Wednesday, August 27, 2025
HomeUncategorizedರಸ್ತೆಯಲ್ಲಿ ನಿಂತಿದ್ದ ವಾಹನಕ್ಕೆ ಡಿಕ್ಕಿ : ಸ್ಥಳದಲ್ಲೇ ನಾಲ್ವರ ಸಾವು

ರಸ್ತೆಯಲ್ಲಿ ನಿಂತಿದ್ದ ವಾಹನಕ್ಕೆ ಡಿಕ್ಕಿ : ಸ್ಥಳದಲ್ಲೇ ನಾಲ್ವರ ಸಾವು

ಬಾಗಲಕೋಟೆ : ರಾಷ್ಟ್ರೀಯ ಹೆದ್ದಾರಿ 218ರಲ್ಲಿ ನಿಂತಿದ್ದ ಕ್ಯಾಂಟರ್​​ಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಸ್ಥಳದಲ್ಲೇ ನಾಲ್ವರ ದುರ್ಮರಣ ಹೊಂದಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಬಾಡಗಂಡಿ ಗ್ರಾಮದ ಬಳಿ ನಡೆದಿದೆ.

ರಾಮಸ್ವಾಮಿ, ರಜಾಕಸಾಬ್, ಮಲ್ಲಪ್ಪ, ನಾಸೀರ್ ಮೃತ ದುರ್ದೈವಿಗಳು. ಈ ನಾಲ್ವರು ಬೀಳಗಿ ಪಟ್ಟಣದವರು. ಹುಬ್ಬಳ್ಳಿ ಸೋಲ್ಹಾಪೂರ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದ ದುರ್ಘಟನೆ.

ಇನ್ನು ಕ್ಯಾಂಟರ್ ಪಂಚರ್ ಆದ ಹಿನ್ನೆಲೆ ರಸ್ತೆ ಪಕ್ಕಕ್ಕೆ ನಿಂತಿದ್ದ ಗಾಡಿಗೆ ಅಪರಿಚಿತ ವಾಹನ ತಡರಾತ್ರಿ ಬಂದು ಡಿಕ್ಕಿ ಹೊಡೆದಿದೆ.

ಘಟನೆ ಬೆನ್ನಲ್ಲೆ ಸ್ಥಳಕ್ಕೆ ಬಾಗಲಕೋಟೆ ಜಿಲ್ಲೆಯ ಬೀಳಗಿ ಪೋಲಿಸರ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments