Thursday, September 11, 2025
HomeUncategorizedಅಪರೂಪದ ಗುಲಾಬಿ ಬಣ್ಣದ ಡಾಲ್ಫಿನ್

ಅಪರೂಪದ ಗುಲಾಬಿ ಬಣ್ಣದ ಡಾಲ್ಫಿನ್

ನಾವೆಲ್ಲರೂ ಡಾಲ್ಫಿನ್ ವಿಡಿಯೋಗಳನ್ನು ಸಾಮಾನ್ಯವಾಗಿ ನೋಡಿರುತ್ತೇವೆ. ಈ ಬುದ್ಧಿವಂತ ಪ್ರಾಣಿಗಳು ಜೀವಗಳನ್ನು ಉಳಿಸುವ ಅಥವಾ ತುಂಬಾ ತಮಾಷೆಯಾಗಿರುವ ವೈರಲ್‌ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಲಭ್ಯವಿದೆ.

ಸಾಗರದ ಜಗತ್ತು ಸಾಮಾನ್ಯ ಪ್ರಪಂಚಕ್ಕಿಂತ ಬಹಳ ಭಿನ್ನವಾಗಿದೆ. ಅಲ್ಲಿನ ತಾಪಮಾನ, ಸಸ್ಯಗಳು, ಕೀಟಗಳು, ಪ್ರಾಣಿಗಳು ಎಲ್ಲವೂ ನೆಲದ ಮೇಲಿನ ಪ್ರಪಂಚಕ್ಕಿಂತ ವಿಭಿನ್ನವಾಗೇ ಇರುತ್ತದೆ. ಸಾಗರ ನಿಗೂಢ ರಹಸ್ಯಗಳ ಆಗರವನ್ನೇ ತುಂಬಿಕೊಂಡಿದ್ದು, ಇನ್ನೂ ಆನೇಕ ಪ್ರಭೇದಗಳ ಸಸ್ಯ, ಪ್ರಾಣಿಗಳು ಜನರ ಕಣ್ಣಿಗೆ ಪತ್ತೆಯಾಗದೆ ಉಳಿದಿವೆ.

ಇದೇ ರೀತಿ, ಇತ್ತೀಚಿನ ಬೆಳವಣಿಗೆಯಲ್ಲಿ, ಗುಲಾಬಿ ಅಥವಾ ಪಿಂಕ್ ಬಣ್ಣದ ಡಾಲ್ಫಿನ್ ಅನ್ನು ಕ್ಯಾಮರಾದಲ್ಲಿ ರೆಕಾರ್ಡ್ ಮಾಡಲಾಗಿದೆ ಮತ್ತು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಈ ವಿಡಿಯೋಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ವಿಡಿಯೋವನ್ನು ಅನೇಕರು ಶೇರ್‌ ಮಾಡಿಕೊಂಡಿದ್ದಾರೆ.

ಈ ವಿಡಿಯೋವನ್ನು ಸೋಲೋ ಪ್ಯಾರಾ ಕ್ಯೂರಿಯೋಸಿಸ್‌ ಎಂಬ ಟ್ವಿಟ್ಟರ್‌ ಬಳಕೆದಾರ ಮೊದಲ ಬಾರಿಗೆ ಈ ಪಿಂಕ್‌ ಡಾಲ್ಫಿನ್‌ ವಿಡಿಯೋವನ್ನು ಟ್ವಿಟ್ಟರ್‌ನಲ್ಲಿ ಅಪ್ಲೋಡ್‌ ಮಾಡಿದ್ದಾರೆ.”ನೀವು ಇದುವರೆಗೆ ಪಿಂಕ್ ಡಾಲ್ಫಿನ್‌ ಅನ್ನು ನೋಡಿಲ್ಲದಿದ್ದರೆ” ಎಂಬ ಕ್ಯಾಪ್ಷನ್‌ ಅನ್ನೂ ಸುಶಾಂತ್‌ ನಂದಾ ತಮ್ಮ ಫಾಲೋವರ್ಸ್‌ಗಳಿಗೆ ಪಿಂಕ್ ಡಾಲ್ಫಿನ್‌ ವಿಡಿಯೋ ಶೇರ್‌ ಮಾಡಿದ್ದಾರೆ.ಹಲವರು ಈ ಅಪರೂಪದ ಡಾಲ್ಫಿನ್‌ ಬಗ್ಗೆ ಆಶ್ಚರ್ಯವನ್ನೂ ವ್ಯಕ್ತಪಡಿಸಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments