Sunday, August 31, 2025
HomeUncategorizedಸಚಿವ ನಾರಾಯಣ್ ಗೌಡ ಪೊಲಿಟಿಕಲ್ ಬೆಗ್ಗರ್: JDS ಜಿಲ್ಲಾಧ್ಯಕ್ಷ ಡಿ.ರಮೇಶ್

ಸಚಿವ ನಾರಾಯಣ್ ಗೌಡ ಪೊಲಿಟಿಕಲ್ ಬೆಗ್ಗರ್: JDS ಜಿಲ್ಲಾಧ್ಯಕ್ಷ ಡಿ.ರಮೇಶ್

ಮಂಡ್ಯ: ಪೊಲಿಟಿಕಲ್ ಬೆಗ್ಗರ್ ನಾರಾಯಣ್ ಗೌಡ.! ಕನ್ನಡ ಮಾತನಾಡುವುದಕ್ಕೆ ಬಾರದ ಮನುಷ್ಯ ಎಂದು ಸಚಿವ ನಾರಾಯಣ್ ಗೌಡರ ವಿರುದ್ದ  ಮಂಡ್ಯ ಜೆಡಿಎಸ್​​ ಜಿಲ್ಲಾಧ್ಯಕ್ಷ ರಮೇಶ್ ಕಿಡಿಕಾಡಿದ್ದಾರೆ.

ಅವರ ವಿರುದ್ದ ಸಚಿವ ನಾರಾಯಣ್ ಗೌಡ ವಾಗ್ದಾಳಿ ವಿಚಾರಕ್ಕೆ ಸಂಬಂಧಿಸಿದಂತೆ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಏ ನಾರಾಯಣ್ ಗೌಡ ನೀನು ಎಲ್ಲಿದ್ದೆ? ಅವರು ಚೀನಾದಲ್ಲಿಲ್ಲ, ಕಮ್ಯೂನಿಸ್ಟ್‌ ಅಲ್ಲ ಅವರು. ಅಂಬೇಡ್ಕರ್ ಬರೆದ ಸಂವಿಧಾನದ ಕೆಲಸ ಕೆಲಸ ಮಾಡ್ತಿದ್ದೇವೆ ಅನ್ನೋದನ್ನ ಅರ್ಥಮಾಡಿಕೊಳ್ಳಬೇಕು. ಅವರು ಪ್ರಜಾ ಸೇವಕರು, ಸೇವಕರು ಅಂದ್ರೆ ಇಂಗ್ಲಿಷ್​​ನಲ್ಲಿ ಕೇಳಿ ಅವರ ಬಳಿ ಎಂದು ಗುಡುಗಿದರು.

ಮೊದಲು ಅವರಿಗೆ ಕನ್ನಡ ಬರುತ್ತಾ? ಕನ್ನಡ ಪರ ಹೋರಾಟಗಾರರು ಇವನನ್ನು ಇನ್ನು ಮಂತ್ರಿಯಾಗಿ ಈ ಮನುಷ್ಯನ ಇಟ್ಟಿದ್ದಾರೆ ಯಾಕೆ ಅಂತ ಗೊತ್ತಿಲ್ಲ. ಪದ ಬಳಕೆ ಗೊತ್ತಿಲ್ಲ, ಭಾಷಾ ಜ್ಞಾನ ಗೊತ್ತಿಲ್ಲ, ನನಗೆ ಪಾಠ ಹೇಳಲು ಬರ್ತಾರೆ ಎಂದು ಟೀಕಿಸಿದರು.

