Saturday, August 30, 2025
HomeUncategorized70 ಜನರು ಕೂಗಿದ್ರೆ ಅದು ಜನಾಕ್ರೋಶ ಆಗಲ್ಲ : ಸಿ.ಟಿ.ರವಿ

70 ಜನರು ಕೂಗಿದ್ರೆ ಅದು ಜನಾಕ್ರೋಶ ಆಗಲ್ಲ : ಸಿ.ಟಿ.ರವಿ

ಮಂಡ್ಯ: 70 ಜನರು ಕೂಗಿದ್ರೆ ಅದು ಜನಾಕ್ರೋಶ ಆಗಲ್ಲ’ ಎಂದು ಮಂಡ್ಯದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ.

ರಾಜ್ಯದಲ್ಲಿ ಭುಗಿಲೆದ್ದಿರುವ ಪಠ್ಯ ಪರಿಷ್ಕರಣೆ ವಿಚಾರವಾಗಿ ಮಾತನಾಡಿದ ಅವರು, ಇದು ಟೂಲ್ ಕಿಟ್ ರಾಜಕಾರಣದ ಒಂದು ಭಾಗ. ಕೆಲವರು ಅರಿವಿಲ್ಲದೆ, ಮತ್ತೆ ಕೆಲವರು ದುರುದ್ದೇಶದಿಂದ ಟೂಲ್ ಕಿಟ್ ಭಾಗವಾಗಿ ವಿವಾದವನ್ನ ಹುಟ್ಟಹಾಕುತ್ತಿದ್ದಾರೆ. ಟೂಲ್ ಕಿಟ್ ರಾಜಕಾರಣಕ್ಕೆ ಮೆಡಿಷನ್ ಇಲ್ಲ. ಅರಿವಿಲ್ಲದವರಿಗೆ ಮನವರಿಕೆ ಮಾಡಿಕೊಡುತ್ತೇವೆ ಅದಲ್ಲದೆ, ಕುವೆಂಪು ಪಠ್ಯ ಮೊದಲು 7 ಇತ್ತು, ಇವಾಗ 10 ಮಾಡಿದ್ದೇವೆ ಎಂದು ಹೇಳಿದ ಮೇಲೆ ಇದು ಗೊತ್ತಿರಲಿಲ್ಲ ಅಂತ ಹೇಳಿದ್ದಾರೆ. ಟೂಲ್ ಕಿಟ್ ರಾಜಕಾರಣ ಇವತ್ತು ನಿನ್ನೆಯದಲ್ಲ ಎಂದರು.

ಇನ್ನು, ಮೋದಿ ಪ್ರಧಾನಿಯಾದ ದಿನ ಅಸಹಿಷ್ಣು ವಾತಾವರಣ ಇದೆ ಎಂದು ಕೆಲವರು ಪ್ರಶಸ್ತಿ ವಾಪಸ್ ಕೊಟ್ರು. ಅದು ಕೂಡ ಟೂಲ್ ಕಿಟ್ ರಾಜಕಾರಣದ ಒಂದು ಭಾಗ. ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಕೆಲವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ತಪ್ಪುಗಳನ್ನ ಸರಿಪಡಿಕೊಳ್ಳಲು ಸಿದ್ದರಿದ್ದೇವೆ. ನಮಗೆ ಅಹಂಭಾವ ಇಲ್ಲ. ಆದ್ರೆ ಇವರೆಳೋ ಅಪಪ್ರಾಚಾರವನ್ನ ವಾಸ್ತವಿಕ ನೆಲೆಯಲ್ಲಿ ಜನರ ಮುಂದೆ ಇಡುತ್ತೇವೆ. ಪೂರ್ವಗ್ರಹ ಪೀಡಿತ ಜನರನ್ನ ನಾವು ಎದುರಿಸುತ್ತೇವೆ. ಕೆಲವರು ಈ ರೀತಿ ಚಟುವಟಿಕೆ ಮೂಲಕ ನಾವು ಬದುಕಿದ್ದೇವೆ ಎಂದು ತೋರಿಸ್ತಾರೆ. ಇದನ್ನೇ ಜನಕ್ರೋಶ ಅನ್ನೋದಕ್ಕೆ ಆಗೋದಿಲ್ಲ. ನಮ್ಮ ರಾಜ್ಯದ ಜನ ಸಂಖ್ಯೆ 7ಕೋಟಿ 70 ಜನರು ಕೂಗಿದ್ದನ್ನ ಜನಾಕ್ರೋಶ ಎನ್ನುತ್ತೀರಾ? ಎಂದು ಮಾಧ್ಯಮಗಳಿಗೆ ಸಿ.ಟಿ.ರವಿ ಪ್ರಶ್ನಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments