Saturday, September 13, 2025
HomeUncategorizedಬಿಜೆಪಿಯವರು ದಲಿತರನ್ನ ಸಿಎಂ ಮಾಡಲ್ಲ : ಜಿ ಪರಮೇಶ್ವರ್

ಬಿಜೆಪಿಯವರು ದಲಿತರನ್ನ ಸಿಎಂ ಮಾಡಲ್ಲ : ಜಿ ಪರಮೇಶ್ವರ್

ಬೆಂಗಳೂರು : ಸಿಎಂ ಕನಸ್ಸು ಕಾಣೋ ದಲಿತರು ಹುಚ್ಚರು ಎಂಬ‌ ಕೇಂದ್ರ ಸಚಿವ ನಾರಾಯಣಸ್ವಾಮಿ ಹೇಳಿಕೆಗೆ ಕಾಂಗ್ರೆಸ್​​ನ ದಲಿತ ನಾಯಕ ಜಿ ಪರಮೇಶ್ವರ್ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ದಲಿತರನ್ನ ಸಿಎಂ ಮಾಡೋದಿಲ್ಲ ಎಂಬುದು ಸ್ಪಷ್ಟವಾಗಿದೆ. ನನ್ನ ಹೆಸರು ಮತ್ತು ಪ್ರಿಯಾಂಕ್ ಖರ್ಗೆ ಹೆಸರನ್ನ ಹೇಳಿದ್ದಾರೆ. ಅದು ನಮ್ಮ ಪಕ್ಷದಲ್ಲಿ ನಡೆಯುವ ವಿದ್ಯಮಾನಗಳು. ಆದರೆ, ನಮ್ಮ ಪಕ್ಷದ ಬಗ್ಗೆ ಅವರಿಗೇನು ಗೊತ್ತು. ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಅವಕಾಶವಿದೆ ಎಂದು ವಾಗ್ದಾಳಿ ನಡೆಸಿದರು.

ಅಷ್ಟೇ ಅಲ್ಲದೇ ಪಾಪ ಅವರಿಗೆ ಗೊತ್ತಿರುದು ಬಿಜೆಪಿ ಬಗ್ಗೆ ಮಾತ್ರ, ಅವರು ಅಷ್ಟಕ್ಕೇ ಹೇಳಬೇಕು. ಇನ್ನು ದಲಿತ ಸಮುದಾಯಕ್ಕೆ ಸಿಎಂ ಸ್ಥಾನ ಸಿಗೋಲ್ಲ ಎಂಬುದು ಅವರ ಅನಿಸಿಕೆ ಇರಬಹುದು. ಆದರೆ ನಮ್ಮ ಅನಿಸಿಕೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಎಲ್ಲರಿಗೂ ಅವಕಾಶ ಕೊಡುತ್ತಾರೆ. ಪರೋಕ್ಷವಾಗಿ ಮುಂದೆ ದಲಿತರಿಗೆ ಸಿಎಂ ಅವಕಾಶ ಸಿಗುತ್ತದೆ ಎನ್ನುವ ಮೂಲಕ ಮತ್ತೆ ಕಾಂಗ್ರೆಸ್​​ನಲ್ಲಿ ದಲಿತ ಸಿಎಂ ಸ್ಥಾನದ ಕೂಗು ಮುನ್ನಲೆಗೆ ಬಂದಿದೆ.

ಇದೇ ವೇಳೆ ಕ್ಷೇತ್ರ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನಾನು ಕಳೆದು ಹದಿನೈದು ವರ್ಷಗಳಿಂದ ಕೊರಟಗೆರೆಯಲ್ಲಿದ್ದೇನೆ. 25 ವರ್ಷ ಮಧುಗಿರಿಯಲ್ಲಿದ್ದೆ.ಮೀಸಲು ಕ್ಷೇತ್ರ ಆದ ಮೇಲೆ ಕೊರಟಗೆರೆಗೆ ಬಂದೆ. ಮೂರು ಬಾರಿ ಅಲ್ಲಿಂದ ಆಯ್ಕೆ ಆಗಿದ್ದೇನೆ. ಈಗ ಕ್ಷೇತ್ರದಲ್ಲಿ ನಾನು ಇದ್ದೇನೆ. ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದೇನೆ. ನನ್ನ ಆಯ್ಕೆ ಮಾಡಿದ ಜನರಿಗೆ ಸೇವೆ ಮಾಡುತ್ತಿದ್ದೇನೆ. ಪ್ರತಿ ದಿನ ಬೆಳಿಗ್ಗೆ ಕ್ಷೇತ್ರಕ್ಕೆ ಹೋಗ್ತಾ ಇದ್ದೇನೆ ಇದರ ಅರ್ಥವೇನು, ಒಬ್ಬೊಬ್ಬರು ಒಂದೊಂದು ರೀತಿ ವ್ಯಾಖ್ಯಾನ ಮಾಡ್ತಾರೆ‌ ಎಂದು ಕ್ಷೇತ್ರದ ಬದಲಾವಣೆ ಗೊಂದಲಕ್ಕೆ ಡಾ.ಜಿ ಪರಮೇಶ್ವರ ತೆರೆ ಎಳೆದಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments