನೀವು RSS ನ ನಿಕ್ಕರ್ ಸುಟ್ಟು ಹಾಕುತ್ತಿದ್ದೀರಿ, ಜನ ನಿಮ್ಮನ್ನು ಸುಟ್ಟು ಹಾಕುತ್ತಿದ್ದಾರೆ. ಅಂದರೆ ನೇರವಾಗಿ ಸುಡದೇ ಜನ ಮನಸ್ಸಿನಿಂದ ನಿಮ್ಮನ್ನು ಕಿತ್ತಾಕುತಿದ್ದಾರೆ. ಯಾರೋ ದಡ್ಡರು ಹೇಳಿ ಕೊಟ್ಟಂಗೆ ಸಿದ್ದರಾಮಯ್ಯ ನಡೆದುಕೊಳ್ಳುತ್ತಿದ್ದಾರೆ ಎಂದು ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

RELATED ARTICLES
- Advertisment -
Google search engine

Most Popular

Recent Comments