Wednesday, September 3, 2025
HomeUncategorizedಸಿಲಿಕಾನ್​ ಸಿಟಿಯಲ್ಲಿ ಪಿಯು ಕೋರ್ಸ್​ಗೆ ಹೆಚ್ಚಿದ ಡಿಮ್ಯಾಂಡ್

ಸಿಲಿಕಾನ್​ ಸಿಟಿಯಲ್ಲಿ ಪಿಯು ಕೋರ್ಸ್​ಗೆ ಹೆಚ್ಚಿದ ಡಿಮ್ಯಾಂಡ್

ಬೆಂಗಳೂರು: ವಿದ್ಯಾರ್ಥಿಗಳು SSLC ಪರೀಕ್ಷೆ ಮುಗಿದ ನಂತರ ಪ್ರತಿಷ್ಠಿತ ಕಾಲೇಜ್ ಆಯ್ಕೆ ಮಾಡಿಕೊಳ್ಳಲು ಮುಂದಾಗ್ತಾರೆ. ಈ ಬಾರಿ ಶೇ. 85.63% ವಿದ್ಯಾರ್ಥಿಗಳು SSLCಯಲ್ಲಿ ಪಾಸ್ ಆಗಿದ್ದಾರೆ. ಜೊತೆಗೆ ಈ ಸಲದ SSLC ಪರೀಕ್ಷೆಯಲ್ಲಿ 625 ಅಂಕಕ್ಕೆ 625 ಅಂಕವನ್ನ 145 ಮಕ್ಕಳು ಪಡೆದುಕೊಂಡಿದ್ದಾರೆ. ಹೀಗೆ ಉತ್ತಮ ರ್ಯಾಕ್ ಪಡೆದು ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಹೀಗಾಗಿ ಸೀಟ್ ಸಿಗುವುದು ಎಲ್ಲಿ ಕಷ್ಟವಾಗುತ್ತದೋ ಎಂದು ವಿದ್ಯಾರ್ಥಿಗಳಿಗೆ, ಪೋಷಕರಿಗೆ ಆತಂಕ ಶುರುವಾಗಿದೆ.

ನಗರದ ಪ್ರತಿಷ್ಠಿತ ಕಾಲೇಜ್ ಗಳಾದ RV ಕಾಲೇಜ್, ಜೈನ್ ಕಾಲೇಜ್, ಸೇರಿದಂತೆ ಮಹಾರಾಣಿ ಲಕ್ಷ್ಮಿ ಅಮ್ಮಣಿ ಕಾಲೇಜ್, MES ಕಾಲೇಜುಗಳಲ್ಲಿ ಅಪ್ಲಿಕೇಶನ್ ಹಂಚಿಕೆಯ ದಿನಾಂಕ ಮುಗಿದಿದೆ. ಅಷ್ಟೇ ಅಲ್ಲ ಅಪ್ಲಿಕೇಶನ್ ಸಬ್ಜೆಕ್ಟ್ ಮಾಡುವ ದಿನಾಂಕ ಕೂಡ ಮುಕ್ತಾಯ ಆಗಿದೆ. ರಿಸಲ್ಟ್ ಬಂದ ಒಂದೇ ವಾರಕ್ಕೆ ಬಹುತೇಕ ಎಲ್ಲಾ ಕಾಲೇಜುಗಳಲ್ಲಿ ಅಪ್ಲಿಕೇಶನ್‌ಗಳು ಸೋಲ್ಡ್ ಔಟ್ ಆಗಿವೆ. ಪ್ರತಿಯೊಂದು ಕಾಲೇಜಿನಲ್ಲೂ ಕೂಡ 800 ಸೀಟುಗಳಿಗೆ ಆರು ಸಾವಿರಕ್ಕೂ ಹೆಚ್ಚು ಜನ ಅಪ್ಲಿಕೇಶನ್ ಹಾಕಿದ್ದಾರೆ.

ಈ ಬಾರಿ ಹೆಚ್ಚು ವಿದ್ಯಾರ್ಥಿಗಳು ಪಾಸ್ ಆದ ಹಿನ್ನೆಲೆಯಲ್ಲಿ ಸೀಟ್ ಸಿಗುವುದು ಕಷ್ಟಸಾಧ್ಯವಾಗಿದೆ. ಕೇವಲ ಡಿಸ್ಟಿಂಕ್ಷನ್ ತೆಗೆದ ವಿದ್ಯಾರ್ಥಿಗಳಿಗೆ ಮಾತ್ರ ಸೈನ್ಸ್ ಹಾಗೂ ಕಾಮರ್ಸ್ ವಿಭಾಗದಲ್ಲಿ ಸೀಟ್​ ಸಿಗುತ್ತಿವೆ. ಪಾಸ್ ಆದ ಬಹುತೇಕ ವಿದ್ಯಾರ್ಥಿಗಳು ವಿಜ್ಕ್ಷಾನ ಮತ್ತು ವಾಣಿಜ್ಯ ವಿಷಯಕ್ಕೆ ಹೆಚ್ಚಿನ ಆದ್ಯತೆ ನೀಡ್ತಿದ್ದಾರೆ. ಇನ್ನು ಸೀಟ್ ಬ್ಲಾಕಿಂಗ್​ಗೆ ಅವಕಾಶ ಮಾಡಿಕೊಡದೆ ಪಿಯು ಕೊಟ್ಟ ಮಾರ್ಗದರ್ಶನ ದಂತೆ ಅಡ್ಮಿಷನ್ ಮಾಡಿಕೊಳ್ಳಲು ಕಾಲೇಜುಗಳಿಗೆ, ಪಿಯು ಇಲಾಖೆ ಸೂಚಿಸಿದೆ. ಯಾವ ಮಕ್ಕಳಿಗೂ ತೊಂದರೆಯಾಗಲ್ಲ ಪ್ರತಿಯೊಬ್ಬರಿಗೂ ಸೀಟ್ ಆಗುತ್ತೆ ಅನ್ನುವ ಭರವಸೆಯನ್ನ ಶಿಕ್ಷಣ ಇಲಾಖೆ ನೀಡುತ್ತಿದೆ

ಶಿಕ್ಷಣ ಸಚಿವರೇನೋ ಪ್ರತಿಯೊಬ್ಬರಿಗೂ ಸೀಟ್ ಸಿಗುತ್ತೆ ಅಂತಾ ಆಶ್ವಾಸನೆ ನೀಡ್ತಿದ್ದಾರೆ. ಒಂದು ವೇಳೆ ವಿದ್ಯಾರ್ಥಿಗಳಿಗೆ ಸೀಟ್ ಸಿಗದಿದ್ರೆ ಹೊಸ ಕಾಲೇಜ್ ಓಪನ್ ಮಾಡ್ತಾರಾ? ಅಥವಾ ಸರ್ಕಾರಿ ಕಾಲೇಜುಗಳಲ್ಲಿ ಸೀಟ್ ಜಾಸ್ತಿ ಮಾಡುತ್ತಾರಾ ಅಂತ ಕಾದು ನೋಡಬೇಕಿದೆ.

RELATED ARTICLES
- Advertisment -
Google search engine

Most Popular

Recent Comments