Friday, August 29, 2025
HomeUncategorizedದಲಿತ ಸ್ವಾಮೀಜಿ ಬಾಯಿಯಿಂದ ಎಂಜಲು ಊಟ ತಿಂದ ಜಮೀರ್

ದಲಿತ ಸ್ವಾಮೀಜಿ ಬಾಯಿಯಿಂದ ಎಂಜಲು ಊಟ ತಿಂದ ಜಮೀರ್

ಬೆಂಗಳೂರು: ಜಾತಿ, ಧರ್ಮಗಳನ್ನು ಮೀರಿದ್ದು ಮಾನವೀಯತೆ ನಮ್ಮೆಲ್ಲರ ಜಾತಿ ಒಂದೇ ಅದುವೇ ಮನುಷ್ಯ ಜಾತಿ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.

ನಗರದಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ದಲಿತ ಸ್ವಾಮೀಜಿ ಬಾಯಿಯಿಂದ ಊಟ ತೆಗದುಕೊಂಡು ತಿಂದ ಶಾಸಕ ಜಮೀರ್ ಅಹಮದ್ ಖಾನ್ ಜಾತಿ, ಧರ್ಮಗಳಿಗೆ ಮಿಗಿಲಾದದ್ದು ಮಾನವೀಯತೆ ಎಂದು ಶಾಸಕ ಜಮೀರ್ ಹೇಳಿದ್ದಾರೆ.

ಇನ್ನು, ಪಾದರಾಯನಪುರದಲ್ಲಿ ಡಾ.ಅಂಬೇಡ್ಕರ್ ಜಯಂತಿ ಮತ್ತು ಈದ್ ಮಿಲಾದ್ ಕಾರ್ಯಕ್ರಮದಲ್ಲಿ, ಬಿಬಿಎಂಪಿಯ ಪೌರ ಕಾರ್ಮಿಕರಿಗೆ ತಮ್ಮ ಕೈಯ್ಯಾರೆ ಭೋಜನ ಉಣಬಡಿಸಿದ ಜಮೀರ್ ದಲಿತ ಮತ್ತು ಇಸ್ಲಾಂ ಧರ್ಮ ಗುರುಗಳ ತಟ್ಟೆಯಿಂದ ತುತ್ತು ತೆಗೆದುಕೊಂಡು ಸ್ವೀಕರಿಸಿದ ಜಮೀರ್ ನಾವೆಲ್ಲರೂ ಮನುಷ್ಯ ಜಾತಿಗೆ ಸೇರಿದವರು. ಮನುಷ್ಯರಾಗಿ ಬಾಳುವುದೇ ನಿಜವಾದ ಧರ್ಮ. ಮನುಷ್ಯ ಸಂಬಂಧಗಳಿಗೆ ಜಾತಿ, ಧರ್ಮ ಎಂದಿಗೂ ಅಡ್ಡಿಯಾಗದು ನಾವೆಲ್ಲರೂ ಸಹೋದರರಂತೆ ಬಾಳಬೇಕು ಎಂದರು.

ಅದುವಲ್ಲದೇ, ಉತ್ತರ ಪ್ರದೇಶದಲ್ಲಿ ದಲಿತರು ಅಡಿಗೆ ಮಾಡಿದ್ದಾರೆ ಅಂತ ಸ್ಕೂಲ್ ನಲ್ಲಿ ಊಟ ಮಾಡಲಿಲ್ಲ. ಅದನ್ನು ನೋಡಿ ನನಗೆ ನೋವಾಯ್ತು ಈ ದೇಶ ಯಾವ ಕಡೆ ಹೋಗ್ತಿದೆ ಅಂತ ಅದಕ್ಕೆ ನಾನು ದಲಿತ ಸ್ವಾಮೀಜಿ ನಾಗರಾಜ್ ಅಂತ ಅವರ ಬಾಯಿಯಿಂದ ಎಂಜಲು ಊಟ ತಿಂದಿದ್ದೇನೆ. ಜಾತಿ ಮತ ಬೇಧ ಬೇಡ ಅಂತ ಜಮೀರ್ ಅಹ್ಮದ್ ಖಾನ್ ಮನವಿಯನ್ನು ಮಾಡಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments