Thursday, September 11, 2025
HomeUncategorizedಗ್ಯಾರೇಜ್ ಕೆಲಸಕ್ಕೆ ಹೋಗಿದ್ದವನ ಕಗ್ಗೊಲೆ

ಗ್ಯಾರೇಜ್ ಕೆಲಸಕ್ಕೆ ಹೋಗಿದ್ದವನ ಕಗ್ಗೊಲೆ

ಯಾದಗಿರಿ : ಜಿಲ್ಲೆಯ ಶಹಾಪುರ ತಾಲೂಕಿನ ಚಾಮನಾಳ್ ಗ್ರಾಮವೇ ಶಾಕ್‌ಗೆ ಒಳಗಾಗುವಂಥಾ ಘಟನೆ ನಡೆದು ಹೋಗಿದೆ.ಶಾಂತವಾಗಿದ್ದ ಚಾಮನಾಳ್ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಇದಕ್ಕೆ ಕಾರಣವೇ 28 ವರ್ಷದ ಯುವಕನ ಕಗ್ಗೊಲೆ ಸುರಪುರ ತಾಲೂಕಿನ ದಂಡಸೊಲ್ಲಾಪುರ ಸಚಿನ್ ಕೊಲೆಯಾದ ಯುವಕ ಅಂತ ತಿಳಿದು ಬಂದಿದೆ. ಸ್ಥಳಕ್ಕೆ ಬಂದ ಪೊಲೀಸರಿಗೆ ಕಂಡಿದ್ದು ಮೃತನ ಕೊರಳಲ್ಲಿ ಇದ್ದ ಹಳೆ ಸೀರೆ. ಮನೆಯ ಹಿರಿಯ ಮಗನನ್ನು ಕಳೆದುಕೊಂಡ ತಾಯಿ ಕಣ್ಣೀರು ಹಾಕಿದ್ದಾರೆ.

ಇನ್ನು ಸಚಿನ್ ಕೆಲ ವರ್ಷಗಳಿಂದ ಚಾಮನಾಳ್ ಗ್ರಾಮದಲ್ಲಿ ಮೆಕಾನಿಕ್ ಆಗಿ ಗ್ಯಾರೇಜ್‌ ಒಂದರಲ್ಲಿ ಕೆಲಸ ಮಾಡ್ತಾಯಿದ್ದ. ಎರಡು ದಿನಕ್ಕೋ ಮೂರು ದಿನಕ್ಕೋ ಊರಿಗೆ ಹೋಗಿ ತಾಯಿ ಹಾಗೂ ಸಹೋದರ, ಸಹೋದರಿಯರ ಜೊತೆ ಇರ್ತಾಯಿದ್ದ. ರಾತ್ರಿಯಾದ್ರೆ ಸಾಕು ಎಣ್ಣೆ ಹಾಕಿಕೊಂಡೆ ಇರ್ತಾಯಿದ್ದ. ಆದರೆ, ಯಾರ ತಂಟೆ ತಕರಾರಿಗೆ ಹೋಗ್ತಿರಲಿಲ್ಲ. ತಾನಾಯ್ತು ತನ್ನ ಕೆಲಸ ಆಯ್ತು ಅಂತ ಇರ್ತಾಯಿದ್ದ. ಆದ್ರೆ, ಸೋಮವಾರ ಮಧ್ಯಾಹ್ನ ಕೆಲಸಕ್ಕೆ ಹೋಗುತ್ತೇನೆ ಅಂತ ತಾಯಿಗೆ ಹೇಳಿ ಹೋದವನು ಶವವಾಗಿ ಪತ್ತೆಯಾಗಿದ್ದಾನೆ. ಕೇವಲ ಸೀರೆಯಿಂದ ಕತ್ತು ಬಿಗಿದು ಕೊಲೆ ಮಾಡಿರುವುದಷ್ಟೇ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.ಸ್ನೇಹಿತರ ಮೇಲೆ ಪೊಲೀಸರಿಗೆ ಅನುಮಾನ ವ್ಯಕ್ತವಾಗಿದೆ.

ಒಟ್ನಲ್ಲಿ ಗ್ಯಾರೇಜ್‌ನಲ್ಲಿ ಕೆಲಸ ಮಾಡಿಕೊಂಡು ಸಂಸಾರಕ್ಕೆ ಆಸರೆಯಾಗಿದ್ದ ಯುವಕ ಸಚಿನ್ ಹೆಣವಾಗಿದ್ದಾನೆ. ಕುಡಿತದ ಚಟಕ್ಕೆ ಸಚಿನ್ ಪ್ರಾಣ ಕಳೆದುಕೊಂಡಿದ್ದಾನಾ ಅಥವಾ ಯಾರಾದರೂ ಕೊಲೆ ಮಾಡಿದ್ದಾರಾ ತನಿಖೆಯಿಂದಷ್ಟೇ ಗೊತ್ತಾಗಬೇಕಿದೆ.

RELATED ARTICLES
- Advertisment -
Google search engine

Most Popular

Recent Comments