Saturday, September 13, 2025
HomeUncategorizedಸಿದ್ದರಾಮಯ್ಯ ಕಾಂಗ್ರೆಸ್​​ನ ನಕಲಿ ಲೀಡರ್ : ಸಚಿವ ಪ್ರಹ್ಲಾದ್ ಜೋಶಿ

ಸಿದ್ದರಾಮಯ್ಯ ಕಾಂಗ್ರೆಸ್​​ನ ನಕಲಿ ಲೀಡರ್ : ಸಚಿವ ಪ್ರಹ್ಲಾದ್ ಜೋಶಿ

ಹುಬ್ಬಳ್ಳಿ : ಮಾಜಿ ಸಿಎಂ ಸಿದ್ದರಾಮಯ್ಯ ಟ್ವಿಟ್​ಗೆ ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತೀರುಗೇಟು ನೀಡಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, RSS ನವರು ಯಾವತ್ತೂ ಪ್ರತಿಕ್ರಿಯೆ ನಿಡೋದಿಲ್ಲ. ನಾವು RSS ನಿಂದಲೇ ಬಂದವರು ಅದಕ್ಕೆ ನಾವು ಮಾತನಾಡುತ್ತೇವೆ. ಮುಸ್ಲಿಂ ತುಷ್ಟಿಕರಣಕ್ಕೋಸ್ಕರ ಅವರು ಹಾಗೇ ಮಾತನಾಡುತ್ತಾರೆ ಎಂದರು.

ಅಷ್ಟೆ ಅಲ್ಲದೇ ಇಟಲಿ ನಾಯಕರಿಗೆ ಹತ್ತಿರವಾಗಲು ಅವರು ಆ ರೀತಿ ಹೇಳಿಕೆ ನೀಡುತ್ತಿದ್ದಾರೆ. ಇನ್ಮೇಲೆ ನಾನು ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಬಾರದೆಂದು ತೀರ್ಮಾನಿಸಿದ್ದೇನೆ. ಅವರು ಏನೇನೋ ಮಾತನಾಡುತ್ತಿದ್ದಾರೆ.
ಅವರು ಕಾಂಗ್ರೆಸ್​​ನ ನಕಲಿ ಲೀಡರ್ ಎಂದು ಕಿಡಿಕಾರಿದರು.

ಇನ್ನು ನಾವ್ಯಾರೂ ಕೇವಲ ಬಿಜೆಪಿಯವರೇ ಹಿಂದೂಗಳೆಂದು ಎಲ್ಲೂ ಕೂಡ ಹೇಳಿಲ್ಲ. ಇವರು ಸದ್ಯ ನಾವು ಹಿಂದೂಗಳೆಂದು ಹೇಳ್ತಿದ್ದಾರೆ ಅನ್ನೋದೇ ಸಂತೋಷ ವಿಷಯವಾಗಿದೆ. ಈ ಹಿಂದೆ ಇವರು ನಾವು ಹಿಂದೂಗಳೇ ಅಲ್ಲ ಎನ್ನುತ್ತಿದ್ದರು ಇವಾಗ ಹಿಂದೂ ಎನ್ನುತ್ತಿದ್ದಾರೆ. ಅಲ್ಲದೇ RSS ಬಗ್ಗೆ ಸಿದ್ದರಾಮಯ್ಯನವರಿಗೆ ಎಲ್ಲಾ ಗೊತ್ತಿದೆ. ಸುಮ್ಮನೇ ಗಂಜಿ ಕೇಂದ್ರದ ಆಸೆಗಾಗಿ RSS ಬಗ್ಗೆ ಮಾತನಾಡುತ್ತಿದ್ದಾರೆ. ಅವರು ಮೊದಲು ಅವರ ನಾಯಕರ ಮೂಲ ತಿಳಿದುಕೊಳ್ಳಲಿ ಎಂದು ಸಿದ್ದರಾಮಯ್ಯ ವಿರುದ್ದ ಪ್ರಹ್ಲಾದ್ ಜೋಶಿ‌ ವಾಗ್ದಾಳಿ ನಡೆಸಿದರು.

RELATED ARTICLES
- Advertisment -
Google search engine

Most Popular

Recent Comments