Saturday, August 23, 2025
Google search engine
HomeUncategorizedಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣದ ತನಿಖೆ ಚುರುಕು

ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣದ ತನಿಖೆ ಚುರುಕು

ಹಾಸನ: ನಗರ ಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದ್ದು, ದಕ್ಷಿಣ ವಲಯ ಐಜಿಪಿ ಪ್ರವೀಣ್​ ಮಧುಕರ್ ಪವಾರ್ ಇಂದು ಎಸ್ಪಿ ಕಚೇರಿಗೆ ಭೇಟಿ ನೀಡಿ, ಪ್ರಕರಣ ಸಂಬಂಧ ಸಂಪೂರ್ಣ ಮಾಹಿತಿ ಪಡೆದುಕೊಂಡ್ರು.

ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಬಗ್ಗೆ ಸ್ವತಃ ಉಸ್ತುವಾರಿ ಸಚಿವ ಕೆ.‌ಗೋಪಾಲಯ್ಯ ಮಾಹಿತಿ ನೀಡಿದ್ದು, ಕೊಲೆಯ ಹಿಂದೆ ಯಾವುದೇ ರಾಜಕೀಯ ಷಡ್ಯಂತ್ರವಿಲ್ಲ, ಎರಡು ಕುಟುಂಬಗಳ ನಡುವಿನ ಗಲಾಟೆಯಿಂದ ಕೊಲೆ ನಡೆದಿದೆ ಎಂಬ ಮಾಹಿತಿ ನೀಡಿದ್ರು.

ಅಗಲಿದ ನಗರಸಭೆ ಸದಸ್ಯ ಪ್ರಶಾಂತ್ ಗೆ ಜೆಡಿಎಸ್ ಕಚೇರಿಯಲ್ಲಿ ಪ್ರಶಾಂತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಲಾಯಿತು.

ಇನ್ನು ಘಟನೆ ಬಗ್ಗೆ ಸ್ಥಳಿಯ ಶಾಸಕ ಪ್ರೀತಂಗೌಡ ರಿಯಾಕ್ಟ್ ಮಾಡಿದ್ದು, ತನಿಖೆ, ಯಾವ ಮಟ್ಟದಲ್ಲಾದ್ರೂ ಕ್ಷೇತ್ರದ ಶಾಸಕನಾಗಿ ಸಹಕಾರ ಕೊಡ್ತೀನಿ. ಚನ್ನರಾಯಪಟ್ಟಣದಲ್ಲಿ ನಾಲ್ಕು ಕೊಲೆಗಳಾದವು ಅದಕ್ಕೆ ಶಾಸಕರು, ಸಂಸದರು ಕಾರಣ ಅನ್ನೋಕಾಗುತ್ತಾ ಅಂತ ಮಾಜಿ ಸಚಿವ ಹೆಚ್.ಡಿ.‌ರೇವಣ್ಣಗೆ ತಿರುಗೇಟು ನೀಡಿದ್ರು.

ಇತ್ತ, ಜೆಡಿಎಸ್ ಮುಖಂಡರ ಹುಟ್ಟುಹಬ್ಬ ಆಚರಣೆಯ ಫ್ಲೆಕ್ಸ್​ಗಳಲ್ಲಿ ಪ್ರಮುಖ‌ ಆರೋಪಿಯಾಗಿರೋ ಪೂರ್ಣಚಂದ್ರ ಪೋಟೋ ಇರೋದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೂರ್ಣಚಂದ್ರ ಒಂದು ವೇಳೆ ಜೆಡಿಎಸ್​ ಕಾರ್ಯಕರ್ತ ಆಗಿದ್ದೇ ಆದ್ರೆ ಪೊಲೀಸ್​ ಇಲಾಖೆ ವಿರುದ್ಧ ಆರೋಪಗಳ ಸುರಿಮಳೆ ಗೈದ ಶಾಸಕ ರೇವಣ್ಣಗೆ ತಿರುಗುಬಾಣವಾಗಲಿದೆ.

RELATED ARTICLES
- Advertisment -
Google search engine

Most Popular

Recent Comments