Thursday, September 11, 2025
HomeUncategorizedಮತ್ತೆ ಠಾಣೆ ಮೆಟ್ಟಿಲೇರಿದ ನಟಿ ಚೈತ್ರಾ ಪೋತರಾಜ್..!

ಮತ್ತೆ ಠಾಣೆ ಮೆಟ್ಟಿಲೇರಿದ ನಟಿ ಚೈತ್ರಾ ಪೋತರಾಜ್..!

ಬೆಂಗಳೂರು: ಚೈತ್ರಾ ಪೋತರಾಜ್ ಆಲಿಯಾಸ್ ಚೈತ್ರಾ ಹಳ್ಳಿಕೇರಿ. ರಿಷಿ ಸಿನಿಮಾ ಸೇರಿ ಹಲವು ಸಿನಿಮಾ ಹಾಗೂ ಖಾಸಗಿ ಚಾನಲ್ ನಲ್ಲಿ ಕುಕ್ಕರಿ ಶೋಗಳಲ್ಲಿ ಕಾಣಿಸಿಕೊಂಡಿರುವ ನಟಿ. 2018ರಲ್ಲಿ ಚೈತ್ರಾ ಪೋತರಾಜ್ ಗಂಡ ಬಾಲಾಜಿ ಪೋತರಾಜ್ ಮೇಲೆ ಬಸವನಗುಡಿ ಮಹಿಳಾ ಠಾಣೆಗೆ ದೂರು ಕೊಟ್ಟಿದ್ರು. ಗಂಡ ತನಗೆ ಹಲ್ಲೆ ಮಾಡಿದ್ದಾರೆ, ಹಿಂಸೆ ಕೊಡ್ತಾ ಇದಾರೆ ಗಂಡನನ್ನ ಕರೆಸಿ ಬುದ್ದಿವಾದ ಹೇಳಿ ಅಂತ ದೂರು ದಾಖಲಿಸಿದ್ರು. ಆ ಸುದ್ದಿ ನಡೆದು ನಾಲ್ಕು ವರ್ಷ ಆಗಿತ್ತು. ನಾಲ್ಕು ವರ್ಷದ ನಂತರ ಈಗ ಮತ್ತೆ ಗಂಡ ಹಾಗೂ ಮಾವನ ವಿರುದ್ಧ ಮೈಸೂರಿನ‌ ಜಯಲಕ್ಷ್ಮಿ ಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಚೈತ್ರಾ ಹಳ್ಳಿಕೇರಿ ಹೆಸರಿನಲ್ಲಿ ಗಂಡ ಬಾಲಾಜಿ ಪೋತರಾಜ್ ಮಾವ ಪೋತರಾಜ್ ಈಕೆಗೆ ಗೊತ್ತಿಲ್ಲದೇ ಬ್ಯಾಂಕ್ ಅಕೌಂಟ್ ಓಪನ್ ಮಾಡಿದ್ದಾರೆ ಅಂತೆ. ಬ್ಯಾಂಕ್ ಮ್ಯಾನೇಜರ್ ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರಂತೆ. ಜೊತೆಗೆ ಚೈತ್ರಾ ಬಳಿ ಇದ್ದ ಬಂಗಾರದ ಒಡವೆ ಗಂಡನ ಮನೆಯವರೇ ಇಟ್ಟುಕೊಂಡಿದ್ದಾರಂತೆ. ಅಷ್ಟೇ ಅಲ್ಲ ಚೈತ್ರಾ ಹೆಸರಿನ ಅಕೌಂಟ್‌ನಲ್ಲಿ ಸಾಕಷ್ಟು ಹಣ ಕೂಡ ಟ್ರಾಂಜಾಕ್ಷನ್‌ ಆಗಿದೆಯಂತೆ.

2018 ರಲ್ಲಿ ಗಂಡನ ವಿರುದ್ಧ ದೂರು ಕೊಟ್ಟಿದ್ದ ಚೈತ್ರಾ, ನಾಲ್ಕು ವರ್ಷ ಗಂಡನ‌ ಜೊತೆಯಲ್ಲೇ ಸಂಸಾರ ಮಾಡಿ ಈಗ ಗಂಡ ಹಾಗೂ ಮಾವನ ವಿರುದ್ಧ ಅಕೌಂಟ್ ವಿಚಾರದಲ್ಲಿ ದೂರು ಕೊಟ್ಟಿದ್ದಾರೆ ಅಂದ್ರೆ ಏನರ್ಥ. ನಾಲ್ಕೂ ವರ್ಷದಿಂದ ಅಕೌಂಟ್ ಬಗ್ಗೆ ಮಾಹಿತಿ ಇರಲಿಲ್ಲವಲ್ಲ. ಮಾಹಿತಿ ಇದ್ರೂ ನಾಲ್ಕು ಗೋಡೆ ಮಧ್ಯೆ ಬಗೆಹರಿಸಿಕೊಳ್ಳಬೇಕಾದ ವಿಚಾರವನ್ನ ಮಾಧ್ಯಮದ ಮುಂದೆ ತಂದಿದ್ದು ಯಾಕೆ ? ಹೀಗೆ ಹತ್ತಾರು ಪ್ರಶ್ನೆಗಳು ಎದ್ದಿವೆ .‌ಇದಕ್ಕೆ ಉತ್ತರ ಸಿಗಬೇಕಾದ್ರೆ ಆಕೆ ಗಂಡ‌ ಬಾಲಾಜಿ ಪೋತರಾಜ್ ಮಾತನಾಡಬೇಕಾಗಿದೆ.

RELATED ARTICLES
- Advertisment -
Google search engine

Most Popular

Recent Comments