Sunday, September 7, 2025
HomeUncategorizedನದಿಗೆ ಉರುಳಿ ಬಿದ್ದ ಬಸ್‌..7 ಯೋಧರು ಸಾವು..!

ನದಿಗೆ ಉರುಳಿ ಬಿದ್ದ ಬಸ್‌..7 ಯೋಧರು ಸಾವು..!

ನವದೆಹಲಿ : ಸೇನಾ ಯೋಧರು ತೆರಳುತ್ತಿದ್ದ ಬಸ್ ಅಪಘಾತಗೊಂಡು ಪ್ರಪಾತದಲ್ಲಿರುವ ನದಿ ಉರುಳಿದ ಘಟನೆ ಲಡಾಖ್‌ನ ತುರ್ತುಕ್‌ನಲ್ಲಿ ನಡೆದಿದೆ. ಶ್ಯೋಕ್ ನದಿಗೆ ಬಸ್ ಉರುಳಿ ಬಿದ್ದ ಪರಿಣಾಮ 7 ಯೋಧರು ಸ್ಥಳದಲ್ಲೇ ಸಾವನ್ನಪ್ಪಿದ್ದು, 17 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಪರ್ತಾಪುರದ ಟ್ರಾನ್ಸಿಟ್ ಕ್ಯಾಂಪ್ನಿಂದ ತೆರಳಿದ ಬಸ್ ಥೋಯಿಸ್ನಿಂದ 25 ಕಿಲೋಮೀಟರ್ ದೂರದಲ್ಲಿ ಬಸ್ ಅಪಘಾತ ಸಂಭವಿಸಿದೆ. ಬಸ್ನಲ್ಲಿ 26 ಯೋಧರು ಪ್ರಯಾಣಿಸುತ್ತಿದ್ದರು. 50 ರಿಂದ 60 ಅಡಿ ಆಳಕ್ಕೆ ಬಿದ್ದಿರುವ ಕಾರಣ ಬಸ್ನಲ್ಲಿನ ಎಲ್ಲ ಯೋಧರಿಗೂ ಗಾಯಗಳಾಗಿದೆ.

ಬಸ್ ಸಂಪೂರ್ಣ ನಜ್ಜು ಗುಜ್ಜಾಗಿದೆ.ಗಾಯಗೊಂಡ ಯೋಧರನ್ನು ಪಾರ್ತಾಪುರದಲ್ಲಿರುವ 404 ಫೀಲ್ಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರಗೊಂಡಿರುವ ಕಾರಣ ಲೇಹ್ನಲ್ಲಿ ಸೇನಾ ವೈದ್ಯಕೀಯ ಸಿಬ್ಬಂದಿಗಳ ತಂಡ ಪರ್ತಾಪುರ್ಗೆ ತೆರಳಿ ಚಿಕಿತ್ಸೆ ನೀಡುತ್ತಿದೆ.

ಘಟನೆ ನಡೆದ ಬೆನ್ನಲ್ಲೇ ಸೇನೆ ತಕ್ಷಣವೇ ಸ್ಥಳಕ್ಕೆ ತೆರಳಿ ಎಲ್ಲಾ ಯೋಧರನ್ನು ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, 7 ಯೋಧರು ಬದುಕುಳಿಯಲಿಲ್ಲ. ಗಂಭೀರವಾಗಿ ಗಾಯಗೊಂಡಿರುವ ಯೋಧರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಲವರನ್ನು ಸೇನಾ ಆಸ್ಪತ್ರೆಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.

RELATED ARTICLES
- Advertisment -
Google search engine

Most Popular

Recent Comments