Monday, August 25, 2025
Google search engine
HomeUncategorizedಒಂದು ಸ್ಥಾನಕ್ಕೆ ಮೂವರ ಕಿತ್ತಾಟ..!

ಒಂದು ಸ್ಥಾನಕ್ಕೆ ಮೂವರ ಕಿತ್ತಾಟ..!

ಬೆಂಗಳೂರು: ರಾಜ್ಯಸಭಾ ಮಹಾ ಕದನಕ್ಕೆ ವೇದಿಕೆ ಸಿದ್ಧವಾಗಿದೆ. ಸಿದ್ದರಾಮಯ್ಯ ಮಾಡಿದ ಆ ಒಂದು ರಣತಂತ್ರ ಇದೀಗ ಇಡೀ ರಾಜ್ಯಸಭಾ ಚುನಾವಣೆಗೆ ರೋಚಕತೆಯ ಮೆರಗು ತಂದು ಕೊಟ್ಟಿದೆ. ಒಂದು ಸ್ಥಾನಕ್ಕೆ ಮೂರು ಪಕ್ಷದ ಅಭ್ಯರ್ಥಿಗಳು ರಣರಂಗದಲ್ಲಿದ್ದು, ಕಿತ್ತಾಟ ಬಲು ಜೋರಾಗಿದೆ.

ಈಗಾಗಲೇ ‌ಬಿಜೆಪಿ ಎರಡು‌ ಸ್ಥಾನ. ಕಾಂಗ್ರೆಸ್ ಒಂದು ಸ್ಥಾನ ಭದ್ರಪಡಿಸಿಕೊಂಡಿದ್ದು, ಉಳಿದಿರೋ ಒಂದು ಸ್ಥಾನಕ್ಕೆ ಮೂರು ಪಕ್ಷಗಳು ಬಿಗ್ ಫೈಟ್‌ ನಡೆಸುತ್ತಿವೆ. ಅವಿರೋಧ ಅಯ್ಕೆಯಾಗುತ್ತೆ, ಮೂರು ಪಕ್ಷಗಳಿಂದ‌ ರಾಜ್ಯಸಭೆಗೆ ಅಭ್ಯರ್ಥಿಗಳು ಹೋಗ್ತಾರೆ ಎಂದುಕೊಂಡಿದ್ದವರಿಗೆ ಕೈ ಪಡೆ ಶಾಕ್ ನೀಡಿತ್ತು. ಜೆಡಿಎಸ್‌ಗೆ ಕಾಂಗ್ರೆಸ್ ಸಪೋರ್ಟ್ ಮಾಡುತ್ತೆ ಎಂದುಕೊಂಡಿತ್ತು. ಆದ್ರೆ, ಸಿದ್ದರಾಮಯ್ಯ ಉರುಳಿಸಿದ ಸೂತ್ರಕ್ಕೆ ತೆನೆಹೊತ್ತ ಮಹಿಳೆ ಕಕ್ಕಾಬಿಕ್ಕಿಯಾಗಿಬಿಡ್ತು.  ಕೊನೆ ಕ್ಷಣದವರೆಗೂ ಕಾಂಗ್ರೆಸ್‌ ಅಭ್ಯರ್ಥಿಯನ್ನು ಕಣದಿಂದ ಹಿಂದೆ ಸರಿಸಲು ದಳಪತಿಗಳು ನಾನಾ ಕಸರತ್ತು ಮಾಡಿದ್ರು.. ಆದ್ರೆ, ದಳಪತಿಗಳ ಬತ್ತಳಿಕೆಯಲ್ಲಿದ್ದ ಅಸ್ರ್ತಗಳೆಲ್ಲ ಖಾಲಿಯಾದ್ರೂ, ಕೈ ಪಡೆ ಮಾತ್ರ ಜೆಡಿಎಸ್‌ನೊಂದಿಗೆ ಸಖ್ಯ ಬೆಳಸಲು ಮನಸ್ಸು ಮಾಡಲಿಲ್ಲ. ಕೊನೆಯಾದಾಗಿ ನಾವು ಸಹ ಅಭ್ಯರ್ಥಿಯನ್ನ ವಾಪಸ್‌ ಪಡೆಯೋದು ಬೇಡ ಎಂದು‌ ಜೆಡಿಎಸ್ ನಾಯಕರು ತೀರ್ಮಾನ ಮಾಡಿದರು.