ಇನ್ನು ನಾನು ಒಂದು ಪಕ್ಷದ ಅಧ್ಯಕ್ಷ ಏ ಅನ್ನೊ ಪದ ಉಪಯೋಗಿಸುತ್ತಾರೆ. ಅವರಿಗೂ ಅಧ್ಯಕ್ಷ ಆಗಿದ್ದವನು ನಾನು. ನಾಲಿಗೆ ಮೇಲೆ ಹಿಡಿತ ಇಟ್ಟಿಕೊಳ್ಳಿ ಯಾರು ನಿಮ್ಮ ಮನೆ ಆಳುಗಳಲ್ಲ. ನಾವೆಲ್ಲ ಒಂದು ಪಕ್ಷದ ಕಟ್ಟಾಳುಗಳಾಗಿದ್ದೇವೆ. ಪಕ್ಷವನ್ನು ತಾಯಿ ಅಂತ ತಿಳಿದವರು, ನಿಮಗೆ ವ್ಯತ್ಯಾಸ ಗೊತ್ತಿಲ್ಲ. ತಾಯಿ ಯಾರು ಅಂತಾನೇ ಗೌಡ್ರುಗೆ ಗೊತ್ತಿಲ್ಲ. ಇವರನ್ನ ಯಾರು ಬೆಳೆಸಿದವರು? ಪಕ್ಷಕ್ಕೆ ತಂದವರು ಯಾರು? ಉದ್ಯೋಗ ಕೊಟ್ಟ ಪಕ್ಷ ಯಾವುದು ಅಂತ ಗೊತ್ತಿಲ್ಲ ? ಪಕ್ಷವನ್ನೆ ಚೂರು ಮಾಡ್ತಿನೆ ಅಂತಾರೆ ಎಂದು ವಾಗ್ದಾಳಿ ನಡೆಸಿದರು.

ನಾನು ಈ ಪಕ್ಷದಲ್ಲಿ 1984-85ರಲ್ಲಿ ವಿದ್ಯಾರ್ಥಿಗಳ ನಾಯಕ. ದೇವೇಗೌಡ್ರು ಜೊತೆ ಅವತ್ತೆ ಸೇರಿದವನು, ಅವರ ಜೊತೆನೆ ಇದ್ದೇನೆ. ನಿನ್ನ ತರ ಭಿಕ್ಷೆ ಪಾತ್ರೆ ಹಿಡಿದುಕೊಂಡು ಹೋಗಿಲ್ಲ. ನಾರಾಯಣ್ ಗೌಡ ಯು ಆರ್ ಎ ಪೊಲಿಟಿಕಲ್ ಬೆಗ್ಗರ್.! ಭಿಕ್ಷೆ ಪಾತ್ರೆ ಹಿಡಿದು ಬಿಎಸ್ಪಿ, ಜೆಡಿಎಸ್, ಬಿಜೆಪಿ ಈಗಾ ರಾತ್ರಿ ವೇಳೆ ಸಿದ್ದರಾಮಣ್ಣ-ಶಿವಕುಮಾರಣ್ಣನ ಮನೆ ಸುತ್ತುತ್ತಾ ಇದ್ದಿಯಾ. ನನ್ನ ಮನೆ ಬಾಗಿಲಿಗೆ ಬಂದು ಬಿ ಫಾರಂ ಕೊಡ್ಸು ಅಂದಿದ್ದು ನಾನೋ ನೀನೋ ಎಂದು ವ್ಯಂಗ್ಯವಾಡಿದರು.

ನಾನು ದೇವೇಗೌಡ್ರು ನ ದೇವರಂತೆ ಪೂಜೆ ಮಾಡ್ತೇನೆ. ಸಂಸ್ಕಾರ ಉಳಿಸಿಕೊಂಡಿದ್ದೇನೆ, ಆ ಪುಣ್ಯಾತ್ಮ ಅನ್ನ ಹಾಕಿ ಸಾಕಿದ್ದಾರೆ. ನಿನ್ನತರ ಬೆಗ್ಗರ್ ಅಲ್ಲ, ಅದರಲ್ಲೂ ಪೊಲಿಟಿಕಲ್ ಬೆಗ್ಗರ್. ಅಲ್ಲದೇ ನಾನು ದೇವೇಗೌಡ ಅವರನ್ನು ನೋಡಿದಾಗ ನೀವು ಬಾಂಬೆಲಿ ಕಸ ಹೊಡಿತಿದ್ದೀರಿ ಎಂದು ಆಕ್ರೋಶ ಹೊರಹಾಕಿದರು.

RELATED ARTICLES
- Advertisment -
Google search engine

Most Popular

Recent Comments