Wednesday, September 3, 2025
HomeUncategorizedಬೆಂಗಳೂರಿಗಿಲ್ಲ ಕಾವೇರಿ ನೀರಿನ ಸಮಸ್ಯೆ.!

ಬೆಂಗಳೂರಿಗಿಲ್ಲ ಕಾವೇರಿ ನೀರಿನ ಸಮಸ್ಯೆ.!

ಬೆಂಗಳೂರು: ಸಿಲಿಕಾನ್​ ಸಿಟಿ ಬೆಳೆದಂತೆ ಬೆಂಗಳೂರಿನ ಜನತೆಗೆ ಕಾವೇರಿ ನೀರು ಪೂರೈಕೆ ಮಾಡೋದು ಜಲಮಂಡಳಿಗೆ ಸವಾಲಿನ ಕೆಲಸವಾಗಿದೆ. ಪ್ರತಿ ಬಾರಿ ಬೇಸಿಗೆ ಶುರುವಾದಾಗ ಜಲಮಂಡಳಿ ಇನ್ನಿಲ್ಲದ ಕಸರತ್ತು ನಡೆಸುತ್ತದೆ. ಆದ್ರೆ ಈ ಬಾರಿ ಮಳೆಗಾಲ ಮುನ್ನ ಸಾಕಷ್ಟು ಮಳೆಯಾದ ಪರಿಣಾಮ ನೀರಿನ ಸಮಸ್ಯೆ ಅಷ್ಟೊಂದು ಆಗಿಲ್ಲ. ಜಲಾಶಯಗಳು ಬಹುತೇಕ ಭರ್ತಿಯಾಗಿದೆ. ಇಡೀ ಬೆಂಗಳೂರು ಮಂದಿಗೆ ನೀರು ಪೂರೈಸೋ ಕಾವೇರಿ ತುಂಬಿ ಹರಿದಿದ್ದು, ನಗರಕ್ಕೆ ನೀರಿನ ಆತಂಕ ದೂರವಾಗಿದೆ.

KRS ನೀರಿನ ಮಟ್ಟ 73 ಅಡಿ ದಾಟುತ್ತಿದ್ದಂತೆ ಪ್ರತಿ ವರ್ಷ ಕೃಷಿ ಚಟುವಟಿಕೆಗೆ ನೀರು ಬಿಡುವ ಪದ್ಧತಿ ಇದೆ. ಬೆಂಗಳೂರು ಸೇರಿದಂತೆ KRS ಭಾಗದ ನಗರ ಪಟ್ಟಣಗಳಿಗೆ ಕುಡಿಯುವ ಉದ್ದೇಶಕ್ಕೆ ತಿಂಗಳಿಗೆ 1.25 ಟಿಎಂಸಿ ಪ್ರಮಾಣದ ನೀರು ಅಗತ್ಯ ಇದೆ. ಹಾಲಿ ಇರುವ ನೀರಿನ ಪ್ರಮಾಣದಲ್ಲಿ ಮುಂದಿನ ವರ್ಷದವರಿಗೂ ಯಾವುದೇ ಸಮಸ್ಯೆ ಇರೋದಿಲ್ಲ. ಜಲಾಶಯದ ನೀರಿನ ಗರಿಷ್ಠ ಪ್ರಮಾಣ 123 ಟಿಎಂಸಿ ಅಡಿ. ಇದೀಗ ಜಲಾಶಯದಲ್ಲಿ ಸಾಕಷ್ಟು ನೀರು ಸಂಗ್ರಹವಿದ್ದು, ಮುಂದಿನ ದಿನಗಳಲ್ಲಿ ಜಲಾಶಯ ಭರ್ತಿಯಾಗುವ ನಿರೀಕ್ಷೆ ಇದೆ.

ಬೇಸಿಗೆ ವೇಳೆ ಕುಡಿಯುವ ನೀರನ್ನು ಮಿತವ್ಯಯವಾಗಿ ಬಳಸುವಂತೆ ಬೆಂಗಳೂರಿನ ಜನರಿಗೆ ಜಲಮಂಡಳಿ ಸೂಚಿಸಿತ್ತು. ಆದರೆ ಮೇ ಆರಂಭದಿಂದ್ಲೇ ವರುಣ ಕೃಪೆ ನೀಡಿದ್ದು, ಹಳ್ಳ ಕೊಳ್ಳ, ಕೆರೆ ಕಟ್ಟೆಗಳು ತುಂಬಿ ಅಂತರ್ಜಲ ಮಟ್ಟ ಸುಧಾರಿಸಿದೆ. ಹೀಗಾಗಿ ಇರುವ ನೀರನ್ನ ಸಮರ್ಪಕವಾಗಿ ಪೂರೈಸಲು ಜಲ ಮಂಡಳಿ ತೀರ್ಮಾನಿಸಿದೆ.

ಒಟ್ಟಿನಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಜನ ಹನಿ ನೀರಿಗೂ ಪರದಾಡುತ್ತಿದ್ರು. ಆದರೆ ಈ ಬಾರಿ ಬೇಕಾಗುವಷ್ಟು ಮಳೆ ಸುರಿದಿದೆ. ಇರುವ ನೀರನ್ನ ಎಷ್ಟರ ಮಟ್ಟಿಗೆ ಸಮರ್ಪಕವಾಗಿ ಪೂರೈಕೆ ಮಾಡ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

RELATED ARTICLES
- Advertisment -
Google search engine

Most Popular

Recent Comments