ಇನ್ನು ಬಿಜೆಪಿ ಮೂರನೇ ಅಭ್ಯರ್ಥಿ ಹಾಕಿ ಗೆಲುವಿಗಾಗಿ ಒಳಗೊಳಗೆ ತಂತ್ರಗಾರಿಕೆಯಲ್ಲಿ ಬ್ಯುಸಿಯಾಗಿದೆ. ಆದ್ರೆ, ಇತ್ತ ಕಾಂಗ್ರೆಸ್ ಜೊತೆ ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಲು ಪ್ರಯತ್ನ ಮಾಡಿ ಕೊನೆಗೆ ಯಶಸ್ಸು ಕಾಣದೆ ಕಣದಲ್ಲಿ ಫೈಟ್‌ ನೀಡಲು ಸಜ್ಜಾಗಿದೆ. ಮಧ್ಯಾಹ್ನದವರೆಗೂ ಜೆಡಿಎಸ್ ಸರ್ವ ಪ್ರಯತ್ನ‌ ನಡೆಸಿತ್ತು. ಆದ್ರೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಯಾವಾಗ ನಮ್ಮ‌ ಅಭ್ಯರ್ಥಿಯನ್ನು ಕಣದಿಂದ ಹಿಂದೆ‌ ಸರಿಸಲ್ಲ ಅಂದ್ರೋ ಆಗ್ಲೇ ಜೆಡಿಎಸ್ ಮಾಡಿದ ಪ್ರಯತ್ನಕ್ಕೆ ಏಳ್ಳು ನೀರು ಬಿಟ್ಟಂತಾಯ್ತು. ನಮಗೆ ಜೆಡಿಎಸ್ ಮತಗಳ ಅವಶ್ಯಕತೆ ಇಲ್ಲ. ಆದ್ರೆ, ನಮ್ಮ ಅಭ್ಯರ್ಥಿಯ ಗೆಲುವು ಶತಸಿದ್ಧ ಎಂದು ಕಾಂಗ್ರೆಸ್‌ ನಾಯಕರು ಹೇಳಿರೋದು ಇದೀಗ ಹೊಸ ಸಂಚಲನಕ್ಕೆ ಕಾರಣವಾಗಿದೆ. ಜೊತೆಗೆ ಅಡ್ಡ ಮತದಾನದ ಭೀತಿಯಿಂದ ಕೈ ಶಾಸಕರಿಗೆ ಈಗಾಗಲೇ ವಿಪ್ ಸಹ ಜಾರಿ ಮಾಡಲಾಗಿದೆ.

ಒಟ್ಟಿನಲ್ಲಿ, ರಾಜ್ಯಸಭಾ ರಣಾಂಗಣಕ್ಕೆ ವೇದಿಕೆ ಸಿದ್ಧವಾಗಿದ್ದು, ಒಂದು‌ ಸೀಟ್ ಯಾರ ಪಾಲಾಗುತ್ತೆ ಎಂಬುದಕ್ಕೆ ಜೂನ್ 10ರಂದು ಉತ್ತರ ಸಿಗಲಿದೆ. ಆದ್ರೆ, ಇಲ್ಲಿ ಸಂಖ್ಯಾಬಲದ ಕೊರತೆ ಎದುರುಸುತ್ತಿರುವ ಜೆಡಿಎಸ್‌ಗೆ ಕೈ ಹಿಡಿದ್ರೆ ಜಯ.. ಇಲ್ಲ ಬಿಜೆಪಿ ಮೂರನೇ ಅಭ್ಯರ್ಥಿಗೆ ಜಯದ ಮಾಲೆ ಎಂದು ರಾಜಕೀಯ ಪಡಶಾಲೆಯಲ್ಲಿ ಲೆಕ್ಕಾಚಾರ ಶುರುವಾಗಿದೆ.

RELATED ARTICLES
- Advertisment -
Google search engine

Most Popular

Recent Comments